ಉತ್ತಮ ಸಮಾಜಕ್ಕಾಗಿ

ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

0

ದಿನಾಂಕ 29/9/2018 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಸ್ವಚ್ಛತಾ ಹಿ ಸೇವಾ’ ಕರೆಯ ಅಂಗವಾಗಿ ಬೆಂಗಳೂರಿನ ಎಂ.ಎಲ್.ಎ.ಕಾಲೇಜು, ಯೂತ್ ರೆಡ್ ಕ್ರಾಸ್ ವಿಭಾಗದ ವಿದ್ಯಾರ್ಥಿಗಳು ಮಲ್ಲೇಶ್ವರಂನ ಬಿಬಿಎಂಪಿ ಕಚೇರಿ ಹಿಂದಿನ ದೋಬಿ ಘಾಟ್ ಬಳಿಯ ರಸ್ತೆಯನ್ನು ಸ್ವಚ್ಚಗೊಳುಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಮಾದರಿಯಾದರು.

ಇನ್ನು ಇದೇ ವೇಳೆ ಮಾತನಾಡಿದ ಬಿ ಪ್ಯಾಕ್ ಸಂಸ್ಥೆಯ ಸ್ವಯಂ ಸೇವಕಿ ಶ್ರೀಮತಿ ಕಾವೇರಿ ಕೇದಾರನಾಥ್ , ಸ್ವಚ್ಚ ಭಾರತ್ ಮಿಷನ್ ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಅದನ್ನ ನಾವುಗಳು ಕೂಡಾ ಅನುಸರಿಸಬೇಕು. ದೇಶ ಕಸ ಮುಕ್ತವಾಗುವುದಕ್ಕೆ ಸುತ್ತ ಮುತ್ತಲಿನ ಪರಿಸರವನ್ನ ಸ್ವಚ್ಚಂದವಾಗಿಡುವ ಮೂಲಕ ತಮ್ಮ ಬಡಾವಣೆ ಮತ್ತು ಮನೆಯನ್ನ ಸ್ವಚ್ಚವಾಗಿಟ್ಟು ಕೊಳ್ಳಬೇಕು. ಎಲ್ಲೆಂದರಲ್ಲಿ ಕಸವನ್ನ ಎಸೆದು ಪರಿಸರ ಸೇರಿದಂತೆ ನಗರವನ್ನ ಹಾಳು ಮಾಡಬಾರದು. ಬದಲಿಗೆ ಕಸ ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಬೇಕು. ಇನ್ನು ತಮ್ಮ ಮನೆಯಲ್ಲಿನ ತ್ಯಾಜ್ಯವನ್ನ ಒಣಕಸ ಮತ್ತು ಹಸಿಕಸವನ್ನ ಬೇರ್ಪಡಿಸಿ ಮನೆಯ ಬಾಗಿಲಿಗೆ ಬರುವ ಬಿಬಿಎಂಪಿಯ ಕಸದ ವಾಹನಕ್ಕೆ ನೀಡುವ ಮೂಲಕ ಪರಿಸರವನ್ನ ತಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಚವಾಗಿಡಬೇಕು ಎಂದು ತಿಳಿಸಿದರು.

ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದಲ್ಲಿ ಎಂ.ಎಲ್.ಎ. ಎ.ಎಚ್. ಎಲ್ ಕಾಲೇಜಿನ ಯೂಥ್ ರೆಡ್ ಕ್ರಾಸ್ ವಿಭಾಗದ 34 ಮಂದಿ ಸ್ವಯಂಸೇವಕರು, ಮುಖ್ಯಸ್ಥೆ ಶ್ರೀಮತಿ ಅಶ್ವಿನಿ.ವಿ, ಬಿಬಿಎಂಪಿ ಮುಖ್ಯಸ್ಥರು ಮತ್ತು ಅಧಿಕಾರಿಗಳು, ಭಾಗವಹಿಸಿದ್ದರು.[  categori general news ]

The post ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ appeared first on Prajaa News.

The post ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.