ಉತ್ತಮ ಸಮಾಜಕ್ಕಾಗಿ

ಮಕ್ಕಳ ಶಿಕ್ಷಣ, ಪ್ರತಿಭೆಗೆ ಪ್ರೋತ್ಸಾಹ ನೀಡಿ: ಸಿಇಒ ರಾಮಚಂದ್ರನ್.ಆರ್

0

ಮಕ್ಕಳ ಶಿಕ್ಷಣ, ಪ್ರತಿಭೆಗೆ ಪ್ರೋತ್ಸಾಹ ನೀಡಿ: ಸಿಇಒ ರಾಮಚಂದ್ರನ್.ಆರ್

ಬೆಳಗಾವಿ : ಮಕ್ಕಳ ಸಂಸ್ಥೆಗಳಲ್ಲಿ ಯಾವುದಾದರೂ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದ್ದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿಟ್ಟುಕೊಂಡಿದ್ದರೆ ಸರಕಾರದಿಂದ ಮಂಜೂರಾತಿ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ರವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಹಾಗೂ ಸಿಬ್ಬಂದಿಗೆ “ಮಕ್ಕಳ ಪ್ರಕರಣಗಳ ನಿರ್ವಹಣೆ” ಕುರಿತು ನಗರದ ಮಹೇಶ್ವರಿ ಅಂಧಮಕ್ಕಳ ಶಾಲೆಯ ಸಭಾಗೃಹದಲ್ಲಿ ಮಂಗಳವಾರ (ಸೆ.೧೮) ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಅನಾಥ, ನಿರ್ಗತಿಕ, ನಿರ್ಲಕ್ಷಕ್ಕೆ ಒಳಗಾದ, ಚಿಂದಿ ಆಯುವ, ಭಿಕ್ಷೆ ಬೇಡುವ, ಹಾಗೂ ವಿವಿಧ ರೀತಿಯ ನ್ಯೂನತೆಗೆ ಒಳಗಾದ ಮಕ್ಕಳನ್ನು ಲಾಲನೆ ಪಾಲನೆ, ರಕ್ಷಣೆ ಪೋಷಣೆ ಹಾಗೂ ಪುರ್ನವಸತಿ ಮಾಡುವ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇಂದಿನ ಮಕ್ಕಳು, ಇಂದಿನ ಪ್ರಜೆಗಳಾಗಿದ್ದು, ನಾವು ಮಕ್ಕಳನ್ನು ದೇವರಂತೆ ಕಾಣಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಟ್ಟು , ಮಕ್ಕಳ ಶಿಕ್ಷಣ ಹಾಗೂ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ಎಂ. ಹಂಜಿ ಅವರು ಮಾತನಾಡಿ, ಅಸಹಾಯಕ ಮಹಿಳೆಯರ, ಮಕ್ಕಳ, ಅಂಗವಿಕಲರ, ಮತ್ತು ವೃದ್ದರ ಅಭಿವೃದ್ದಿಯತ್ತ ಸಂಸ್ಥೆಗಳ ಮೂಲಕ ಇಲಾಖೆ ನಿರಂತರವಾಗಿ ಸೇವೆಯಲ್ಲಿ ತೊಡಗಿರುತ್ತದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಈ ಕಾರ್ಯಾಗಾರದಿಂದ ಉಪಯುಕ್ತತೆ ಪಡೆದುಕೊಳ್ಳಬೇಕೆಂದು ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಕರೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಭಾರತಿ ಶೆಟ್ಟರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಪಾಲನೆಗೊಸ್ಕರ ಕಾರ್ಯವನ್ನು ಮಾಡುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆ ೨೦೧೫ ರ ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿರುತ್ತದೆ ಎಂದು ತಿಳಿಸಿದರು.

ಹರೀಶ ಜೋಗಿ, ಶ್ರೀಮತಿ ಅನ್ನಪೂರ್ಣ ಸಂಗಳದ, ವಿನಯ ಹಾಗೂ ಜೆ.ಟಿ. ಲೋಕೇಶ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆ ೨೦೧೫ ರಡಿಯಲ್ಲಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ////

The post ಮಕ್ಕಳ ಶಿಕ್ಷಣ, ಪ್ರತಿಭೆಗೆ ಪ್ರೋತ್ಸಾಹ ನೀಡಿ: ಸಿಇಒ ರಾಮಚಂದ್ರನ್.ಆರ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.