ಉತ್ತಮ ಸಮಾಜಕ್ಕಾಗಿ

ಶಿಕ್ಷಕರ ಸಮಸ್ಯೆ ಗಳಿಗೆ ಸರಕಾರ ತ್ವರಿತ ಸ್ಪಂದಿಸಲಿ; ಧರಣಿ ಎಚ್ಚರಿಕೆ

0

ಶಿಕ್ಷಕರ ಸಮಸ್ಯೆ ಗಳಿಗೆ ಸರಕಾರ ತ್ವರಿತ ಸ್ಪಂದಿಸಲಿ; ಧರಣಿ ಎಚ್ಚರಿಕೆ

ಬೆಳಗಾವಿ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ(ರಿ) ಬೆಂಗಳೂರು, ಬೆಳಗಾವಿ ಜಿಲ್ಲಾ ಘಟಕ ಸೆ.ರಂದು ಶನಿವಾರ ಸಂಜೆ 4 ಗಂಟೆಗೆ ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು .

ಇದೇ ವೇಳೆ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ರಾಮು ಗುಗವಾಡ, ಸರಕಾರ ಶಿಕ್ಷಕರ ಸಮಸ್ಯೆ ಗಳಿಗೆ ತ್ವರಿತ ಸ್ಪಂದನೆ ದೊರಕದಿದ್ದರೆ ನವೆಂಬರ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಒಂದು ದಿನ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು.

ಶಿಕ್ಷಕರ ಹಲವು ಸಮಸ್ಯೆಗಳಾದ ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ಪ್ರತ್ಯೇಕಿಸಿ ವೈಯಕ್ತಿಕ ವೇತನ ಪರಿಗಣಿಸುವಿಕೆ,1/8/2008ರ ನೇಮಕಾತಿ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು, ನೂತನ ಪಿಂಚಣಿ ರದ್ದುಪಡಿಸಿ ಹಳೆ ಪಿಂಚಣಿ ಜಾರಿಗೊಳಿಸುವುದು,

ವಿದ್ಯಾರ್ಥಿ ಶಿಕ್ಷಕರ ಅನುಪಾತ 70:1 ರದ್ದು ಪಡಿಸಿ 50:1ರಂತೆ ಬದಲು,ಬಡ್ತಿ ಹೊಂದಿದ ಪ್ರೌಢಶಾಲಾ ಸಹ ಶಿಕ್ಷಕರ 10,15,20,25 ವರ್ಷಗಳ ಸ್ವಯಂಚಾಲಿತ ಬಡ್ತಿ ಮಂಜೂರು,ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ, ಪ್ರೌಢಶಾಲಾ ಸಹಶಿಕ್ಷಕರಿಗೆ ಮುಖ್ಯೋಪಾಧ್ಯಾಯ ಹುದ್ದೆಗೆ ಹಾಗೂ ಉಪನ್ಯಾಸಕ ಹುದ್ದೆಗೆ ಬಡ್ತಿ,ವರ್ಗಾವಣೆ ಪ್ರಕ್ರಿಯೆ ನ್ಯೂನತೆ ಸರಿಪಡಿಸುವುದು, ಸ.ಪ.ಪೂ.ಕಾಲೇಜುಗಳಲ್ಲಿಯ ಪ್ರೌಢಶಾಲಾ ವಿಭಾಗಕ್ಕೆ ಉಪಪ್ರಾಂಶುಪಾಲರ ಹುದ್ದೆ ಮಂಜೂರು ಮಾಡಿ ಹಾಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರಭಾರ ಭತ್ಯೆ, ರಜೆ ಮಂಜೂರು ಮಾಡುವುದು,ಪ್ರೌಢಶಾಲಾ ಸಹ ಶಿಕ್ಷಕರಿಗೆ ಅನ್ಯಕಾರ್ಯಕ್ಕೆ ನಿಯೋಜಿಸದಿರುವುದು,.ಆಆPI ಕಚೇರಿಯಲ್ಲಿ ಹಿಂದಿ ವಿಷಯ ಪರಿವೀಕ್ಷಕರ ಹುದ್ದೆ ಸೃಷ್ಟಿಸುವುದು,ಖಿಉಖಿ ಶಿಕ್ಷಕರಿಗೆ ಪ್ರೌಢಶಾಲೆಗೆ ವರ್ಗಾವಣೆಗೆ ಅವಕಾಶ, ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವುದು,ವಿಭಾಗದ ಹೊರಗಡೆಯಿಂದ ವರ್ಗಾವಣೆ ಹೊಂದಿದವರಿಗೆ ಸೇವಾ ಜೇಷ್ಠತೆ ಪರಿಗಣಿಸುವುದು,ಹೆಚ್ಚುವರಿ ಪ್ರಕ್ರಿಯೆ ಸ್ಥಗಿತಗೊಳಿಸುವುದು, ವ್ಯತಿರಿಕ್ತ ಹುದ್ದೆಗೆ ಸ್ಥಳ ನಿಯುಕ್ತಿ ರದ್ದುಗೊಳಿಸುವುದು,ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ನಿಯಮಿತವಾಗಿ ವೇತನ ನೀಡುವ ಬಗ್ಗೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ರಾಮು ಗುಗವಾಡ, ಎಸ್. ಎಸ್. ಮಠದ, ಅಧ್ಯಕ್ಷ ಎಸ್ ಎಸ್ ಬಳಿಗಾರ, ಉಪಾಧ್ಯಕ್ಷ ಅಶೋಕ ಅಣ್ಣಿಗೇರಿ, ಕಾರ್ಯದರ್ಶಿ ಬಿ.ಎಸ್. ಗಾಣಿಗೇರ, ಎಸ್.ವಿ ತಲ್ಲೂರ, ಆರ್ಜಿ ಹಲಗಲಿಮಠ, ಎನ್.ಜಿ.ನಾಗನಗೌಡರ, ಎಲ್.ಪಿ.ಪಾಟೀಲ,ಸಿ.ವಾಯ್ ಹೊಸಮನಿ, ರಮೇಶ ಖಾಸಾರ, ಎಸ್.ವಿ.ತಲ್ಲೂರ, ಎಸ್.ಜೆ.ಏಳಕೋಟಿ, ಬಿ.ಎಸ್. ಮಠ ಹಾಗೂ ಜಿಲ್ಲಾ,ತಾಲೂಕಿನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಶಿಕ್ಷಕರು ಬಹು ಸಂಖ್ಯೆಯಲ್ಲಿ ಪ್ರತಿ

The post ಶಿಕ್ಷಕರ ಸಮಸ್ಯೆ ಗಳಿಗೆ ಸರಕಾರ ತ್ವರಿತ ಸ್ಪಂದಿಸಲಿ; ಧರಣಿ ಎಚ್ಚರಿಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.