ಉತ್ತಮ ಸಮಾಜಕ್ಕಾಗಿ

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮನಸ್ಸು ಅಗತ್ಯ

0

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮನಸ್ಸು ಅಗತ್ಯ

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮನಸ್ಸು ಅಗತ್ಯ ಎಂದು ಮಾನವ ಹಕ್ಕು ಆಯೋಗದ ಸದಸ್ಯ ರೂಪಕ ಕುಮಾರ್ ದತ್ತಾ ತಿಳಿಸಿದರು.

ಧಾರವಾಡ : ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗಳು ಸಾಕಷ್ಟು ಇದ್ದು ತಳ ಹಂತದಲ್ಲಿಯ ಸಾಮಾನ್ಯ ಜನರಿಗೂ ಅರಿವು ಬೇಕು. ಹಾಗೂ ಅವುಗಳು ಅನುಷ್ಠಾನಗೊಳ್ಳಬೇಕು ಅಂದಾಗ ದೌರ್ಜನ್ಯಗಳ ತಡೆಯಲು ಸಹಕಾರಿಯಾಗುತ್ತದೆಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯದ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ರೂಪಕ ಕುಮಾರ್ ಅವರು ತಿಳಿಸಿದರು.

ಅವರು ಇಂದು ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾನೂನು ಅನುಷ್ಠಾನ ಎರಡು ದಿನಗಳ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತ ತಿಳಿಸಿದರು.

ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನ್ಯಾಯಾಲಯ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡು ಅಭಿವೃದ್ಧಿಗೊಂಡಿವೆ. ಆದರೂ ಸಹಿತ ಸಾರ್ವಜನಿಕ ಸ್ಥಳ, ಪ್ರಯಾಣದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಾಗೂ ಇತರೆ ದೌರ್ಜನ್ಯಗಳು ಶೇ.೮೬ ರಷ್ಟು ನಡೆಯುತ್ತಲಿವೆ.

ಮಹಿಳೆಯರು ಮಕ್ಕಳ ಮೇಲೆ ಆದ ದೌರ್ಜನ್ಯಗಳನ್ನು ಹೇಳಲು ಮುಂದೆ ಬರುತ್ತಿಲ್ಲ. ಇಂದು ದೌರ್ಜನ್ಯ ಎಸಗಿದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಿದರು ಸಹಿತ ಅಪರಾಧಿಗಳಿಗೆ ಶಿಕ್ಷೆ ಆಗುವುದು ಅತ್ಯಲ್ಪ ಜನರಿಗೆ ಮಾತ್ರ. ರಾಷ್ಟದಲ್ಲಿ ೨೦೧೬ ರ ಎನ್‌ಸಿಆರ್ ಪ್ರಕಟಣೆ ಪ್ರಕಾರ ೧,೨೦,೦೮೮ ಅಪರಾಧಿಗಳಲ್ಲಿ ೨೩,೦೯೪ ಜನರಿಗೆ ಮಾತ್ರ ಶಿಕ್ಷೆ ಆಗಿದೆ.

ಶೇ. ೧೮.೯ ರಷ್ಟು ಶಿಕ್ಷೆ ಆಗಿದ್ದು, ಇನ್ನೂ ೮೦ ರಷ್ಟು ಜನರು ಅಪರಾಧದಿಂದ ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಪ್ರಥಮ ತನಿಖಾ ವರದಿ ಮಾಡಿವಾಗ ಗಟ್ಟಿಯಾಗಿರುವ (ಕಾನೂನು) ನಿಯಮಗಳಲ್ಲಿ ದಾಖಲಿಸಿ ಎಫ್‌ಐಆರ್ ಹಾಕಬೇಕು.

ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು, ಮತ್ತು ಸರ್ಕಾರದ ಇಲಾಖೆಗಳು ಭಾಗವಹಿಸಬೇಕು. ತಪ್ಪಿತಸ್ಥರು ಶಿಕ್ಷೆಗೆ ಒಳಪಡುವಂತೆ ನ್ಯಾಯಾಲಕ್ಕೆ ವರದಿ ಸಲ್ಲಿಸಿ ವಾದ ಮಂಡಿಸಬೇಕು. ಪೊಲೀಸ್ ಅಧಿಕಾರಿ ಮತ್ತು ಸರ್ಕಾರಿ ಅಭಿಯೋಜಕರ ಪಾತ್ರ ಬಹಳ ಪ್ರಮುಖವಾದದ್ದು. ಆ ನಿಟ್ಟಿನಲ್ಲಿ ಇಂದು ಎರಡು ದಿನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
೨೦೧೧ ರ ನ್ಯಾಷನಲ್ ಕೇಂದ್ರ ಬ್ಯೂರೋ ಎನ್‌ಸಿಬಿ ವರದಿ ಪ್ರಕಾರ ಕರ್ನಾಟಕದಲ್ಲಿ ೬೯೭ ರೇಪ್ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಕಾನೂನು ಹೋರಾಟದಲ್ಲಿ ಕೇವಲ ೫೨ ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ.

ಶೇ.೯ ರಷ್ಟು ಮಾತ್ರ, ಇನ್ನೂಳಿದವರು ಕಾನೂನಿನಿಂದ ನುಣುಚಿಕೊಂಡಿದ್ದಾರೆ. ಹಾಗಾಗಿ ದಿನೇ ದಿನೇ ಅಪರಾಧಗಳು ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ನಿರ್ಭಯವಾಗಿ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ಧಾರೆ ಎಂದು ರೂಪಕುಮಾರ್ ದತ್ತಾ ಅವರು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲ ಕಾನೂನಾತ್ಮಕ ಸಲಹೆ ಸೂಚನೆಗಳನ್ನು ಹಾಗೂ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರು ಸನ್ನದ್ಧರಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಚನ್ನಣ್ಣವರ ತಿಳಿಸಿದರು.

ಗ್ಲೊಬಲ್ ಇಂಡಿಯಾದ ಸಂಚಾಲಕರಾದ ಶ್ರೀಮತಿ ಬೃಂದಾ ಅಡಿಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾನವ ಹಕ್ಕುಗಳ ಸಾಧನಾ ಕೇಂದ್ರದ ಶ್ರೀಮತಿ ಇಸೆಬೆಲ್ಲಾ ಜುಬೇರಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಧಾರವಾಡದಲ್ಲಿ ನಡೆಯುವ ಎರಡು ದಿನಗಳ ಕಾರ್ಯಾಗಾರದಲ್ಲಿ ಬೆಳಗಾವಿ ಮತ್ತು ಧಾರವಾಡ ಸರ್ಕಾರಿ ಅಭಿಯೋಜಕರು, ನಿಯೋಜಿತ ನ್ಯಾಯವಾದಿಗಳು, ಸಿಡಿಪಿಓ ಗಳು ಮತ್ತು ಬೆಳಗಾವಿ ವಿಭಾಗದ ಸರ್ಕಾರಿ ಅಭಿಯೋಜಕರ ಕಚೇರಿ ಉಪನಿರ್ದೆಶಕರಾದ ಶ್ರೀಮತಿ ಶೈಲಜಾ ಎಂ ಪಾಟೀಲ, ಸಾಂತ್ವಾನ ಕೇಂದ್ರದ ಸದಸ್ಯರು, ಪದಾಧಿಕಾರಿಗಳು ಮತ್ತು ವಿಲಿಯಸ್ ವಿಲಿಯಮ್ಸ್ ಅವರು ಭಾಗವಹಿಸಿದ್ದರು////

The post ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮನಸ್ಸು ಅಗತ್ಯ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.