ಉತ್ತಮ ಸಮಾಜಕ್ಕಾಗಿ

ರಾಜ್ಯ ಮಟ್ಟದ ಕಾರ್ಯಾಗಾರ

0

ರಾಜ್ಯ ಮಟ್ಟದ ಕಾರ್ಯಾಗಾರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ನೇತೃತ್ವದಲ್ಲಿ ‘ಎನ್‌ರ್ಜೈಸ್’ ಒಂದು ವಾರದ ರಾಜ್ಯಮಟ್ಟದ ಮಹಿಳಾ ಕಾರ್ಯಾಗಾರ ಇದೆ ಸೆ. ೨೪ ರಿಂದ ಸೆ.೨೯ ರವರೆಗೆ ಜಗುಗಲಿದೆ.

ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ವಿವಿಯ ಕುವೆಂಪು ಸಭಾಭವನದಲ್ಲಿ ಕಾರ್ಯಗಾರದ ಉದ್ಘಾಟನೆ ಜರುಗಲಿದ್ದು, ಶಾಸಕಿ ಡಾ. ಅಂಜಲಿ ನಿಂಬಾಳಕರ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದು, ಕುಲಪತಿ ಪ್ರೊ. ಶಿವಾನಂದ ಹೊಸಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವರಾದ ಪ್ರೊ. ಸಿದ್ದು ಅಲಗೂರ ಮತ್ತು ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಪರಶುರಾಮ ದುಡಗುಂಟಿ ಉಪಸ್ಥಿತ ಇರಲಿದ್ದಾರೆ.

ಮೊದಲ ದಿನ ಸೋಮವಾರ ಮಧ್ಯಾಹ್ನ ೨ಗಂಟೆಗೆ ಸ್ನಾತಕೊತ್ತರ ಪದವಿ ನಂತರ ಅವಕಾಶಗಳು ವಿಷಯದ ಕುರಿತಂತೆ ಹುಬ್ಬಳ್ಳಿ ವಿಭಾಗದ ಉದ್ಯೊಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಮಾಹಿತಿ ನೀಡಲಿದ್ದಾರೆ.

ಸೆ.೨೫ ರಂದು ಪ್ರಸಕ್ತ ದಿನಮಾನದ ಮಹಿಳಾ ಸಮಸ್ಯೆ ಕುರಿತಾದ ಚಿತ್ರಗಳ ಪ್ರದರ್ಶನ ಮತ್ತು ಚರ್ಚೆ ಕಾರ್ಯಕ್ರಮವು ಕೊಪ್ಪಳದ ಲೇಖಕಿ ಸಾವಿತ್ರಿ ಮಜುಮದಾರ ನೇತೃತ್ವದಲ್ಲಿ ಜರುಗಲಿದೆ.

ಸೆ.೨೬ ರಂದು ಮಹಿಳೆ ಮತ್ತು ಉದ್ಯಮಶೀಲತೆ ಕುರಿತಂತೆ ಉದ್ಯಮಿ ರತಿ ಶ್ರಿನಿವಾಸ ಮತ್ತು ಮಹಿಳೆ ಮತ್ತು ವ್ಯಕ್ತಿತ್ವ ವಿಕಸನ ಕುರಿತಂತೆ ಬೀದರನ ಡಾ.ಪಿಎಸ್.ಲಕ್ಕಿ ಮಾರ್ಗದರ್ಶನ ನೀಡಲಿದ್ದಾರೆ.

ಸೆ.೨೭ ರಂದು ಮಹಿಳೆ ಮತ್ತು ಕಾನೂನು ಜಾಗೃತಿ ವಿಷಯದ ಕುರಿತಂತೆ ಯಮುನಾ ಗಾಂವ್ಕರ್ ಮತ್ತು ಬೆಳಗಾವಿಯ ಗ್ರಾಮೀಣ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಮಾಹಿತಿ ನೀಡಲಿದ್ದಾರೆ.

ಸೆ,೨೮ ರಂದು ಸಂವಹನ ಕೌಶಲ್ಯ ವಿಷಯದ ಕುರಿತಂತೆ ಕಾರ್ಪೋರೆಟ್ ತರಬೇತುಗಾರ್ತಿ ನಂದಾ ಹಂಪಿಹೊಳಿ ಮತ್ತು ಬೆಳಗಾವಿಯ ಕೆಎಲ್‌ಎಸ್ ಐಎಂಇಆರ್ ಪ್ರೊ. ಕೀರ್ತಿ ಶಿವಕುಮಾರ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಲಿದ್ದಾರೆ.

ಸೆ.೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಕಾರ್ಯಾಗಾರದ ಸಮಾರೋಪ ಜರುಗಲಿದ್ದು, ಕುಲಸಚಿವ ಪ್ರೊ.ಸಿದ್ದು ಅಲಗೂರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಬಾಗಲಕೋಟದ ಜಿಪಂ ಸಿಇಒ ಗಂಗೂಬಾಯಿ ಮಾನ್ಕರ್, ಡಬ್ಲುಇಕೆಎ ಅಧ್ಯಕ್ಷೆ ದೇವಕಿ ಯೋಗಾನಂದ, ಕುಲಸಚಿವ ಪ್ರೊ. ರಂಗರಾಜ ವನದುರ್ಗ ಮತ್ತು ಹಣಕಾಸು ಅಧಿಕಾರಿ ಪರುಶರಾಮ ದುಡಗುಂಟಿ ಭಾಗವಹಿಸಲಿದ್ದಾರೆ ಎಂದು ಮಹಿಳಾ ಸಬಲೀಕರಣ ಘಟಕದ ನಿರ್ದೇಶಕಿ ಪ್ರೊ. ಮನೀಷಾ ನೇಸರಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ////

The post ರಾಜ್ಯ ಮಟ್ಟದ ಕಾರ್ಯಾಗಾರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.