ಉತ್ತಮ ಸಮಾಜಕ್ಕಾಗಿ

ಮುಖ್ಯಮಂತ್ರಿಗಳ ಪ್ರವಾಸ ಹಿನ್ನಲೆ ಪೂರ್ವ ತಯಾರಿ ಸಭೆ

0

Preparation Conference for Chief Minister's Visit

ಮುಖ್ಯಮಂತ್ರಿಗಳ ಪ್ರವಾಸ ಹಿನ್ನಲೆ ಪೂರ್ವ ತಯಾರಿ ಸಭೆ

ಹಾಸನ ಸೆ. ೧೫: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜಿಲ್ಲಾ ಪ್ರವಾಸದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೊಂದು ಸುತ್ತಿನ ಪೂರ್ವ ತಯಾರಿ ಸಭೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಪೂರ್ಣಿಮ ಹಾಗೂ ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರಿಂದ ಶಿಲನ್ಯಾಸ ಉದ್ಘಾಟನೆ ನೆರವೇರಿಸಲು ಸಿದ್ದವಿರುವ ೫೦ ಲಕ್ಷ ರೂಪಾಯಿಗಳ ಮೇಲ್ಪಟ್ಟ ಕಾಮಗಾರಿಗಳನ್ನು ಸಭೆಯಲ್ಲಿ ಪಟ್ಟಿ ಮಾಡಲಾಯಿತು.

ಲೋಕೋಪಯೋಗಿ ಇಲಾಖೆಯ ವಿವಿಧ ಕಟ್ಟಡ ಕಾಮಗಾರಿಗಳು, ಡಾ||. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಹಾಸನಾಂಬ ಬೋಧಕ ಆಸ್ಪತ್ರೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಹತ್ತಾರು ಅಭಿವೃದ್ದಿ ಕಾಮಗಾರಿಗಳನ್ನು ಪಟ್ಟಿ ಮಾಡಿದ ಅಪರ ಜಿಲ್ಲಾಧಿಕಾರಿ ಪೂರ್ಣಿಮ ಹಾಗೂ ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪುಟ್ಟಸ್ವಾಮಿ ಶಿಲಾಫಲಕ ತಯಾರಿ ಸೇರಿದಂತೆ ಎಲ್ಲಾ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಈ ಮೊದಲು ಸೆ. ೨೧ ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗಧಿಯಾಗಿದ್ದು ಅಂದು ಮೊಹರಂ ಕಡೇ ದಿನವಾಗಿರುವುದರಿಂದ ಶೀಘ್ರವೇ ದಿನಾಂಕದಂದು ಅಂತಿಮಗೊಳ್ಳಲಿದೆ ಎಂದು ಪುಟ್ಟಸ್ವಾಮಿಯವರು ತಿಳಿಸಿದರು.
ಸಣ್ಣ ನೀರಾವರಿ, ನಗರಾಭಿವೃದ್ದಿ, ಕೃಷಿ, ತೋಟಗಾರಿಕೆ ಇಲಾಖೆಗಳು ತಮ್ಮ ಇಲಾಖೆಯ ಕಟ್ಟಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತದ ವತಿಯಿಂದ ಆಹ್ವಾನ ಪತ್ರ ತಯಾರಿಸಲಾಗುವುದು, ಆಯಾಯ ಇಲಾಖೆಗಳು ತಮ್ಮ ಕಾಮಗಾರಿಗಳ ಕುರಿತು ಪ್ರತೇಕ ಆಹ್ವಾನ ಪತ್ರ ಸಿದ್ದಪಡಿಸಿ ಶಿಷ್ಠಾಚಾರ ಪಾಲಿಸುವಂತೆ ನಿರ್ದೆÃಶನ ನೀಡಲಾಯಿತು.

ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ///

The post ಮುಖ್ಯಮಂತ್ರಿಗಳ ಪ್ರವಾಸ ಹಿನ್ನಲೆ ಪೂರ್ವ ತಯಾರಿ ಸಭೆ appeared first on Prajaa News.

Source link

ಮುಖ್ಯಮಂತ್ರಿಗಳ ಪ್ರವಾಸ ಹಿನ್ನಲೆ ಪೂರ್ವ ತಯಾರಿ ಸಭೆ

Leave A Reply

 Click this button or press Ctrl+G to toggle between Kannada and English

Your email address will not be published.