ಉತ್ತಮ ಸಮಾಜಕ್ಕಾಗಿ

ರಫೇಲ್ ಡೀಲ್ ಶತಮಾನದ ಭಾರಿ ಹಗರಣ – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ

0

ರಫೇಲ್ ಡೀಲ್ ಶತಮಾನದ ಭಾರಿ ಹಗರಣ – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ

ಬೆಳಗಾವಿ : ರಫೇಲ್ ಡೀಲ್ ಇಡೀ ದೇಶ ಮುಳುಗಿಸುವ ಶತಮಾನದ ಭಾರಿ ಹಗರಣ ದೇಶದ ರಕ್ಷಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಯೋಜನೆ ಎಂಬ ಭಾವನಾತ್ಮಕತೆಗೆ ದೇಶದ ಜನ ಮುಳುಗಿದ್ದರೂ ಅದರ ಹಿಂದೆ ಭಾರಿ ಆರ್ಥಿಕತೆಯನ್ನೇ ಕೊಳ್ಳೆ ಹೊಡೆಯಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ. ವಿ.ಮೋಹನ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ₹60 ಸಾವಿರ ಕೋಟಿ ಎನ್ನಲಾದ ಹಗರಣದ ಮೊತ್ತ ₹1ಲಕ್ಷ ಮೂವತ್ತು ಕೋಟಿಗೆ ಏರಿದೆ ಎಂದರು. ಕೇಂದ್ರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ ಅವರು ಪ್ರತಿ ಯುದ್ಧ ವಿಮಾನದ ದರ ಎಷ್ಟು ತಿಳಿಸಿ, 126 ವಿಮಾನಗಳ ಬೇಡಿಕೆ ಪೈಕಿ ಬರೀ 36 ವಿಮಾನ ಖರೀದಿ ಮಾತ್ರ ಮಾಡಿದ್ಯಾಕೆ, ಅನಿಲ ಅಂಬಾನಿ ಅವರನ್ನೇ ಆಯ್ಕೆ ಮಾಡುಕೊಂಡ ಕೇಂದ್ರದ ಉದ್ದೇಶ ಏನು.

₹48 ಸಾವಿರ ಕೋಟಿ ಸಾಲದ ಹೊರೆ ಹೊತ್ತ ಅಂಬಾನಿ ಅವರನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಫ್ರೆಂಚ್ ಕಂಪನಿ ಒಪ್ಪಿಕೊಂಡಾಗಲೂ ಥರಾತುರಿಯಲ್ಲಿ ಅನಿಲ ಅಂಬಾನಿಗೆ ಕೊಟ್ಟದ್ದು ಯಾಕೆ ಎಂಬುವುದು ಹೊರಬರಬೇಕು. ದೇಶದಲ್ಲಿ ರಫೆಲ್‌ ಹಗರಣ ಬೃಹತ್ ಹಗರಣವಾಗಿದೆ ಎಂದರು.

ನಮಗೆ ಕೇಂದ್ರ ಸರಕಾರ, ನರೇಂದ್ರ ಮೋದಿ ಇದ್ದಾರೆ ಎನ್ನುವ ಬಿಎಸ್ವೈ ಹೇಳಿಕೆ ಹಿಂದಿನ ಉದ್ದೇಶವೇನು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಉಸ್ತುವಾರಿ ಪಿ. ವಿ. ಮೋಹನ ಪ್ರಶ್ನಿಸಿದರು. RSS ಮುಖ್ಯಸ್ಥ ಮೋಹನ ಭಾಗವತ್ ಮಾತುಗಳು ದುರುದ್ದೇಶ, ಕಿಡಿಗೇಡಿ ಮತ್ತು ನಯವಂಚಕ ಗಿಮಿಕ್ಸ್ ಆಗಿದೆ.

