ಉತ್ತಮ ಸಮಾಜಕ್ಕಾಗಿ

ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ನಿವಾಸದಲ್ಲಿ ಬೀಡುಬಿಟ್ಟ ಐಟಿ ಟೀಮ್ 3ನೇ ದಿನವೂ ಐಟಿ ಶಾಕ್!

0

ಬೆಳಗಾವಿ: ಐಟಿ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ `ಕೈ’ ನಾಯಕರ ಬೆವರಿಳಿಸುತ್ತಿದ್ದಾರೆ. ಮೂರು ದಿನ ಕಳೆದರೂ ಐಟಿ ಅಧಿಕಾರಿಗಳ ಶೋಧ ಕಾರ್ಯ ಇನ್ನೂ ಮುಗಿದಿಲ್ಲ. ದಾಳಿ ಕಾಲಕ್ಕೆ ಕೆಲವೊಂದು ಬೆಚ್ಚಿ ಬೀಳಿಸುವÀ ದಾಖಲೆಗಳು ಪತ್ತೆಯಾಗಿದ್ದೇ ತಪಾಸಣೆ ಕಾರ್ಯ ಮುಂದುವರೆಸಲು ಕಾರಣವಾಗಿದೆ.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಳಗಾವಿಯ ಕುವೆಂಪು ನಗರದ ನಿವಾಸ, ಅವರ ಸಹೋದರಿಯ ನಿವಾಸದಲ್ಲಿ ಬೀಡುಬಿಟ್ಟಿರುವ ಹತ್ತಾರು ಐಟಿ ಅಧಿಕಾರಿಗಳು ಇಂಚಿಂಚು ದಾಖಲೆಗಳನ್ನು ಶೋಧಿಸುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಹೆಬ್ಬಾಳ್ಕರ್ ನಿವಾಸದಲ್ಲಿ ಹರ್ಷ ಶುಗರ್ರ್ಸ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಕಡತಗಳು, ಹಣಕಾಸಿನ ದಾಖಲೆಗಳು, ಆಸ್ತಿ ಖರೀದಿ ಪತ್ರಗಳು ಸಿಕ್ಕಿವೆ ಎನ್ನಲಾಗಿದ್ದು, ನಿಯಮಬಾಹಿರವಾಗಿ ಹಣಕಾಸು ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಶೋದ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಇತ್ತ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಐಟಿ ರೇಡ್ ತಲೆನೋವಾಗಿ ಪರಿಣಮಿಸಿದೆ. ಕಳೆದ ಮೂರು ದಿನಗಳಿಂದ ಐಟಿ ಶೋಧ ಮುಂದುವರೆದಿದ್ದು, ತನಿಖೆಗೆ ಸಹಕರಿಸುವ ನೆಪದಲ್ಲಿ ಸಚಿವರನ್ನು ಮನೆಯಲ್ಲೇ ಕೂರಿಸಿರುವುದು ಗಮನಾರ್ಹವಾಗಿದೆ. ಹೀಗಾಗಿ ಶನಿವಾರ ಅಂಬಿಗರ ಚೌಡಯ್ಯ ಜಯಂತಿಯಲ್ಲೂ ಪಾಲ್ಗೊಳ್ಳದೆ ಅವರ ಸಹೋದರ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಯಿತು.
ಉನ್ನತ ಮೂಲಗಳ ಪ್ರಕಾರ, ಸಚಿವ ಜಾರಕಿಹೊಳಿ ನಿವಾಸದಲ್ಲೂ ಭಾರೀ ಪ್ರಮಾಣದ ಆಸ್ತಿ ದಾಖಲೆಪತ್ರಗಳು ಪತ್ತೆಯಾಗಿವೆ. ಹೀಗಾಗಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.