ಉತ್ತಮ ಸಮಾಜಕ್ಕಾಗಿ

ಶಾಂತ ಗಣೇಶ ವಿಸರ್ಜನೆಗೆ ಡಿಸಿ ಮನವಿ: ಮಾಧ್ಯಮಗಳಿಗೆ ಒಂದೇ ವೇದಿಕೆ: ಶಾಸಕ ಅಭಯ ಪಾಟೀಲ

0

ಶಾಂತ ಗಣೇಶ ವಿಸರ್ಜನೆಗೆ ಡಿಸಿ ಮನವಿ: ಮಾಧ್ಯಮಗಳಿಗೆ ಒಂದೇ ವೇದಿಕೆ: ಶಾಸಕ ಅಭಯ ಪಾಟೀಲ

ಬೆಳಗಾವಿ: 375 ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗಿವೆ ಎಂದು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ತಿಳಿಸಿದರು. ಇಂದು ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಗಣೆಶೋತ್ಸವ ವಿಸರ್ಜನಾ ಶಾಂತಿ ಸಭೆಯಲ್ಲಿ ಮಾತನಾಡಿ ಒಟ್ಟು ನಗರ ಮತ್ತು ಗ್ರಾಮೀಣ ಸೇರಿ 1074 ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.

185 ಸಿಸಿಟಿವಿ ಅಳವಡಿಸಲಾಗಿದೆ. 2000ಹೆಚ್ಚುವರಿ ಪೊಲೀಸರು ಬೆಳಗಾವಿಗೆ ಬಂದು ಸೇರಲಿದ್ದಾರೆ. ಸಾರ್ವಜನಿಕರು & ಗಣೇಶ ಮಹಾಮಂಡಳಿಗಳು ಹೈ ಡೆಸಿಬಲ್ ಬಳಕೆ ಮಾಡದೇ, 75ಡೆಸಿಬಲ್ ಒಳಗೇ ಧ್ವನಿವರ್ಧಕ ಮಾತ್ರ ಬಳಸಬೇಕು ಎಂದು ಮನವಿ ಮಾಡಿದರು. ವಿಸರ್ಜನೆ ದಿನ ಜಿಲ್ಲಾಧಿಕಾರಿ & ಪೊಲೀಸ್ ಆಯುಕ್ತರು ಒಂದೆಡೆ ಕುಳಿತು ಮೆರವಣಿಗೆ ಅವಲೋಕಿಸುತ್ತಾರೆ ಎಂದು ಮಾಹಿತಿ ನೀಡಿದರು. ಶಾಸಕ ಅಭಯ ಪಾಟೀಲ ಮಾತನಾಡಿ ರಾತ್ರಿ 2ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಚಾಲ್ತಿಯಲ್ಲಿಡಬೇಕು ಎಂದು ಒತ್ತಾಯಿಸಿದರು.

