ಉತ್ತಮ ಸಮಾಜಕ್ಕಾಗಿ

ಮಳೆ ಹಾನಿ , ಸೂಕ್ತ ಪರಿಹಾರ ನೀಡುವಂತೆ ಹೆಚ್.ಎಂ. ವಿಶ್ವನಾಥ್ ಒತ್ತಾಯ

0

ಮಳೆ ಹಾನಿ , ಸೂಕ್ತ ಪರಿಹಾರ ನೀಡುವಂತೆ ಹೆಚ್.ಎಂ. ವಿಶ್ವನಾಥ್ ಒತ್ತಾಯ

ಬಾರಿ ಮಳೆಯಿಂದ ದೊಡ್ಡ ಪ್ರಮಣದಲ್ಲಿ ಹಾನಿ ಉಂಟಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಹೆಚ್.ಎಂ. ವಿಶ್ವನಾಥ್ ಒತ್ತಾಯ ಮಾಡಿದ್ದಾರೆ.

Hassan news Today

ಹಾಸನ : ಹಿಂದೆ ಎಂದು ಆಗದಂತಹ ಅನಾಹುತ ಈ ಬಾರಿ ಮಳೆಯಿಂದ ಉಂಟಾಗಿದ್ದು, ಹಾನಿಯಾಗಿರುವವರಿಗೆಲ್ಲಾ ಸೂಕ್ತ ಪರಿಹಾರ ನೀಡುವಂತೆ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಗತ್ತಿಗೆ ಉಸಿರಾಡಲು ಹೇರಳವಾಗಿ ಸಿಗುವ ಆಮ್ಲಜನಕವನ್ನು ಒದಗಿಸುವ ನದಿ ಮೂಲವಾದ ಪಶ್ಚಿಮಘಟ್ಟ ಇಂದು ಅಕ್ಷರಷಹ ಅಪಾಯದ ಸ್ಥಿತಿಯಲ್ಲಿದೆ ಎಂದು ಆತಂಕವ್ಯಕ್ತಪಡಿಸಿದರು.

ವಾಡಿಕೆಗಿಂತ ಶೇಕಡ 60 ರಿಂದ 70 ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಅನೇಕ ಮನೆಗಳು, ಆಸ್ತಿ ಎಲ್ಲಾ ನಷ್ಟವಾಗಿದ್ದು, ಅತಿವೃಷ್ಟಿ ಸಂಭವಿಸಿರುವ ಪ್ರದೇಶದ ಜನರಿಗೆ ರಾಷ್ಟ್ರೀಯ ವಿಪತ್ತು ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದರು

ನಾಡಿನ ಪ್ರಮುಖ ಬೆಳೆಗಳಾದ ಕಾಫಿ,ಏಲಕ್ಕಿ ಮತ್ತು ಅಡಿಕೆ ಮೇಲೆ ರೈತರು ಪಡೆದಿರುವ 6.500 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿ ಹೊಸ ಸಾಲ ಮಂಜೂರಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಭೂಮಿ ಕಳೆದು ಕೊಂಡ ನಿರಾಶ್ರಿತರಿಗೆ ಸರ್ಕಾರಿ ಜಾಗ ನೀಡಬೇಕು

ಸಕಲೇಶಪುರ ತಾಲ್ಲೂಕಿನ ಘಟ್ಟ ಪ್ರದೇಶದಲ್ಲಿ ಭೂಕುಸಿತದಿಂದ ಭೂಮಿಕಳೆದು ಕೊಂಡವರಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಬೇಕು.

ಭತ್ತದ ಬೆಳೆ ನಷ್ಟವಾಗಿರುವ ರೈತರಿಗೆ ಒಂದು ಎಕರೆಗೆ ರೂ.15 ಸಾವಿರ ರೂಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತ- ಕಾರ್ಮಿಕರ ವಸತಿ, ಸರ್ಕಾರಿ ಶಾಲೆಗಳ ಪುನರ್ ನಿರ್ಮಾಣಕ್ಕೆ ಕನಿಷ್ಟ ರೂ. 50 ಸಾವಿರ ಕೋಟಿಯಷ್ಟು ಹಣ ಬಿಡುಗಡೆ ಮಾಡಬೇಕು.

ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತ್ ರಸ್ತೆಗಳ ಪುನರ್ ನಿರ್ಮಾಣಕ್ಕೆ ಮತ್ತು ದುರಸ್ತಿಗೆ ಹಾಗೂ ಸೇತುಗಳನ್ನು ನಿರ್ಮಾಣ ಮಾಡಲು ರೂ.250 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಆನೇಕಾರಿಡಾರ್ ಯೋಜನೆಯೊಳಗೆ ಸೇರಿರುವ ಹೊಂಗಡ ಹಳ್ಳ ಮತ್ತು ವಣಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7 ಗ್ರಾಮಗಳು ಹಾಗೂ ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ತಮ್ಮ ಜಮೀನನ್ನು ಕೊಡಲು ಮುಂದೆ ಬಂದಿರುವ ರೈತರ ಜಮೀನು ಸೇರಿದಂತೆ ಸುಮಾರು 2500 ಎಕರೆ ಜಮೀನನ್ನು ಸರ್ಕಾರ ಖರೀಸಿದಬೇಕು ಹಾಗೂ ಈ ಯೋಜನೆಗೆ 300 ರೂ ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪಶ್ಚಿಮಘಟ್ಟ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ಈಶಾನ್ಯ ರಾಜ್ಯದ ಮಾದರಿಯಲ್ಲಿ ಯೋಜನೆ ಜಾರಿಗೆ ತಂದು ರಸ್ತೆಗಳನ್ನು ಪಿಡಬ್ಲ್ಯುಡಿ ವ್ಯಾಪ್ತಿಯಿಂದ ಹೊರಗೆ ಇಟ್ಟು ಪ್ರತ್ಯೇಕವಾದ ಬಜೆಟ್ ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿಗಧಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಭೆ ಮಾಜಿ ಸದಸ್ಯ ಹೆಚ್.ಕೆ. ಜವರೇಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿಯಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಅದನ್ನು ಸರಿ ಮಾಡಿ ವರದಿ ಜಾರಿಗೆ ತರುವ ಮೂಲಕ ಪಶ್ಚಿಮಘಟ್ಟ ಪ್ರದೇಶಗಳ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದರು.

ಹಿರಿಯ ಹೋರಾಟಗಾರ ಮಂಜುನಾಥ್‍ದತ್ತ ಮಾತನಾಡಿ, ಹೆಚ್ಚಿನ ಮಳೆಯಿಂದ ಇಡೀ ವರ್ಷ ಯಾವ ಬೆಳೆ ಹಾಕುವ ಸ್ಥಿತಿಯಲ್ಲಿ ಇಲ್ಲ. ಇಡೀ ಮಲೆನಾಡಿನ ಜೀವನವೇ ಅಸ್ತವ್ಯಸ್ಥವಾಗಿದ್ದು, ಮಲೆನಾಡಿನಲ್ಲಿ ಅವೈಜ್ಞಾನಿಕವಾಗಿ ಸರಕಾರ ಕೈಗೊಂಡಿರುವ ಯೋಜನೆಗಳೇ ಇಷ್ಟೊಂದು ಅನಾಹುತಕ್ಕೆ ಕಾರಣವಾಗಿದೆ ಎಂದು ದೂರಿದರು.

ಆಗಿರುವ ನಷ್ಟವನ್ನು ಪರಿಶೀಲನೆ ಮಾಡಿ ಮೊದಲ ಸ್ಥಿತಿಗೆ ತರಬೇಕಾದುದ್ದು ಸರಕಾರದ ಜವಬ್ಧಾರಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲಿ ಪರಿಸರವಾದಿಗಳಾದ ಹೆಚ್.ಪಿ. ಮೋಹನ್, ಕಿಶೋರ್‍ಕುಮಾರ್ ಇತರರು ಉಪಸ್ಥಿತರಿದ್ದರು.////


WebTitle : ಮಳೆ ಹಾನಿ , ಸೂಕ್ತ ಪರಿಹಾರ ನೀಡುವಂತೆ ಹೆಚ್.ಎಂ. ವಿಶ್ವನಾಥ್ ಒತ್ತಾಯ – Rain damage, HM Vishwanath Forced to Right compensation

ಈ ವಿಭಾಗದ ಎಲ್ಲಾ ಕನ್ನಡ ನ್ಯೂಸ್ ಹಾಗೂ ರಾಜಕೀಯ ಕ್ಕಾಗಿ ಕ್ಲಿಕ್ಕಿಸಿ – Hassan News

Karnataka Politics News | Kannada Politics News

Kannada Politics News

The post ಮಳೆ ಹಾನಿ , ಸೂಕ್ತ ಪರಿಹಾರ ನೀಡುವಂತೆ ಹೆಚ್.ಎಂ. ವಿಶ್ವನಾಥ್ ಒತ್ತಾಯ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.