ಉತ್ತಮ ಸಮಾಜಕ್ಕಾಗಿ

ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ

0

News Belgaum-ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ

ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ

ಆಲೂರು-ತಾಲೂಕಿನ ಭರತವಳ್ಳಿ ಹಾಗು ನೇರಲಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನೊಬ್ಬ ಅತ್ಯಾಚಾರ ನಡೆಸಲು ಯತ್ನಿಸಿ ಒಬ್ಬ ಮಹಿಳೆಯನ್ನು ಕತ್ತರಿಯಿಂದ ತಿವಿದು ಗಾಯಗೊಳಿಸಿರುವ ಘಟನೆ ನಡೆದಿದೆ.

ಹಾಸನ : ಭರತವಳ್ಳಿ ಗ್ರಾಮದಲ್ಲಿರುವ ಹೆಮ್ಮಿಗೆ ಮೋಹನ್ ಎಂಬುವವರ ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡು ವಾಸವಾಗಿರುವ ಮನೆಯ ಬಳಿ ಸಾಹುಕಾರರಿಗೆ ಪತ್ರ ಬಂದಿದ್ದು ಪತ್ರವನ್ನು ನೀಡಲು ಬಂದಿರುವ ನೆಪ ಮಾಡಿಕೊಂಡು ತೋಟದೊಳಗೆ ನುಗ್ಗಿರುವ ವ್ಯಕ್ತಿ ಅಲ್ಲಿದ್ದ ಒಂಟಿ ಮಹಿಳೆಯನ್ನು ಅತ್ಯಾಚಾರ ಮಾಡಲು ಎಳೆದಾಡಿ ಆಕೆ ಕೂಗಾಡಲು ಶುರುವಿಟ್ಟುಕೊಂಡ ಕಾರಣ ಆಕೆಯ ಮನೆಯಲ್ಲಿದ್ದ ಕತ್ತರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಪಟ್ಟಣದ ಡಿಗ್ರಿ ಕಾಲೇಜಿನ ಹಿಂಬದಿ ನೇರಲಕೆರೆ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ದನ ಮೇಯಿಸುತ್ತಿದ್ದು ಸುಮಾರು ೬೦ ವರ್ಷ ಪ್ರಾಯದ ಮಹಿಳೆಯೊಬ್ಬರನ್ನು ಕಾಮುಕನೊಬ್ಬ ಅತ್ಯಾಚಾರ ನಡೆಸಲು ಎಳೆದಾಡಿ ಆಕೆ ಕೂಗಿಕೊಂಡಾಗ ಪರಾರಿಯಾಗಿದ್ದಾನೆ.

ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಗಳೀಂದ ಮಹಿಳೆಯರು ಹಾಗು ಶಾಲಾ ಕಾಳೇಜುಗಳಿಗೆ ಓಡಾಡುವ ಹೆಣ್ಣು ಮಕ್ಕಳು ಭಯಭೀತರಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಳೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಎರಡೂ ಪ್ರಕರಣಗಳ ಆರೋಪಿ ಒಬ್ಬನೇ ಎಂಬುದು ಕಂಡು ಬರುತ್ತಿದೆ ಇಬ್ಬರು ಮಹಿಳೆಯರ ಹೇಳಿಕೆ ಪ್ರಕಾರ ಬೈಕ್‌ನ ಬಣ್ಣ ಹಾಗು ಆರೋಪಿಯ ಚಹರೆ ಒಂದೇ ಆಗಿದ್ದು ಆತ ಅತ್ಯಾಚಾರಕ್ಕೆ ಯತ್ನಿಸಿದ ಸಮಯಗಳನ್ನು ಪರಿಶೀಲಿಸಿದರೆ ಒಂದು ಪ್ರಕರಣದಲ್ಲಿ ವಿಫಲನಾಗಿ ಕೆಲವೇ ನಿಮಿಷಗಳ ಅಂತರದಲ್ಲಿ ಮತ್ತೊಂದು ಪ್ರಕರಣಕ್ಕೆ ಕೈ ಹಾಕಿರುವುದು ಕಂಡು ಬರುತ್ತಿದೆ.

ಮಹಿಳೆಯರಿಬ್ಬರ ಪ್ರಕಾರ ಆತ ಇಲ್ಲಿಗೆ ಹೊಸಬನಾಗಿದ್ದಾನೆ, ಆದರೆ ಆರೋಪಿಗಳು ತಿಳಿದೋ ತಿಳಿಯದೆಯೋ ಮಾಡುವ ಅಪರಾಧಗಳಲ್ಲಿ ಅವರಿಗೆ ಅರಿವಿಲ್ಲದಂತೆ ಯಡವಟ್ಟು ಮಾಡುವುದು ಸಹಜವಾಗಿದ್ದು ಡಿಗ್ರಿ ಕಾಲೇಜಿನ ಬಳಿ ಸಿ.ಸಿ.ಕಾಮೆರಾ ಅಳವಡಿಸಲಾಗಿದೆ ಪಟ್ಟಣದ ಪೋಲಿಸರು ಸಿ.ಸಿ.ಕ್ಯಾಮ್‌ನ ಪೂಟೇಜ್‌ನ ಸಹಾಯದೊಂದಿಗೆ ಆರೋಪಿಯನ್ನು ಗುರ್ತಿಸಿ ಬಂಧಿಸಬಹುದಾಗಿದ್ದು ಪೋಲಿಸರು ಯಾವ ರೀತಿ ಪ್ರಕರಣ ಭೇದಿಸುವವರೆಂದು ಕಾದು ನೋಡಬೇಕಿದೆ. ಪಟ್ಟಣದ ಪೋಲಿಸರು ಈ ಬಗ್ಗೆ ಶೀಘ್ರ ಕ್ರಮ ವಹಿಸಿ ಆರೋಪಿಯನ್ನು ಬಂಧಿಸಬೇಕಾಗಿದೆ.////

WebTitle : ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ – Rape attempts on Two women by One Man

>>> ಕ್ಲಿಕ್ಕಿಸಿ : Kannada Crime News | Karnataka Crime News

Kannada Crime News

The post ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ appeared first on News Belgaum.

Source link

ಮಹಿಳೆಯರಿಬ್ಬರ ಮೇಲೆ ವಿಕೃತ ಕಾಮುಕನಿಂದ ಅತ್ಯಾಚಾರ ಯತ್ನ

Leave A Reply

 Click this button or press Ctrl+G to toggle between Kannada and English

Your email address will not be published.