ಉತ್ತಮ ಸಮಾಜಕ್ಕಾಗಿ

ರೆಡ್ ರಿಬ್ಬನ್ ಕಾರ್ಯಕ್ರಮದಲ್ಲಿ ನಾಗರತ್ನಾ ಅಭಿಮತ

0


ಬೆಳಗಾವಿ ನಗರದ ಶುಕ್ರವಾರದಂದು ಮರಾಠಾ ಮಂಡಳ ಮಹಾವಿದ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ದೈಹಿಕ ಸ್ವಾಸ್ಥ್ಯ ಅತ್ಯಂತ ಮುಖ್ಯವಾದದ್ದು, ಆ ನಿಟ್ಟಿನಲ್ಲಿ ಯುವ ಜನತೆ ಎಚ್ಚೇತ್ತುಕೊಂಡು ಮಹಾಮಾರಿಯಾದ ಏಡ್ಸ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಇಂದು ಮರಾಠಾ ಮಂಡಳ ಮಹಾವಿದ್ಯಾಲಯದಲ್ಲಿ “ರೆಡ್ ರಿಬ್ಬನ್ ಕ್ಲಬ್” ವತಿಯಿಂದ ನಡೆದ ಏಡ್ಸ್ ತಿಳುವಳಿಕೆ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ನಾಗರತ್ನಾ ರಾಮಗೌಡರ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ|| ಎ.ಬಿ. ಪವಾರ ಅವರು ಪ್ರತಿಕ್ರಿಯಿಸಿ, (ಸರ್ಕಾರ) ಸರಕಾರ ಸಮಾಜದ ಆರೋಗ್ಯಕ್ಕಾಗಿ ಮತ್ತು ಸ್ವಸ್ಥ ಭಾರತಕ್ಕಾಗಿ ಅನೇಕ ಸೌಕರ್ಯ, ಸವಲತ್ತುಗಳನ್ನು ನೀಡಿದ್ದಾಗ್ಯೂ, ನಾಗರೀಕರು ಅದರ ಸದುಪಯೋಗವನ್ನು ಸರಿಯಾಗಿ ಮಾಡಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.
ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮದ ಸಂಘಟಕರಾದ ಪ್ರೋ. ವಿಜಯಲಕ್ಷ್ಮೀ ತಿರ್ಲಾಪೂರ, ಸಭೆಯನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಿ.ಎಸ್.ಸಿ. ಪ್ರಥಮ ವರ್ಷದ ವಿದ್ಯಾರ್ಥಿ ಕೃಷ್ಣಾ ಪಾಟೀಲ ಪ್ರಾರ್ಥನೆ ಗೈದರು.
ಪ್ರೋ. ರೇಖಾ ಬಾವಡೆಕರ, ಪ್ರೋ. ಅಲಕಾ ಮುತಗೇಕರ, ಪ್ರೋ. ಕವಿತಾ ಹೊಸಕೋಟಿ, ಡಾ. ದಾಸೋಗ ಪ್ರೋ. ಅಂಚಿ, ಪ್ರೋ. ಬೆನ್ನಾಳಕರ, ಪ್ರೋ. ತೇಲಿ, ಪ್ರೋ.ಚವ್ಹಾಣ, ಪ್ರೋ.ಕರ್ಕಿ, ಪ್ರೋ. ಎಸ್.ಜಿ. ಸೊನ್ನದ, ಪ್ರೋ. ದುಮ್ಮಾವತ, ಡಾ. ರಾಂಪುರ ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.