ಉತ್ತಮ ಸಮಾಜಕ್ಕಾಗಿ

ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಯುವ ಲಕ್ಷಣಗಳು ಸಿಗುತ್ತಿಲ್ಲ :ಸಂಸದ ಸುರೇಶ ಅಂಗಡಿ ಅಸಮಧಾನ

0

ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಯುವ ಲಕ್ಷಣಗಳು ಸಿಗುತ್ತಿಲ್ಲ :ಸಂಸದ ಸುರೇಶ ಅಂಗಡಿ ಅಸಮಧಾನ

ಬೆಳಗಾವಿ: ಗಣೇಶೋತ್ಸವದ ಒಳಗಾಗಿಯೇ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು ಆದರೆ ಇನ್ನು ಮುಗಿಯುವ ಲಕ್ಷಣಗಳು ಸಿಗುತ್ತಿಲ್ಲ ಎಂದು ಸಂಸದ ಸುರೇಶ ಅಂಗಡಿ ಅಸಮಧಾನ ವ್ಯಕ್ತಪಡಿಸಿದರು.

ಇಂದು ತಮ್ಮ‌ಕಚೇರಿ ಸಭಾಂಗಣದಲ್ಲಿ ರೈಲ್ವೆ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದರು.‌ ನವ್ಹೆಂಬರ್ 20ರೊಳಗೆ ನೂತನ ಬ್ರಿಡ್ಜ್ ಸೇವೆಗೆ ನೀಡಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.

ರಾಷ್ಟ್ರಪತಿ ಬೆಳಗಾವಿಗೆ ಬಂದಾಗಲೇ ರಸ್ತೆ ರಿಪೇರಿ ಮಾಡಿದವರು! ಎಂದು ಸಂಸದ ಸುರೇಶ ಅಂಗಡಿ ಮಾರ್ಮಿಕವಾಗಿ ಈ ಸಂದರ್ಭ ವ್ಯಂಗ್ಯವಾಡಿದರು.

ನವೆಂಬರ್ 20ರ ಸಮಯ ಯಾಕೆ ಬೇಕು. ಜನರಿಗೆ ಸಾಕಷ್ಟು ಸಂಕಷ್ಟವಾಗಿದೆ. ಅಕ್ಟೋಬರ್ ೧೫ಕ್ಕೆ ನೂತನ ಬ್ರಿಡ್ಜ್ ಪೂಜೆ ಮಾಡಿಸೋಣ ಎಂದು ಸಂಸದ ಸುರೇಶ ಅಂಗಡಿ ಅಧಿಕಾರಿಗಳಿಗೆ ಒತ್ತಾಯ ಪಡಿಸಿ, ಹಗಲು ರಾತ್ರಿ ಕೆಲಸ ಮಾಡಿ ಎಂದು ಸೂಚಿಸಿದರು. ಓವರಬ್ರಿಡ್ಜ್ ಮುಕ್ತಾಯದ ಎರಡೂ ಇಕ್ಕೆಲಗಳಲ್ಲಿ ಯಾವುದೇ ಕಾರಣಕ್ಕೂ ರಸ್ತೆ ‘ಬಾಟಲ್ ನೆಕ್’ ಆಗಬಾರದು.

ಬ್ರಿಡ್ಜ್ ಎರಡೂ ಕೊನೆಯಲ್ಲಿ ಸಾಕಷ್ಟು ರಸ್ತೆ ವಿಶಾಲತೆ ಕಾಣಬೇಕು ಎಂದು ಸೂಚಿಸಿದರು. ಪಾದಚಾರಿ ಮಾರ್ಗ ಸೇರಿದಂತೆ ಬಹಳ ಅನುಕೂಲಕರ ಬ್ರಿಡ್ಜ್ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೂರನೇ ರೈಲ್ವೇ ಗೇಟ್ ಓವರ್ ಬ್ರಿಡ್ಜ್ ಕಾಮಗಾರಿಗೆ ಅಕ್ಟೋಬರ್ 15ಕ್ಕೆ ಪೂಜೆ ಮಾಡಲಾಗುವುದು ಎಂದು ಸಂಸದ ಅಂಗಡಿ ತಿಳಿಸಿದರು. ಮಹಾನಗರ ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಹಾಗೂ ರೈಲ್ವೇ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.////

The post ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಯುವ ಲಕ್ಷಣಗಳು ಸಿಗುತ್ತಿಲ್ಲ :ಸಂಸದ ಸುರೇಶ ಅಂಗಡಿ ಅಸಮಧಾನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.