ಉತ್ತಮ ಸಮಾಜಕ್ಕಾಗಿ

ಮಕ್ಕಳ ಚಲನಚಿತ್ರೋತ್ಸವ ಜ.27ರಿಂದ

1

ಬೆಳಗಾವಿ, ಜನವರಿ 18 ಜಿಲ್ಲೆಯಲ್ಲಿ ಇದೇ ಜನವರಿ 27ರಿಂದ ಫೆಬ್ರುವರಿ 2ರವರೆಗೆ ‘ಮಕ್ಕಳ ಚಲನಚಿತ್ರೋತ್ಸವ’ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಿಳಿಸಿದ್ದಾರೆ.
‘ಮಕ್ಕಳ ಚಲನಚಿತ್ರೋತ್ಸವ’ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ(ಜ.18) ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಚಲನಚಿತ್ರಗಳನ್ನು ಪ್ರತಿವರ್ಷ ಪ್ರದರ್ಶಿಸಲಾಗುತ್ತಿದ್ದು, ಆ ಪ್ರಕಾರ ಪ್ರಸಕ್ತ ಸಾಲಿನ ಚಿತ್ರೋತ್ಸವ ಜ.27ರಿಂದ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿನ ಮಕ್ಕಳಿಗೆ ‘ಮಾನಿತ’ ಕನ್ನಡ ಚಲನಚಿತ್ರವನ್ನು ತೋರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಚಲನಚಿತ್ರಮಂದಿರದಲ್ಲಿ ಪ್ರತಿ ವಿದ್ಯಾರ್ಥಿಗೆ 15 ರೂಪಾಯಿ ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ಚಿತ್ರಮಂದಿರಗಳಲ್ಲಿ 10 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ 8.30ರಿಂದ 10.30ರವರೆಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಬೆಳಗಾವಿ ನಗರದಲ್ಲಿ ಐನಾಕ್ಸ್ ಹಾಗೂ ಬಿಗ್ ಸಿನೆಮಾ ಚಿತ್ರಮಂದಿರಗಳಲ್ಲಿರುವ ಐದು ಪರದೆಗಳಲ್ಲಿ ಮಕ್ಕಳ ಚಿತ್ರ ಪ್ರದರ್ಶನಗೊಳ್ಳಲಿದೆ. ಉಳಿದಂತೆ ಆಯಾ ತಾಲ್ಲೂಕು ಕೇಂದ್ರ ಹಾಗೂ ಪಟ್ಟಣಗಳಲ್ಲಿ ಇರುವ ಚಿತ್ರಮಂದಿರಗಳಲ್ಲಿ ಚಿತ್ರೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಒತ್ತಾಯ ಮಾಡದಂತೆ ಸೂಚನೆ:

ಚಲನಚಿತ್ರೋತ್ಸವದಲ್ಲಿ ಶಾಲಾ ಮಕ್ಕಳು ಸ್ವಯಂಪ್ರೇರಣೆಯಿಂದ ಭಾಗವಹಿಸುವಂತಿರಬೇಕು. ಯಾವುದೇ ಶಾಲಾ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಚಲನಚಿತ್ರೋತ್ಸವಕ್ಕೆ ಕರೆತರಬಾರದು ಎಂದು ಜಿಲ್ಲಾಧಿಕಾರಿ ಜಯರಾಮ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಧ್ಯವಾದಷ್ಟು ಚಿತ್ರಮಂದಿರದ ಸಮೀಪದಲ್ಲಿರುವ ಶಾಲಾ ಮಕ್ಕಳನ್ನು ಕರೆತರಬೇಕು ಎಂದು ತಿಳಿಸಿದರು.
ನೂರಾರು ಮಕ್ಕಳು ಚಿತ್ರ ವೀಕ್ಷಣೆಗೆ ಆಗಮಿಸುವುದರಿಂದ ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸಬೇಕು ಹಾಗೂ ಕುಡಿಯಲು ಶುದ್ಧ ನೀರನ್ನು ಉಚಿತವಾಗಿ ಪೂರೈಸಬೇಕು ಎಂದು ಚಲನಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ವೈ.ಹಳಿಂಗಳಿ, ಗಜಾನನ ಮನ್ನಿಕೇರಿ, ಚಲನಚಿತ್ರಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ಅವಿನಾಶ್ ಪೋತದಾರ, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿತ್ರಮಂದಿರಗಳ ಮಾಲೀಕರು, ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆಯ ಪ್ರತಿನಿಧಿಗಳು ಸ

1 Comment
  1. L Babu says

    Really super sir I am everyday watching your news great,

Leave A Reply

 Click this button or press Ctrl+G to toggle between Kannada and English

Your email address will not be published.