ಉತ್ತಮ ಸಮಾಜಕ್ಕಾಗಿ

ಲಕ್ಷಾಂತರ ಜನರ ಮಧ್ಯೆ ಆಕರ್ಷಕ ಗಣೇಶ ಮೆರವಣಿಗೆ: ಗಣ್ಯರ ವೀಕ್ಷಣೆ

0

ಲಕ್ಷಾಂತರ ಜನರ ಮಧ್ಯೆ ಆಕರ್ಷಕ ಗಣೇಶ ಮೆರವಣಿಗೆ: ಗಣ್ಯರ ವೀಕ್ಷಣೆ

ಬೆಳಗಾವಿ: ನಗರದ ಬೋಗಾರವೆಸ್ ವೃತ್ತದಲ್ಲಿ ಗಣೇಶ ವಿಸರ್ಜನಾ ಉತ್ಸವ ಮೆರವಣಿಗೆ ಮೇರೆ ಮೀರಿತು. ನಗರದ 300ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಈ ವೃತ್ತದ ಮೂಲಕ ಕಪಿಲೇಶ್ವತ ಹೊಂಡದತ್ತ ಪ್ರಯಾಣ ಬೆಳೆಸಿದವು.

ಬೋಗಾರವೆಸ್ ವೃತ್ತ ಮತ್ತು ರಸ್ತೆಯುದ್ದಕ್ಕೂ ಲಕ್ಷಾಂತರ ಜನ ಭಕ್ತಾದಿಗಳು ಸೇರಿ ಸಂಭ್ರಮದ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು. ಕಪಿಲೇಶ್ವರ ದೇವಸ್ಥಾನ ಬಳಿ ಎರಡು ಹೊಂಡಗಳಲ್ಲಿ ಗಣೇಶ ವಿಸರ್ಜನೆ ನಡೆಯಿತು.

ಶಾಸಕ ಸತೀಶ ಜಾರಕಿಹೊಳಿ, ಸಂಸದ ಸುರೇಶ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೇರಿ ಹಿರಿಯ ಅಧಿಕಾರಿಗಳು ಗಣ್ಯರು ವೇದಿಕೆ ಮೂಲಕ ಮೆರವಣಿಗೆ ವೀಕ್ಷಿಸಿದರು.

ಸಂಜೆ 6ಕ್ಕೆ ಮೆರವಣಿಗೆ ಸಾಲಿನ ಪಾಲಿಕೆ ಗಣೇಶನಿಗೆ ಕೊನೆಯ ವಿದಾಯ

News Belgaum-ಲಕ್ಷಾಂತರ ಜನರ ಮಧ್ಯೆ ಆಕರ್ಷಕ ಗಣೇಶ ಮೆರವಣಿಗೆ: ಗಣ್ಯರ ವೀಕ್ಷಣೆನಿನ್ನೆ ಸಂಜೆ 4ಕ್ಕೆ ಪ್ರಾರಂಭವಾಗಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಇಂದು ಸಂಜೆ 6ಕ್ಕೆ ಮುಕ್ತಾಯವಾಗಿದೆ. ಮಹಾನಗರ ಪಾಲಿಕೆಯ ಗಣೇಶನಿಗೆ ಕೊನೆಯ ವಿಸರ್ಜನೆ ನೀಡಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಎಂಜಿನೀಯರಗಳಾದ ಲಕ್ಷ್ಮೀ ನಿಪ್ಪಾಣಿಕರ, ಆರ್. ಎಸ್. ನಾಯಕ, ಆರೋಗ್ಯಾಧಿಕಾರಿ ಶಶಿಧರ ನಾಡಗೌಡ, ಪರೊಸರ ಅಧಿಕಾರಿ ಉದಯಕುಮಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

The post ಲಕ್ಷಾಂತರ ಜನರ ಮಧ್ಯೆ ಆಕರ್ಷಕ ಗಣೇಶ ಮೆರವಣಿಗೆ: ಗಣ್ಯರ ವೀಕ್ಷಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.