ಉತ್ತಮ ಸಮಾಜಕ್ಕಾಗಿ

ಮುಸ್ಲಿಂ ಸಮಾಜದ ವತಿಯಿಂದ ಮನವಿ

0

ಖಾನಾಪುರ: ಮುಸ್ಲಿಂ ಸಮಾಜಕ್ಕಾಗಿ ಇವತ್ತಿನವೆರೆಗೆ ಸರಕಾರದಿಂದ ಹಾಗೂ ಗ್ರಾಪಂ ವತಿಯಿಂದ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ, ಆದ್ದರಿಂದ ತಾವುಗಳು ಗ್ರಾಪಂ ವತಿಯಿಂದ 60*80 ವಿಸ್ತಿರ್ಣದ ಎರಡು ಜಾಗ ನೀಡಿದರೆ ನಾವು ಶಾದಿಮಹಲ ಕಟ್ಟಿಕೊಳ್ಳುತ್ತೆವೆ ಎಂದು ಹೊಸಲಿಂಗನಮಠ ಮುಸ್ಲಿಂ ಜಮಾತ ಉಪಾಧ್ಯಕ್ಷ ಮುನ್ನಾ ಪಟೇಲ ಹಾಗೂ ಅಶ್ಪಾಕ ಹಟ್ಟಿಹೊಳಿ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಪಂ ಅಲ್ಲಿ ಹೊಸಲಿಂಗನಮಠ ಗ್ರಾಮದ ಮುಸ್ಲಿಂ ಸಮಾಜದ ವತಿಯಿಂದ ಗ್ರಾಪಂ ಅದ್ಯಕ್ಷ ಡಾ.ಕೆ.ಬಿ.ಹಿರೇಮಠ ಹಾಗೂ ಪಿಡಿಓ ಬಿ.ಪಿ.ಚಂದ್ರ ಅವರಿಗೆ ಮನವಿ ನೀಡಿ ಮಾತನಾಡಿದರು.

ಮುಸ್ಲಿಂ ಸಮಾಜವು ಹೊಸಲಿಂಗನಮಠ ಗ್ರಾಮದಲ್ಲಿ ಎರಡನೇ ಅತಿದೊಡ್ಡ ಸಮಾಜವಾಗಿದ್ದು, ದಿನಗಳು ಕಳೆದಂತೆ ಮುಸ್ಲಿಂ ಸಮಾಜದ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಜೋತೆಗೆ ಮುಸ್ಲಿಂ ಸಮಾಜದವರು ಎಲ್ಲರೂ ಕೂಲಿಕಾರ್ಮಿಕರಾಗಿದ್ದು ಜನತಾ ಪ್ಲಾಟನಲ್ಲಿ ವಾಸಿಸುತ್ತಿದ್ದೆವೆ.

ಆದರೆ ನಮ್ಮ ಧರ್ಮದ ಮತ್ತು ವೈಯಕ್ತಿಕ ಸಭೆ-ಸಮಾರಂಭಗಳನ್ನು ಮಾಡಬೇಕಾದರೆ ಜಾಗದ ಕೊರತೆ ಬಹಳ ಎದ್ದು ಕಾಣುತ್ತಿದೆ. ಆದ್ದರಿಂದ ಕಳೆದ 15-8-2009ರಂದು ಮುಸ್ಲಿಂ ಸಮಾಜದ ಗ್ರಾಪಂ ಇವರಿಗೆ ಈಗಾಗಲೇ ಜಾಗ ನೀಡಿರಿ ಎಂದು ಮನವಿ ಸಲ್ಲಿಸಿದ್ದೆವು,

ಆದರೆ ಇವತ್ತಿನವೆರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಹಾಗೂ ವಕ್ಫ ಬೋರ್ಡಿನಿಂದ ಶಾದಿಮಹಲಗಾಗಿ ಪ್ರತಿವರ್ಷ ಸರಕಾರದಿಂದ ಅರ್ಜಿ ಕರೆಯುತ್ತಿದ್ದು, ಮುಸ್ಲಿಂ ಸಮಾಜದ ಹೆಸರಿನ ಮೇಲೆ ಜಾಗ ಇಲ್ಲದೆ ಇರುವುದರಿಂದ ಅರ್ಜಿ ಹಾಕಲು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ತಾವುಗಳು ನಮ್ಮ ಅರ್ಜಿಯನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 60*80 ವಿಸ್ತಿರ್ಣದ ಎರಡು ಜಾಗೆಗಳನ್ನು “ಹೊಸಲಿಂಗನಮಠ ಮುಸ್ಲಿಂ ಜಮಾತ” ಎಂದು ಠರಾವು ಪಾಸು ಮಾಡಿಸಿ, ಉತಾರನ್ನು ಆದಷ್ಟು ಬೇಗ ನೀಡಿದರೆ, ನಿಮ್ಮೆಲ್ಲರ ನೇತೃತ್ವದಲ್ಲಿ ವಕ್ಫ ಬೊರ್ಡಿನ ಸಹಕಾರದಿಂದ ಶಾದಿಮಹಲನ್ನು ನಿರ್ಮಿಸಲು ಸಹಕರಿಸಬೇಕೆಂದು ಕೇಳಿಕೊಂಡರು.

ಮನವಿ ನೀಡುವ ಸಂಧರ್ಭದಲ್ಲಿ ಹೊಸಲಿಂಗನಮಠ ಮುಸ್ಲಿಂ ಜಮಾತ ಉಪಾದ್ಯಕ್ಷ ಮುನ್ನಾ ಪಟೇಲ, ಗ್ರಾಪಂ ಸದಸ್ಯರಾದ ಇಕಬಾಲ ದಾದೂನವರ, ಮುಸ್ತಫಾ ದಾಸ್ತಿಕೊಪ್ಪ, ಸಮಾಜದ ಮುಖಂಡರಾದ ಅಶಪಾಕ ಹಟ್ಟಿಹೊಳಿ, ಜೈಲಾನಿ ಪಟೇಲ, ಆಶೀಫ ದಿಲ್ಲಿವಾಲೆ, ಇಮ್ತಿಯಾಜ ಕಿತ್ತೂರ, ಮುಸ್ತಾಕ ಖಾನಾಪುರ, ಸದ್ದಾಂ ಗೌಂಡಿ, ಮುಜಮ್ಮಿಲ ಖಾನಾಪುರ, ಅಖಿಲ ಹಟ್ಟಿಹೊಳಿ ಹಾಗೂ ಇನ್ನೂಳಿದ ಮುಸ್ಲಿಂ ಸಮಾಜದವರು ಹಾಜರಿದ್ದರು.

The post ಮುಸ್ಲಿಂ ಸಮಾಜದ ವತಿಯಿಂದ ಮನವಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.