ಉತ್ತಮ ಸಮಾಜಕ್ಕಾಗಿ

ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ‌ ಮಾಡಿದ ಘಟನೆ

0

ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ‌ ಮಾಡಿದ ಘಟನೆ

ಬೆಳಗಾವಿ: ಛೀ… ಥೂ… ಎನ್ನುವಷ್ಟರ ಮಟ್ಟಿಗೆ ಬೆಳಗಾವಿಯಲ್ಲಿ ವ್ಯವಸ್ಥೆ ಹದಗೆಟ್ಟಿದ್ದು RCU ಕುಲಪತಿ ಪ್ರೊ. ಹೊಸಮನಿ ಅವರ ಮೆಲೇಯೇ ಹಲ್ಲೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ತಮಗೆ ಉದ್ದೇಶಪೂರ್ವಕ ಅಹ್ವಾನ ನೀಡಿಲ್ಲ ಎಂಬ ಕಾರಣ ವೊಡ್ಡಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ‌ ಮಾಡಿದ ಘಟನೆ ನಡೆದಿದೆ.

ಕಾಕತಿ ಜಿಪಂ. ಸದಸ್ಯ ಸಿದ್ದು ಸುಣಗಾರ ಸೇರಿ ಇತರ ಬೆಂಬಲಿಗರಿಂದ ಕೃತ್ಯ ನಡೆದಿದೆ ಎನ್ನಲಾಗಿದ್ದು, ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾ‌ನ ನೀಡಿಲ್ಲ ಎನ್ನುವ ವಿಷಯ ಗಲಾಟೆಗೆ ಕಾರಣ ಎಂದು ತಿಳಿದು ಬಂದಿದೆ. ಸಿದ್ದು ಸುಣಗಾರ ಅವರು ಶಾಸಕ ಸತೀಶ ಜಾರಕಿಹೊಳಿ‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಟೇಬಲ್, ಗ್ಲಾಸ್ ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಪುಡಿ ಮಾಡಲಾಗಿದೆ. ಕುಲಪತಿ ಪ್ರೊ. ಶಿವಾನಂದ ಹೊಸಮನಿ ಅವರನ್ನು ಎಳೆದಾಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಬಿಡಿಸಲು ಬಂದ ವಿದ್ಯಾರ್ಥಿಗಳ ಮೇಲೆಯೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ವರದಿಯಾಗಿದೆ.

ಇನ್ನೊಂದು ಕಾರಣ ಸಮೀಕರಣಗೊಳಿಸುತ್ತ ಕಳೆದ ನಾಲ್ಕು ದಿನದ ಹಿಂದೆ ಆರ್ ಸಿ ಯು ಬಳಿ ರಾಷ್ಟ್ರೀಯ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣದ ಕಾಮಗಾರಿಗೆ ಯಮಕನಮರಡಿ ಶಾಸಕ ಸತೀಶ ಜಾರಕಿಹೋಳಿ ಹಾಗೂ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ವಿವಿ ಉಪಕುಲಪತಿ ಶಿವಾನಂದ ಹೊಸಮನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂಡರ ಪಾಸ್ ಕಾಮಗಾರಿಯನ್ನು ಬಿಜೆಪಿ ಸಂಸದ ಸುರೇಶ ಅಂಗಡಿ ಆಗಮಿಸಿ ಅಂದು ನೇರವೆರಿಸಿದ್ದರು. ಅತ್ಯುನ್ನತ ವಿಧ್ಯಾಧಿಕಾರಿ ಮೇಲೆಯೂ ರಾಜಕೀಯ ವ್ಯವಸ್ಥೆ ಹಲ್ಲೆ ನಡೆಸುವ ಮಟ್ಟಕ್ಕೆ ಇಳಿದದ್ದು ಜನತೆಗೆ ಖೇದ ಉಂಟು ಮಾಡಿದೆ.

The post ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ‌ ಮಾಡಿದ ಘಟನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.