ಉತ್ತಮ ಸಮಾಜಕ್ಕಾಗಿ

ಮೂಲಭೂತ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ 

0

ಮೂಲಭೂತ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ

ಬೆಳಗಾವಿ:ಮೂಲ ವಿಜ್ಞಾನದ ಆಳವಾದ ಜ್ಞಾನ ಹೊಂದಿದಲ್ಲಿ ತಂತ್ರಜ್ಞಾನ ವಿಷಯವನ್ನು ಒಳ್ಳೆಯ ರೀತಿಯಿಂದ ಅರಿತುಕೊಳ್ಳಬಹುದು. ಜಾಗತಿಕಮಟ್ಟದ ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಜ್ಞಾನ ಮತ್ತು ಮಾಹಿತಿಗಳನ್ನು ಗಳಿಸಿಕೊಳ್ಳುತ್ತಿರಬೇಕು

. ಇದಕ್ಕಾಗಿ ವಿದ್ಯಾರ್ಥಿಗಳು ಅಂದಿನ ದಿನದ ಅಭ್ಯಾಸವನ್ನು ಅಂದೇ ಮುಗಿಸಿ ಮರುದಿನದ ಅಭ್ಯಾಸದ ಬಗ್ಗೆ ಯೋಜನೆಯನ್ನು ರೂಪಿಸಿ ಅದರ ಮುಖಾಂತರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಬೇಕು ಎಂದು ಬೆಳಗಾವಿಯ ರಾಜಾ ಲಖಮನಗೌಡ ವಿಜ್ಞಾನ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಉದಯಸಿಂಗ ರಜಪೂತ ಹೇಳಿದರು.
ಅವರು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ನಡೆದ ಪ್ರಸಕ್ತ 2018-19 ನೇ ಶೈಕ್ಷಣಿಕ ವರ್ಷದ ಮೂಲಭೂತ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಅವರು ಆಸ್ಸಾಮ್ ರಾಜ್ಯದ ಉದ್ಭವ ಭರಲಿಯವರು ಸುಮಾರು 140 ಯಾಂತ್ರಿಕ ಉಪಕರಣಗಳನ್ನು ರೈತರಿಗೆ ಅನುಕೂಲವಾಗುವಂತೆ ರೂಪಿಸಿ ಕೆಲವು ಪೆಟೆಂಟಗಳನ್ನು ಪಡೆದಿರುವುದನ್ನು ಉದಾಹರಿಸಿದರು. ಈ ಸಾಧನೆಗಾಗಿ ಅವರಿಗೆ ಆಸ್ಸಾಮ್ ಕೃಷಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ ಪದವಿ ನೀಡಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಎಷ್ಟೇ ಉನ್ನತಿ ಸಾಧಿಸಿದರೂ ತಂದೆ ತಾಯಿಗಳು, ಶಿಕ್ಷಕರು ಮತ್ತು ಸಮಾಜವನ್ನು ಮರೆಯದಿರುವಂತೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಇಂಜನೀಯರಿಂಗ್ ವಿದ್ಯಾರ್ಥಿಗಳು ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಲ್ಲಿ ಪರಿಣಿತಿಯನ್ನು ಸಾಧಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಲು ಶ್ರಮಿಸಬೇಕೆಂದು ಎಂದು ಹೇಳಿದರು. ಇದಕ್ಕೆ ಉದಾಹರಣೆಯಾಗಿ ನಮ್ಮ ಕಾಲೇಜಿನ ಸುಮಾರು 45 ವಿದ್ಯಾರ್ಥಿಗಳು ಉತ್ತಮ ಉದ್ದಿಮೆದಾರರಾಗಿ ಯಶಸ್ಸು ಗಳಿಸಿರುವುದನ್ನು ವಿವರವಾಗಿ ತಿಳಿಸಿದರು. ಇದಕ್ಕಾಗಿ ಹಿಂಜರಿಕೆ ಸ್ವಭಾವ ಬಿಟ್ಟು ಸಮಾಜದಲ್ಲಿ ಎಲ್ಲರೊಡನೆ ಬೆರಯಬೇಕೆಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಡಾ. ಎಚ್.ಎಸ್. ಪಾಟೀಲ, ಡಾ. ಪಿ.ಬಿ. ಮುತಾಲಿಕ ದೇಸಾಯಿ, ಡಾ. ವಿಜಯ ಕುಲಕರ್ಣಿ, ಡಾ. ರವೀಂದ್ರ ವೀರಾಪೂರ, ಪ್ರೊ. ಕಿರಣ ಪೋತದಾರ, ಪ್ರೊ. ಸಾರಿಖಾ ಪಾವಶೆ, ಪ್ರೊ. ಅಶ್ಪಾಖ ಪಠಾಣ, ಪ್ರೊ. ಶ್ವೇತಾ ಮಗದುಮ್, ಪ್ರೊ. ರಾಜು ನಾಗಾಂವಕರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜ್ಞಾನ ಸಂಘದ ಅಧ್ಯಕ್ಷೆ ಪ್ರೊ. ಅನುರಾಧಾ ಹೂಗಾರ ಸ್ವಾಗತಿಸಿ, ಸಂಘದ ಉದ್ದೇಶ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶೃದ್ಧಾ ಬೋಸಲೆ ಪರಿಚಯಿಸಿದರು. ಅತಿಕ್ ಬೇಗ ನಿರೂಪಿಸಿದರು. ಪುರುಷೋತ್ತಮ ಪೋಳ ವಂದಿಸಿದರು.

The post ಮೂಲಭೂತ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ  appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.