ಉತ್ತಮ ಸಮಾಜಕ್ಕಾಗಿ

ಮದ್ಯದ ದೊರೆ ಕೇಂದ್ರಕ್ಕಿಟ್ಟ ಬರೆ

0

 

ಮದ್ಯದ ದೊರೆ ಕೇಂದ್ರಕ್ಕಿಟ್ಟ ಬರೆ

ಸಾವಿರಾರು ಕೋಟಿ ಸಾಲಮಾಡಿ ತೀರಿಸದೆ ಲಂಡನ್ ಗೆ ಹಾರಿರುವ ವಿಜಯ್ ಮಲ್ಯ ಸಿಡಿಸಿರುವ ಬಾಂಬ್ ಗೆ ಕೇಂದ್ರವೇ ಅಲುಗಾಡಿ ಹೋಗಿದೆ.

ಒಂದೆಡೆ ಅದೇ ವಿಷಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಹಣಕಾಸು ಸಚಿವ ರಾಜೀನಾಮೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಅದು ಏನು ಅಂತಿರಾ . .

ವಿದೇಶಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಜಯ್ ಮಲ್ಯ ತಾನು ಭಾರತ ಬಿಡುವ ಮೊದಲು ಕೇಂದ್ರ ಹಣಕಾಸು ಸಚಿವ ಅರುಣ್ ಜಟ್ಲಿ ರವರನ್ನು ಬೇಟಿ ಮಾಡಿದ್ದಾಗಿಯೂ , ತಾನೂ ಲಂಡನ್ ಗೆ ಹೋಗುತ್ತಿರುವುದಾಗಿಯೂ ಮಾತನಾಡಿದ್ದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ಅರುಣ್ ಜಟ್ಲಿರವರು , ಅದೆಲ್ಲಾ ಸುಳ್ಳು , ನನ್ನನ್ನು ಯಾರು ಬೇಟಿ ಮಾಡಲಿಲ್ಲ , ವಿಜಯ್ ಮಲ್ಯ ನನ್ನನ್ನು ಸಂಧಿಸಲೇ ಇಲ್ಲ ಎನ್ನುವ ಮೂಲಕ ಮಲ್ಯ ಗೆ ಟಾಂಗ್ ನೀಡಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಜಟ್ಲಿ ರವರು ಇದೆಲ್ಲಾ ಕಟ್ಟು ಕಥೆ ಎಂದಿದ್ದಾರೆ.

ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ಸೇರಿರುವ ಮಲ್ಯ ನನ್ನು ಭಾರತಕ್ಕೆ ಗಡಿಪಾರು ಮಾಡಿ ಎಂದು ಸಲ್ಲಿಸಿದ್ದ ಅರ್ಜಿವಿಚಾರಣೆಗೆ ಲಂಡನ್ ನ್ಯಾಯಾಲಯಕ್ಕೆ ಹಾಜರಾದ ಮಲ್ಯ ಮಾಧ್ಯಮಗಳೊಂದಿಗೆ ಈ ಬಾಂಬ್ ಸಿಡಿಸಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. /////


WebTitle : ಮದ್ಯದ ದೊರೆ ಕೇಂದ್ರಕ್ಕಿಟ್ಟ ಬರೆ – Mallya says met Jaitley before leaving India

Kannada Politics News

The post ಮದ್ಯದ ದೊರೆ ಕೇಂದ್ರಕ್ಕಿಟ್ಟ ಬರೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.