ಬೆಳಗಾವಿ:17 1ಶ್ರೀಮತಿ. ನೇಹಾ ಅಬ್ದುಲ್‍ರಜಾಕ ಶೇಖ ಸಾ: ಅಜಂ ನಗರ, ಬೆಳಗಾವಿ ಇವಳ ಮದುವೆ ದಿನಾಂಕ: 25/04/2014 ರಂದು ಅಬ್ದುಲ್‍ರಜಾಕ ಇಸ್ಮಾಯಿಲ್ ಶೇಖ ಸಾ: ಆಕಾಶವಾಣಿ, ಧಾರವಾಡ ಇವನೊಂದಿಗೆ ಆಗಿದ್ದು, ಇವಳಿಗೆ ಗಂಡ, ಅತ್ತೆ, ಮೈದುನ ಮತ್ತು ನಾದಿಣಿ ಇವರೆಲ್ಲರೂ ಸೇರಿ, ಫಿರ್ಯಾದಿಗೆ ಮದುವೆ ಆದಾಗಿನಿಂದ ವರದಕ್ಷಿಣೆ ಬೇಡಿಕೆ ಇಟ್ಟು, ಮಾನಸಿಕ ದೈಹಿಕ, ಕಿರುಕುಳ ನೀಡುತ್ತಿದ್ದು, ದಿನಾಂಕ: 02/01/2017 ರಂದು ಫಿರ್ಯಾದಿಗೆ ಹೊಡಿಬಡಿ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಮನೆಯಿಂದ ಹೊರಗೆ ಹಾಕಿದ್ದು, ದಿನಾಂಕ: 15/01/2017 ರಂದು ರಾತ್ರಿ 11 ಗಂಟೆಯ ಸುಮಾರಿಗೆ ತಂಟೆ ತೆಗೆದು, ಅವಾಚ್ಯ ಬೈದು, ಗಲಾಟೆ ಮಾಡಿದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಿನಾಂಕ: 16/01/2017 ರಂದು ಕಲಂ: 498(ಎ), 323, 504, 506, ಸಕ 34 ಐಪಿಸಿ ಮತ್ತು 3, 4 ವರದಕ್ಷಿಣೆ ಕಿರುಕುಳ ಕಾಯ್ದೆ 1961 ನೇದ್ದರಡಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.