News Belgaum-ಶಾಂತ ಗಣೇಶ ವಿಸರ್ಜನೆಗೆ ಡಿಸಿ ಮನವಿ: ಮಾಧ್ಯಮಗಳಿಗೆ ಒಂದೇ ವೇದಿಕೆ: ಶಾಸಕ ಅಭಯ ಪಾಟೀಲ 1ಪಾಲಿಕೆ ಸಿದ್ಧ:ಬೆಳಗಾವಿ ದಕ್ಷಿಣಲ್ಲಿ 6, ಉತ್ತರದಲ್ಲಿ 2 ವಿಸರ್ಜನಾ ಹೊಂಡಗಳು ಇವೆ. ಸರಾಸರಿ 18 ಅಡಿ ನೀರು ಹೊಂಡದಲ್ಲಿ ತುಂಬಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಜುಪಟುಗಳು ಹೊಂಡಗಳ ಸುತ್ತ ಇರಲಿದ್ದಾರೆ. ಸ್ವಚ್ಛತಾ ಟೀಂ ಕೆಲಸದಲ್ಲಿ ಇರಲಿದ್ದಾರೆ. ಬೋಗಾರವೆಸನಲ್ಲಿ 500 ಜನರ ಗ್ಯಾಲರಿ ಇರಲಿದೆ. ವಿಐಪಿ ಮತ್ತು ಮಾಧ್ಯಮ ವೇದಿಕೆ ಬೋಗಾರವೆಸನಲ್ಲಿ ಮಾಡಲಾಗಿದೆ. 725ಫೋಕಸ್ ಲೈಟ್ ಗಳನ್ನು ಹಾಕಲಾಗಿದೆ. ಪಾಲಿಕೆ ಸಿಬ್ಬಂಧಿ ಹಗಲು ರಾತ್ರಿ ಶ್ರಮಿಸಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಸುದ್ದಿ ಮಾಧ್ಯಮಗಳಿಗೆ ಒಂದೇ ವೇದಿಕೆ!:ಮಿಡಿಯಾದವರಿಗೆ ಒಂದೇ ಒಂದು ವೇದಿಕೆ ಮಾತ್ರ ಹಾಕಲು ಬೋಗಾರವೆಸ್ ನಲ್ಲಿ ಕೊಡುವಂತೆ ಶಾಸಕ ಅಭಯ ಪಾಟೀಲ ಸಭೆಯಲ್ಲಿ ಒತ್ತಾಯಿಸಿದರು. ಮಾಧ್ಯಮಗಳಿಂದ ಮೆರವಣಿಗೆ ಮುಂದೆ ಚಲಿಸುತ್ತಿಲ್ಲ. ಒಂದೆಡೆ ಎಲ್ಲಾದರೂ ನಿಂತು ಶೂಟ್ ಮಾಡಿಕೊಳ್ಳಲಿ ಎಂದು ಅಭಯ ಪಾಟೀಲ ಸಲಹೆ ನೀಡಿದರು. ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಸಹ ಶಾಸಕರ ಮಾತಿಗೆ ಸಹಮತ ಸೂಚಿಸಿ ಮಾಧ್ಯಮಗಳು ಬಹಳಷ್ಟು ವೇದಿಕೆ ಹಾಕುವಂತಿಲ್ಲ. ಒಂದೇ ವೇದಿಕೆಯಲ್ಲಿ ಎಲ್ಲರೂ ಇದ್ದು ಪ್ರಸಾರ ಮಾಡಬೇಕು ಎಂದು ತಿಳಿಸಿದರು.

ಮದ್ಯ ನಿಷೆಧ:ಸೆ. 23ರಿಂದ 24ರ ಸಂಜೆವರೆಗೆ ಮದ್ಯ ನಿಷೇಧ ಮಾಡಲಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ನಿಷೇಧ ವಿಸ್ತರಿಸಲಾಗುವುದು ಎಂದು ಡಿಸಿ ಮತ್ತು ಕಮಿಷ್ನರ್ ತಿಳಿಸಿದರು. ಜಿಲ್ಲಾ ಪಂಚಾಯಿತಿ, ಪೊಲೀಸ್, ಹೆಸ್ಕಾಂ, ಲೊಕೋಪಯೋಗಿ, ಅರಣ್ಯ, ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗವಹಿಸಿದರು. ಡಿಸಿ ಎಸ್. ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ, ಸಿಇಓ ಆರ್. ರಾಮಚಂದ್ರನ್, ಡಿಸಿಎಫ್ ಎಂ. ವಿ. ಅಮರನಾಥ, ಡಸಿಪಿ ಮಹಾನಿಂಗ ನಂದಗಾವಿ, ಎಡಿಸಿ ಡಾ. ಎಚ್. ಬೂದೆಪ್ಪ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ತಹಶೀಲ್ದಾರ ಮಂಜುಳಾ ಶಾಸಕರಾದ ಅಭಯ ಪಾಟೀಲ, ಪಾಲಿಕೆ ಎಂಜಿನೀಯರ್ ಲಕ್ಷ್ಮೀ ನಿಪ್ಪಾಣಿಕರ, ಆರ್. ಎಸ್. ನಾಯಕ, ಗಣೆಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

The post ಶಾಂತ ಗಣೇಶ ವಿಸರ್ಜನೆಗೆ ಡಿಸಿ ಮನವಿ: ಮಾಧ್ಯಮಗಳಿಗೆ ಒಂದೇ ವೇದಿಕೆ: ಶಾಸಕ ಅಭಯ ಪಾಟೀಲ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.