ಮುಸ್ಲಿಂರಿಲ್ಲದ ಹಿಂದುತ್ವ ಇಲ್ಲ ಎಂಬ ಅವರ ಹೇಳಿಕೆ ಸಾಧುವಾದದ್ದಲ್ಲ. ಇದು ಮತಬ್ಯಾಂಕ್ ಸೆಳೆಯುವ ಹುನ್ನಾರ ಎಂದರು. ಚಿಕಾಗೋದಲ್ಲಿ RSS ಮುಖ್ಯಸ್ಥ ಮೋಹನ ಭಾಗವತ್ ಮಾತನಾಡಿ ಹಿಂದೂಗಳು ಸಿಂಹಗಳು, ಇತರರು ನಾಯಿಗಳು, ಹಿಂದೂಗಳು ಹುಲಿಯಂತೆ ಘರ್ಜಿಸಬೇಕು ಎಂದು ಅಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಿದರು.

ಯಾರು ಇವರು ಆರ್ ಎಸ್ ಎಸ್ ಎಂದರೆ! ನೋಂದಾವನೆ ರಹಿತ, ನಿಗೂಢ ಸಂಸ್ಥೆಯಾದ RSS. ಅದರ ಕೆಲಸ ಕಾರ್ಯ ಕರ್ತವ್ಯ ಏನು ಎಂದು ಪ್ರಶ್ನಿಸಿದರು. RSS ಹೇಳಿಕೆಗಳು ಇಲೆಕ್ಷನ್ ಕಾರ್ಯತಂತ್ರದ ಭಾಗ ಮಾತ್ರ ಎಂದರು.

ದೇನಾ, ಬರೋಡಾ ಹಾಗೂ ವಿಜಯಾ ಬ್ಯಾಂಕ್ ಸಂಯೋಜಿಸುವ ಕೆಲಸ ಇಂದು ನಡೆದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಬ್ಯಾಂಕುಗಳನ್ನು ಸ್ವತಂತ್ರವಾಗಿ ಬಿಡಬೇಕು. ದೇಶವನ್ನು ಬರೀ 5 ಕುಟುಂಬಗಳು ಮಾತ್ರ ಆಳುತ್ತಿವೆ ಎಂದು ಆರೋಪಿಸಿದರು.

ಪಿ. ವಿ. ಮೋಹನ ನಿವ್ಯಾಕೆ ಜಿಲ್ಲೆಯಲ್ಲಿ ತಲೆ ಹಾಕ್ತೀರಿ ಎಂಬ ಪ್ರಶ್ನೆ ಕೇಳಿದಾಗ ಪಿ. ವಿ. ಮೋಹನ ತೀವ್ರ ವಿಚಲಿತರಾದರು. ಇನ್ನೊಬ್ಬರಿಗೆ ಬೆಳಗಾವಿ ಜಿಲ್ಲೆಯಲ್ಲಿ ಅವಕಾಶ ಇಲ್ಲ ಎಂಬ ಜಾರಕಿಹೊಳಿ ಬ್ರದರ್ಸ್ ಹೇಳಿಕೆ ಉಲ್ಲೇಖಿಸಿದಾಗ ಪಿ. ವಿ. ಮೋಹನ ಜಾರಿಕೊಂಡರು.

ಪಕ್ಷದ ಮೂವರೂ ಜಿಲ್ಲಾ ಅಧ್ಯಕ್ಷರು ನನ್ನೊಂದಿಗೆ ಇರುವಾಗ ಜಿಲ್ಲೆಯಲ್ಲಿ ನನಗ್ಯಾರ ಅನುಮತಿ ಬೇಕಾಗುತ್ತದೆ ಎಂದರು. ರಫೇಲ್ ಹಗರಣ, ಸಮ್ಮಿಶ್ರ ಸರಕಾರ ಅಸ್ಥಿರ ಯತ್ನ ಹಾಗೂ ಬಿಜೆಪಿ ಹಗರಣಗಳ ವಿರುದ್ದ ಸೆ. 26ಕ್ಕೆ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಯಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಲಕ್ಷಣರಾವ್ ಚಿಂಗಳೆ, ಬೆಳಗಾವಿ ನಗರಾಧ್ಯಕ್ಷ ರಾಜು ಸೇಠ್ ಉಪಸ್ಥಿತರಿದ್ದರು. ////

The post ರಫೇಲ್ ಡೀಲ್ ಶತಮಾನದ ಭಾರಿ ಹಗರಣ – ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.