ಉತ್ತಮ ಸಮಾಜಕ್ಕಾಗಿ

ಶೌಚಾಲಯ ಬಳಕೆಗೆ ನಿರ್ಬಂಧಿಸಿದ ಕ್ರೀಡಾ ಇಲಾಖೆ: ಅರಣ್ಯ ಇಲಾಖೆ ಅಸಮಧಾನ

Sports Department restricted to toilet use: Forest Department is upset

0

ಬೆಳಗಾವಿ: (news belgaum) ಅರಣ್ಯ ಇಲಾಖೆಗೆ ಅಭ್ಯರ್ಥಿಗಳ ನೇಮಕಾತಿ ವೇಳೆ, ಜಿಲ್ಲಾ ಕ್ರೀಡಾಂಗಣದಲ್ಲಿ ಶೌಚಾಲಯ ಬಳಕೆಗೆ ಅನುವು ಮಾಡದೆ ದರ್ಪ ತೋರಿದ ಕ್ರೀಡಾ ಇಲಾಖೆ ಮಹಿಳಾ ಕೋಚ್ ಹಾಗೂ ಆಕೆಯ ಪತಿಯ ವಿರುದ್ದ ಅರಣ್ಯ ಅಧಿಕಾರಿಗಳು ಇಂದು ಅಸಮಧಾನ ವ್ಯಕ್ತಪಡಿಸಿದರು.

ಇಂದು ಬೆಳಂಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಗೆ RFO ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದು, ಈ ವೇಳೆ ಕ್ರೀಡಾ ಇಲಾಖೆಯ ಕರಾಟೆ ಕೋಚ್ ಆದ ತ್ರೀವೇಣಿ ಎಂ. ಎನ್ & ಆಕೆಯ ಪತಿ ದೀಪೇಂದ್ರ ಸಿಂಗ್ ಎಂಬುವವರು ಶೌಚಾಲಯ ಬಳಕೆಗೆ ಅನುವು ಮಾಡದೇ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಖ್ಯಾತೆ ತೆಗೆದು ಲಾಕ್ ಮಾಡಿದರು ಎನ್ನಲಾಗಿದೆ. ಕೊನೆ ಪಕ್ಷ ಮಹಿಳಾ ಅಭ್ಯರ್ಥಿಗಳಿಗೆ ಶೌಚಾಲಯ ಬಳಕೆಗೂ ಅನುವು ಮಾಡದಿರುವುದು ಗಮನಕ್ಕೆ ಬಂದಿದೆ.

ಕ್ರೀಡಾ ಇಲಾಖೆಯ ಸಿಬ್ಬಂಧಿಯ ಈ ಅಸಹಕಾರದ ವಿರುದ್ದ ಈಗ ಅರಣ್ಯ ಇಲಾಖೆ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರಿಗೆ ಪತ್ರ ಬರೆಯಲು ಅಣಿಯಾಗಿದೆ. ಈ ಮಧ್ಯೆ tarunkranti.news ನೊಂದಿಗೆ ಮಾತನಾಡಿದ ಕ್ರೀಡಾ ಇಲಾಖೆಯ ಕಮಿಷ್ನರ್ ಡಾ. ಶಿವಶಂಕರ ಅವರು ಶೌಚಾಲಯ ಬಳಕೆಗೆ ತೊಂದರೆ ಮಾಡುವುದು ತಪ್ಪು, ಕೂಡಲೇ ಸೂಕ್ತ ಸೂಚನೆ ಕೊಟ್ಟು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಪ್ರತಿಕ್ರಿಯಿಸಿ ಶೌಚಾಲಯ ಬಳಕೆ ನಿಷೇಧಿಸಲು ಯಾರಿಗೂ ಬರುವುದಿಲ್ಲ. ಈ ದೂರನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಕ್ರೀಡಾ ಇಲಾಖೆ ಉಪನಿರ್ಧೇಶಕರು ಈ ಬಗ್ಗೆ ತಪ್ಪತಸ್ಥರ ವಿರುದ್ಧ ಕ್ರಮ ಜರುಗಿಸುತ್ತಾರೆ. ಕ್ರಮಕ್ಕೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸರಕಾರದ ವಿವಿಧ ಇಲಾಖೆಗಳ ನೇಮಕಾತಿ ಮತ್ತು ತರಬೇತಿಗಳು ಆಗಾಗ ನಡೆಯುತ್ತಿರುತ್ತವೆ. ಆದರೆ ಪ್ರತಿ ಅಸಹಕಾರ ಧೋರಣೆ ಕ್ರೀಡಾ ಇಲಾಖೆ ನಡೆಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಡಿಸಿ & ಕಮಿಷ್ನರ್ ಗೆ ದೂರು:ಅರಣ್ಯ ಇಲಾಖೆ ಇಂದು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಎಪಿಎಂಸಿ ಪೊಲೀಸ್ ಠಾಣೆಗೂ ಸಹ ದೂರು ನೀಡಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.