ಉತ್ತಮ ಸಮಾಜಕ್ಕಾಗಿ

ರೈಲ್ವೆ ಮೇಲ್ಸೇತುವೆ ಶೀಘ್ರ ಆರಂಭ :ಎಚ್ ಡಿ ರೇವಣ ್ಣ

0

#ರೈಲ್ವೆ ಮೇಲು ಸೇತುವೆ ಕಾಮಗಾರಿ ಶೀಘ್ರ ಪಾರಂಭ: ಹೆಚ್.ಡಿ. ಆರ್

#ಹಾಸನ ಅ.11: ನಗರದ ಎನ್.ಆರ್ ವೃತ್ತದಿಂದ ನೂತನ ಬಸ್ ನಿಲ್ದಾಣದ ವರೆಗಿನ ರೈಲ್ವೇ ಮೇಲು ಸೇತುವೆ ಕಾಮಗಾರಿ ಶೀಘ್ರವೇ ಪ್ರಾರಂಭ ಮುಂದಿನ 20 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದಿಂದ ಆಗಮಿಸಿದ ರೈಲ್ವೇ, ಲೋಕೋಪಯೋಗಿ ಮತ್ತು ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳೊಂದಿಗೆ ನಗರ ಸಂಚಾರ ಮಾಡಿದ ಸಚಿವರು ಈಗಾಗಲೇ ನಿಗಧಿಯಾಗಿರುವ ಹಾಗೂ ಆಗಬೇಕಿರುವ ಹೊಸ ರೈಲ್ವೇ ಯೋಜನೆಗಳ ಕುರಿತು ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿದರು.

ಹೊಳೆನರಸೀಪುರ ಪ್ಲೈಓವರ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಆದಷ್ಟು ಬೇಗ ಕಾಮಗಾರಿ ನಡೆಯಲಿದೆ ಎಂದು ಸಚಿವರು ಹೇಳಿದರು.

ಹಾಸನ ನೂತನ ಬಸ್ ನಿಲ್ದಾಣದ ಬಳಿ ರೈಲ್ವೆ ನಿಲ್ದಾಣ ಸ್ಥಳಾಂತರಗೊಳ್ಳಬೇಕು ಅದಕ್ಕೆ ಬೇಕಾದ ಜಾಗ ಈಗಾಗಲೇ ಲಭ್ಯವಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ ಅಲ್ಲದೆ ಬಸ್ಸ್ ಹಾಗೂ ರೈಲ್ವೆ ನಿಲ್ದಾಣದಿಂದ ನೇರವಾಗಿ ಬಿ.ಎಂ ರಸ್ತೆ ಮತ್ತು ಜಿಲ್ಲಾ ಆಸ್ಪತ್ರೆ ಬಳಿಗೆ ಸುಲಭವಾಗಿ ಸಾಗಲು ಅನುಕೂಲವಾಗುವಂತೆ ಮೇಲು ಸೇತುವೆ ನಿರ್ಮಾಣವಾಗಬೇಕಿದೆ. ಇದು ಕಳೆದ ಹತ್ತು ವರ್ಷಗಳ ಹಿಂದೆಯೆ ರೂಪಿಸಿದ್ದ ಯೋಜನೆಯಾಗಿದ್ದು ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕೇಂದ್ರ ಹಾಗೂ ರಾಜ್ಯದ ರೈಲ್ವೇ ಅಧಿಕಾರಿಗಳಿಗೆ ಕೇಂದ್ರ ಸಚಿವರೊಂದಿಗೆ ನಡೆಸಿದ ಚರ್ಚಿಸಿ ಹಾಗೂ ತಮ್ಮ ಚಿಂತನೆಯಲ್ಲಿರುವ ಯೋಜನೆಗಳ ಬಗ್ಗೆ ಸಚಿವರು ವಿವರಿಸಿದರು. ಹಾಸನ ನಗರ ಅತ್ಯಂತ ಮಾದರಿಯಾಗುವಂತೆ ಸಾರಿಗೆ ವ್ಯವಸ್ಥೆ ರೂಪಿಸುವುದು ತಮ್ಮ ಕನಸಾಗಿದೆ, ಲೋಕೋಪಯೋಗಿ ಇಲಾಖೆಯಿಂದ ಕೆಲವು ಸಂಪರ್ಕ ರಸ್ತೆಗಳ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಯಿಂದ ಗರಿಷ್ಠ ಸಹಕಾರ ನಿರೀಕ್ಷೀಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಹಾಸನ ನಗರದ ಮೇಲು ಸೇತುವೆ ಕಾಮಗಾರಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮುಂದಿನ 20 ತಿಂಗಳೊಳಗೆ ಪೂರ್ಣಗೊಳ್ಳಬೇಕಿದೆ ಈಗಾಗಲೇ ತಾವು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಕೇಂದ್ರ ರೈಲ್ವೆ ಸಚಿವರಲ್ಲಿ ಭೇಟಿ ನೀಡಿದಾಗ ಜಿಲ್ಲೆಯ ಎಲ್ಲಾ ಯೋಜನೆಗಳಿಗೆ ಪೂರಕ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಪರಿಶೀಲನೆಗಾಗಿ ಇಂದು ಕೇಂದ್ರದಿಂದ ಅಧಿಕಾರಿಗಳನ್ನು ಕಳುಸಿದ್ದಾರೆ ಅವರೊಂದಿಗೆ ಸ್ಥಳ ಪರಿಶೀಲಿಸಲಾಗುತಿದೆ ಎಂದರು.

ಜಿಲ್ಲೆಯ ಅಭಿವೃದ್ದಿಗಾಗಿ ಎಲ್ಲಾ ಇಲಾಖಾ ಆಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸತತ ಬರ ಹಾಗೂ ಅಭಿವೃದ್ದಿ ಕಾಮಗಾರಿಗಳಲ್ಲಿ ಅಗಿದ್ದ ಹಿನ್ನಡೆಯನ್ನು ಮರೆ ಮಾಚುವಂತೆ ಜಿಲ್ಲಾಭಿವೃದ್ದಿ ಕಾನಬೇಕು ಎಂದು ಸಚಿವರು ಹೇಳಿದರು.[   category  hassan news ]

The post ರೈಲ್ವೆ ಮೇಲ್ಸೇತುವೆ ಶೀಘ್ರ ಆರಂಭ :ಎಚ್ ಡಿ ರೇವಣ ್ಣ appeared first on Prajaa News.

Source link

ರೈಲ್ವೆ ಮೇಲ್ಸೇತುವೆ ಶೀಘ್ರ ಆರಂಭ :ಎಚ್ ಡಿ ರೇವಣ ್ಣ

Leave A Reply

 Click this button or press Ctrl+G to toggle between Kannada and English

Your email address will not be published.