ಉತ್ತಮ ಸಮಾಜಕ್ಕಾಗಿ

ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ

0

ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ

5ನೇ ಮಹಡಿಯಿಂದ ಜಿಗಿದು ವೈದ್ಯನ ಪತ್ನಿ ಸಾವು

ವೈದ್ಯರೊಬ್ಬರ ಪತ್ನಿ ಅಪಾರ್ಟ್ಮೆಂಟ್ ನ 5 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು, ತನ್ನ ಪತಿ ನೋಡ ನೋಡುತ್ತಿದ್ದಂತೆ ಪ್ರಾಣ ಬಿಟ್ಟಿದ್ದರು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದಿದೆ.

ರಾಜರಾಜೇಶ್ವರಿ ನಗರ ಉತ್ತರಹಳ್ಳಿ ಸಮೀಪದಲ್ಲಿನ ‘ಮಂತ್ರಿ ಆಲ್ಫೊಲೈನ್’  ಎಂಬ ಅಪಾರ್ಟ್‌ಮೆಂಟ್ ನ 5ನೇ ಮಹಡಿ ಇಂದ ಜಿಗಿದು ಸೋನಾಲ್ ಅಗರ್ವಾಲ್ (25) ಎಂಬ ವೈದ್ಯನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ತಿರುವು ಸಿಕ್ಕಿದ್ದು , ಪಕ್ಕದ ಮನೆಯ ವಸ್ತುಗಳನ್ನು ಕದಿಯುವ ನಿಟ್ಟಿನಲ್ಲಿ ಹೋಗಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ >>> ನಕಲಿ ಬ್ರೌನ್ ಶುಗರ್ ಮಾರಾಟ, ಇಬ್ಬರ ಬಂಧನ

ಖಾಸಗಿಯ ಕಂಪನಿ ಹೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಸೋನಾಲ್,  ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಆಸ್ಪತ್ರೆಯ ವೈದ್ಯ ಅವಿನಾಶ್ ಎಂಬುವರ ಪತ್ನಿ.

3 ವರ್ಷಗಳ ಹಿಂದೆ ದಂಪತಿಗಳಿಗೆ ವಿವಾಹವಾಗಿತ್ತು ಹಾಗೂ ಈ ದಂಪತಿಗಳಿಗೆ ಎರಡು ತಿಂಗಳ ಮಗು ಸಹ ಇದೆ.

ಭಾನುವಾರ ಸಂಜೆ ಪ್ಲಾಟ್ ನ ಕೆಳ ಮಹಡಿಯಲ್ಲಿ ಅವಿನಾಶ್ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿರುವಾಗ. ಪತ್ನಿ ಸೋನಾಲ್, ಏಕಾಏಕಿ ಮಹಡಿಯಿಂದ ಕೆಳಗಡೆ ಜಿಗಿದಿದ್ದರು. ಮೇಲಿನಿಂದ ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು.

ಅಲ್ಲೇ ಇದ್ದ ಪತಿಯು ಸಹಾಯಕ್ಕೆ ಮುಂದಾಗುವುದರಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಆರ್ ಆರ್ ನಗರ ಪೊಲೀಸ್ ತನಿಖೆ ಆರಂಭಿಸಿ ಮೃತ ಸೋನಾಲ್ ಅಗರ್‍ವಾಲ್ ಒಳ ಉಡುಪುಗಳಲ್ಲಿ ಚಿನ್ನದ ಸರ, ಹಣ, ಕೀ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಕಳ್ಳತನ ಮಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ >>>ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ

ಸಿಕ್ಕ ಕೀ ಅವರದೇ ಪ್ಲಾಟ್ ನದ್ದಾಗಿದ್ದು , ಹಣ ಹಾಗೂ ಚಿನ್ನಾಭರಣ ಯಾರದು ಎಂದು ತಿಳಿದು ಬಂದಿಲ್ಲ. ಅಲ್ಲದೆ ಮುಖ್ಯವಾಗಿ ಸೋನಾಲ್ ಅವರ ಆತ್ಮಹತ್ಯೆಗೂ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ವಿಚಾರಣೆಗೆ ಪತಿಯನ್ನು ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ, ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.////

WebTitle : ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ – Doctor’s wife commits suicide, suspect of theft

>>> ಹೆಚ್ಚಿನ ಕ್ರೈಂ ನ್ಯೂಸ್ ಗೆ  ಕ್ಲಿಕ್ಕಿಸಿ : Kannada Crime News | Karnataka Crime News

Kannada Crime News |
Kannada News |
Karnataka Crime News

The post ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ appeared first on News Belgaum.

Source link

ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ

Leave A Reply

 Click this button or press Ctrl+G to toggle between Kannada and English

Your email address will not be published.