ಉತ್ತಮ ಸಮಾಜಕ್ಕಾಗಿ

ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ

0

ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ

ಸಾಲ ಕುರಿತ ವಿಚಾರವಾಗಿ ರೈತರಿಗೆ ಕಿರುಕುಳ ನೀಡಿದರೆ, ಅಂತಹ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಹಾಕುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Kalaburagi News Kannada

ಕಲಬುರಗಿ : ಅಫಜಲಪುರ ತಾಲೂಕಿನ ಚೌಡಾಪೂರ ತಾಂಡ ಮತ್ತು ಗಬ್ಬೂರ (ಬಿ) ಗ್ರಾಮದಲ್ಲಿ ಬರ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆ ನಡೆಸಿ ಅವರು ಮಾತನಾಡಿದರು.

ಈ ಸಂರ‍್ಭದಲ್ಲಿ ರೇವೂರ(ಬಿ)ನಲ್ಲಿರುವ ಪ್ರಗತಿ ಕೃಷ್ಣ ಬ್ಯಾಂಕ್ ಅಧಿಕಾರಿ ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ರೈತ ಮಡಿವಾಳಪ್ಪ ಅಳಲು ತೋಡಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಸಮಸ್ಯೆ ಬಗೆಹರಿಯಲಿದ್ದು, ಈ ಬಗ್ಗೆ ಚಿಂತೆ ಮಾಡದಿರಿ ಎಂದು ದೈರ್ಯ ತುಂಬಿದರು.
ಬೆಳೆ ಸಮೀಕ್ಷೆ : ಚೌಡಾಪೂರ ತಾಂಡದ ಸಂತೋಷ್ ಶಿವಾಜಿ ಕೋಕರೆ ಅವರ ಹೊಲದಲ್ಲಿ ತೊಗರಿ ಬೆಳೆ ಸಮೀಕ್ಷೆ ನಡೆಸಿ ಮುಖ್ಯಮಂತ್ರಿಗಳು, ಗಿಡಗಳು ಫಸಲು ಕಟ್ಟದೆ ಇರುವುದಕ್ಕೆ ಕಾರಣಗಳೇನು ಎಂದು ಅಧಿಕಾರಿಗಳಿಗೆ ಮಾಹಿತಿ ಕೇಳಿದರು.

ವಿಳಂಬವಾಗಿ ಬಿತ್ತನೆ ಹಾಗೂ ಬಿತ್ತನೆ ಬಳಿಕ ತೇವಾಂಶದ ಕೊರತೆಯಿಂದ ಫಸಲು ಕಟ್ಟುತ್ತಿಲ್ಲ. ಗಿಡಗಳು ಇಷ್ಟೊತ್ತಿಗೆ ಒಂದರಿಂದ ಒಂದುವರೆ ಮೀಟರ್ ಬೆಳೆದು ಫಸಲು ಕಟ್ಟಾಬೇಕಾಗಿತ್ತು. ಆದರೆ, ಕೇವಲ ಒಂದು ಅಡಿ ಬೆಳೆದಿದೆ. ಇದೇ ಟಿಎಸ್೩ಆರ್ ತಳಿಯ ತೊಗರಿ ಗಿಡಗಳು, ಸೇಡಂನಲ್ಲಿ ಒಂದುವರೆ ಮೀಟರ್‍ನಷ್ಟು ಬೆಳೆದಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸುಗೂರು ಅವರು ವಿವರಿಸಿದರು.

ಉನ್ನತ ಅಧಿಕಾರಿಗಳ ಸಭೆ : ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಳೆ ನಾಶ ಕುರಿತಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.

ಬಳಿಕ, ಗಬ್ಬೂರ (ಬಿ) ಗ್ರಾಮದ ಮೊಹಮದ್ ಹುಸೇನಿ ಮೌಲಾ ಸಾಬ್ ಮಕದಮ್ ಅವರ ಹೊಲದಲ್ಲಿ ಉದ್ದು ಬೆಳೆಯನ್ನು ವೀಕ್ಷಿಸಿದರು.

ಟಿಎಯು-೧ ತಳಿಯ ಈ ಉದ್ದು ಬೆಳೆ ಕೂಡ ತೇವಾಂಶ ಇಲ್ಲದೆ ಹೂ ಬಿಡುವ ಹಂತದಲ್ಲಿ ನಾಶವಾಗಿದೆ. ಸರಿಯಾಗಿ ಬೆಳೆ ಬಂದರೆ, ಒಂದು ಗಿಡಕ್ಕೆ ೬೦ ರಿಂದ ೭೦ ಕಾಯಿಗಳ ಕಟ್ಟಿ, ೮ ರಿಂದ ೧೦ ಬೀಜಗಳು ಇರಬೇಕು.

ಆದರೆ, ಹೂ ಬಿಡುವ ಮುನ್ನ ೮ ರಿಂದ ೧೦ ದಿನಗಳ ಕಾಲ ನೀರಿಲ್ಲದೆ, ಇರುವುದರಿಂದ ಕೇವಲ ನಾಲ್ಕೈದು ಬೀಜಗಳು ಇವೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ, ಶಾಸಕರಾದ ಅಜಯ್ ಸಿಂಗ್, ಎಂ.ವೈ. ಪಾಟೀಲ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಹೆಬ್ಸಿಬಾ ರಾಣಿ ಕರ‍್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಕೃಷಿ ಇಲಾಖೆ ಉಪನರ‍್ದೇಶಕ ಡಾ. ಬಾಲರಾಜ್ ರಂಗರಾವ್, ಅತನೂರು ರೈತ ಸಂಘ ಕೇಂದ್ರದ ಕೃಷಿ ಅಧಿಕಾರಿ ಕವಿತಾ ಮುಂತಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು. ////

WebTitle : ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ – CM warns bank officials Regarding harassment farmers

>>> ಕರ್ನಾಟಕ ಕನ್ನಡ ನ್ಯೂಸ್ ಗಾಗಿ  ಕ್ಲಿಕ್ಕಿಸಿ ರಾಜಕೀಯ ವಿಭಾಗ  : Karnataka Politics News | Kannada Politics News | Kalaburagi News Online

Kannada Politics News

The post ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.