ಉತ್ತಮ ಸಮಾಜಕ್ಕಾಗಿ

ಮೋಜಿಗಾಗಿ, ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿಬೇಡಿ: ಜಿಲ್ಲಾಧಿಕಾರಿ

0


ಬೆಳಗಾವಿ, ಜನವರಿ 19 ಸಂಭವಿಸುವ ಬಹಳಷ್ಟು ರಸ್ತೆ ಅಪಘಾತಗಳು ಚಾಲಕರ ಮೋಜಿನ ಚಾಲನೆ ಹಾಗೂ ಬೇಜವಾಬ್ದಾರಿಯಿಂದ ವಾಹನ ಓಡಿಸುವುದರಿಂದ ಆಗುತ್ತಿವೆ. ಜೀವ ಅಮೂಲ್ಯವಾದದ್ದು, ಆದರಿಂದ ವಾಹನ ಚಾಲಕರು ಜಾಗೃತೆಯಿಂದ ವಾಹನವನ್ನು ಓಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಹೇಳಿದರು.
ಅವರು ಇಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ “28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ”ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟ್ರಕ್ ಮತ್ತು ಕಾರುಗಳಿಂದ ಹೆಚ್ಚು ರಸ್ತೆ ಅಪಘಾತಗಳಾಗುತ್ತಿದ್ದು, ಚಾಲಕರು ನಿಯಂತ್ರಣದಿಂದ ವಾಹನ ಚಲಾಯಿಸಬೇಕು, ಕಳೆದ ವರ್ಷ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ ರಸ್ತೆ ಅಪಘಾತಗಳಿಂದ 102 ಜನ ಸಾವನಪ್ಪಿದ್ದು, 1200 ಜನ ಅಂಗವಿಕಲರಾಗಿದ್ದಾರೆ. ಕುಟುಂಬದ ಯಾವುದೇ ವ್ಯಕ್ತಿ ಅಪಘಾತದಲ್ಲಿ ಅಸುನಿಗಿದರೆ. ಇಡೀ ಕುಟುಂಬಕ್ಕೆ ತುಂಬಾ ದೊಡ್ಡ ನಷ್ಟವಾಗುತ್ತದೆ. ಆದ್ದರಿಂದ ವಾಹನ ಮಾಲಿಕರು ಮತ್ತು ಚಾಲಕರು ರಸ್ತೆ ಸಂಚಾರ ನಿಯಮಗಳನ್ನು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಅಪರ ಸಾರಿಗೆ ಆಯುಕ್ತ ಶ್ರೀ ಮಾರುತಿ ಸಾಂಬ್ರಾಣಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. 6 ಲಕ್ಷ ಜನ ಗಾಯಗೊಂಡು ಸುಮಾರು ಒಂದು ಲಕ್ಷ ಐವತ್ತು ಸಾವಿರ ಜನ ಸಾಯಿತ್ತಿದ್ದಾರೆ. ವಿಶ್ವಸಂಸ್ಥೆ 2020 ರೊಳಗೆ ರಸ್ತೆ ಅಪಘಾತ ಮತ್ತು ಸಾವುಗಳನ್ನು ಶೇಕಡಾ 50 ರಷ್ಟು ಕಡಿಮೆಗೊಳಿಸಲು ಗುರಿ ಹೊಂದಿ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ವಾಹನ ಚಾಲನೆಯಲ್ಲಿ ಚಾಲಕರಿಗೆ ಹಾಗೂ ಸಹಪ್ರಯಾಣಿಕರಿಗೆ ತಾಳ್ಮೆ ಅಗತ್ಯ ಎಂದು ಅವರು ಹೇಳಿದರು.
ಇನ್ನೊರ್ವ ಅತಿಥಿ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶಂಕರ ಮಾರೀಹಾಳ ಮಾತನಾಡಿ, ªಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ರಸ್ತೆ ಮೇಲೆ ಸಂಚರಿಸುವಾಗ ಮೊಬೈಲ್ ಬಳಸದೆ ಇರುವಂತೆ ಎಚ್ಚರಿಕೆ ನೀಡಬೇಕು. ಕಳೆದ ಒಂದು ವರ್ಷದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಂದ ಒಂದು ಕೋಟಿ ಮೂವತ್ತೆಂಟು ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಸುಮಾರು 85 ಲಕ್ಷ ಹೆಲ್ಮಟ್ ಧರಿಸದ ವಾಹನ ಸವಾರರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಶಿವಾನಂದ ಮಗದುಮ್ಮ ಮಾತನಾಡಿ, ರಸ್ತೆ ಸುರಕ್ಷತೆ ಪಾಲಿಸುವುದರಿಂದ ಕುಟುಂಬದ ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ಹೇಳೀದರು.
ಸಂಚಾರಿ ಪೊಲೀಸ್ ನಿರೀಕ್ಷ ಶ್ರೀ ಜಾವಿದ ಮುಷಾಪೂರಿ ಸ್ವಾಗತಿಸಿ, ಸಪ್ತಾಹದ ವರದಿ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಯಶಸ್ವಿಗೊಳಿಸಲು ಸಹಕರಿಸಿದ ಸಂಘ ಸಂಸ್ಥೆ ಶಾಲಾ-ಕಾಲೇಜು ಪ್ರತಿನಿಧಿಗಳನ್ನು ಸ್ಮರಿನಿಕೆ ನೀಡಿ ಗೌರವಿಸಲಾಯಿತು.
ಪ್ರಾದೇಶಿಕ ಸಾರಿಗೆ ಕಚೇರಿಯ ಶ್ರೀಮತಿ ಶೀತಲ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾರಿಗೆ ವಾಹನ ನಿರೀಕ್ಷಕ ಶ್ರೀ ಮಹ್ಮದ ಗೌಸ್ ಸವದತ್ತಿ ವಂದಿಸಿದರು.
ಸಮಾರಂಭದಲ್ಲಿ ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ವಿಭಾಗ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.