ಉತ್ತಮ ಸಮಾಜಕ್ಕಾಗಿ

ಮರಣದ ನಂತರ ಕಣ್ಣು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಕರೆ

0

Donate eye after death-Call the blind to light

ಮರಣದ ನಂತರ ಕಣ್ಣು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಕರೆ

ಹಾಸನ ಸೆ ೧೫: ಪಂಚೇಂದ್ರಿಯಗಳಲ್ಲೆ ಅತಿ ಮುಖ್ಯವಾದದ್ದು ಕಣ್ಣು ಅದನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಹಾಗೂ ಮರಣದ ನಂತರ ಕಣ್ಣನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಹಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಬಿ.ಸಿ. ರವಿಕುಮಾರ್‌ರವರು ಕರೆ ನೀಡಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಸನ ಇವರ ಜಂಟಿ ಸಹಯೋಗದೊಂದಿಗೆ ಹಿಮ್ಸ್ನ ಸಭಾಂಗಣದಲ್ಲಿ ಏರ್ಪಡಿಸಿದ್ದ “೩೩ನೇ ರಾಷ್ಟಿಯ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಹಿಮ್ಸ್ ನೇತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಕವಿತ. ಸಿ.ವಿ., ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿ ಎಲ್ಲರೂ ತಮ್ಮ ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಬೇಕಾಗಿ ಮನವಿ ಮಾಡಿದರು. ಕಣ್ಣಿನ ನೇತ್ರದಾನ ಹಾಗೂ ಕಣ್ಣಿನ ಜೋಡಣೆ ವಿಧಾನದ ಬಗ್ಗೆ ಹಿಮ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ. ಪಾವನ ಆಚಾರ್ಯ ಉಪನ್ಯಾಸ ನೀಡಿದರು. ನಂತರ ಹಿಮ್ಸ್, ಬೋಧಕ ವಿದ್ಯಾರ್ಥಿಗಳಿಂದ ನೇತ್ರದಾನದ ಬಗ್ಗೆ ಕಿರುನಾಟಕ ಪ್ರದರ್ಶಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಂಕರ.ಕೆ. ಹಾಸನಾಂಬ ಲಯನ್ಸ್ ಕ್ಲಬ್ ನಿರ್ದೇಶಕರಾದ ಚಂದ್ರಶೇಖರ್, ಸಂಸ್ಥೆಯ ಹಿರಿಯ ಮತ್ತು ಕಿರಿಯ ವೈದ್ಯರುಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ನೇತ್ರತಜ್ಞ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳಾದ ಡಾ. ಜಿ.ಎಸ್.ಶ್ರೀಧರ್ ವಂದಿಸಿದರು.

The post ಮರಣದ ನಂತರ ಕಣ್ಣು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಕರೆ appeared first on Prajaa News.

Source link

ಮರಣದ ನಂತರ ಕಣ್ಣು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಕರೆ

Leave A Reply

 Click this button or press Ctrl+G to toggle between Kannada and English

Your email address will not be published.