ಉತ್ತಮ ಸಮಾಜಕ್ಕಾಗಿ

ಶ್ರೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

0

District Collector advises to complete crop survey

ಶ್ರೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

ಹಾಸನ : ಅತಿವೃಷ್ಠಿ ಹಾಗೂ ಅನಾವೃಷ್ಠಿ ಬೆಳೆ ಪರಿಹಾರ ಹಾಗೂ ವಿಮ ಪಾವತಿಗೆ ಪೂರಕವಾಗಿ ಜಿಲ್ಲಾಯಾದ್ಯಂತ ಮುಂದಿನ 10 ದಿನಗಳೊಳ್ಳಗಾಗಿ ಬೆಳೆ ಸಮೀಕ್ಷೆ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಂದಾಯ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲ್ಲೂಕು ತಹಸೀಲ್ದಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳ ವಿಡಿಯೊ ಕಾನ್ಪ್‍ರೆನ್ಸ್ ನಡೆಸಿದ ಅವರು ಸೆ.19 ರಿಂದ ಸರ್ವೆ ಕಾರ್ಯ ಪ್ರಾರಂಬಿಸುವಂತೆ ನಿರ್ದೇಶನ ನೀಡಿದರು.

ಆಯಾ ತಹಸೀಲ್ದಾರ್ ತಮ್ಮ ತಾಲ್ಲೂೀಕು ವ್ಯಾಪ್ತಿಯಲ್ಲಿ ಸಮೀಕ್ಷಾ ತಂಡವನ್ನು ರಚಿಸಿಕೊಳ್ಳಬೇಕು, ಲಭ್ಯವಿರುವ ನುರಿತ ಖಾಸಗಿ ವ್ಯಕ್ತಿಗಳ ಸಹಾಯವನ್ನು ಪಡೆದು ಜಿ.ಪಿ.ಎಸ್. ಆಧಾರಿತ 7 ಸರ್ವೆ ಕಾರ್ಯವನ್ನು ನಡೆಸುವಂತೆ ಅವರು ತಿಳಿಸಿದರು.

ಸರ್ಕಾರ ಅಭಿವೃದ್ದಿ ವಹಿಸಿರುವ ದಿಶಾಂಕ್ ಮೊಬೈಲ್ ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಂಡು ದಿಕ್ಸಚಿಯಾಗಿ ಬಳಸಬಹುದು ಮೊದಲು ಹಂತದಲ್ಲಿ ತಾಲ್ಲೂಕಿನಲ್ಲಿ ಶೇ 10ರಷ್ಟು ಗ್ರಾಮಗಳಲ್ಲಿ ಜಿ.ಪಿ.ಎಸ್ ಆಧಾರಿತ ಸಮೀಕ್ಷೆ ನಡೆಸಿ ನಿಗಧಿತ ತಂಡಗಳಲ್ಲಿ ಸರ್ವೆ ನಂಬರ್‍ವಾರು ಮಾಹಿತಿ ಹಾಗೂ ಪೋಟೋವನ್ನು ಅಪಲೋಡ್ ಮಾಡುವಂತೆ ಜಿಲ್ಲಾಧಿಕಾರಿ ಹೇಳಿದರು.

ಪ್ರತಿ ತಾಲೂಕಿನಲ್ಲಿ ವ್ಯವಸ್ಥಿತವಾಗಿ ಮಾರ್ಗ ನಕ್ಷೆ ಸಿದ್ಧಪಡಿಸಿಕೊಂಡು ಗ್ರಾಮಲೆಕ್ಕಿಗರು ಲಭ್ಯವಿರುವ ಇತರ ಸರ್ಕಾರಿ ನೌಕರರು ಮತ್ತು ಆಸಕ್ತ ಖಾಸಗಿ ಸಮೀಕ್ಷಗಾರರಿಗೆ ಆ್ಯಪ್ ಬಳಕೆಯ ಬಗ್ಗೆ ಮಾಹಿತಿ ನೀಡಿ ಕ್ಷೇತ್ರ ಕಾರ್ಯಕ್ಕೆ ಕಳುಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ರೈತರು ಬಳಸಲು ಅನುಕೂಲವಾಗುವಂತಹ ಆ್ಯಪ್ ಕೂಡ ಇದ್ದು ತಾವೇ ಸ್ವತಹ ಜಿ.ಪಿ.ಎಸ್ ಆಧಾರಿತ ಫೋಟೋ ಕಳಿಸಬಹುದಾಗಿದೆ. ಆಸಕ್ತದಾಯಕ ಖಾಸಗಿ ವ್ಯಕ್ತಿಗಳಿಗೆ ಪ್ರತಿ ತಾಕಿಗೆ 10 ರೂ ನಂತೆ ಪ್ರೋತ್ಸಾಹಧನ ನೀಡಲಾಗುವುದು. ಪ್ರತಿದಿನ 1500 ರೂಪಾಯಿವರೆಗೆ ಗರಿಷ್ಠ 1500 ರೂಪಾಯಿಗಳಿಸಲು ಅವಕಾಶವಿದೆ. ಆದರೆ ಅವರು ಸಂಪೂರ್ಣ ಆಸಕ್ತಿ ಮತ್ತು ಶ್ರದೆಯಿಂದ ಈ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ 1479786 ಕೃಷಿ ತಾಕುಗಳಲ್ಲಿ ಸರ್ವೇ ಕಾರ್ಯ ನಡೆಯಬೇಕಿದೆ ಆಯಾಯಾ ತಾಲೂಕಿನಲ್ಲಿ ತಹಸೀಲ್ದಾರರು ಕೃಷಿ ತೋಟಗಾರಿಕೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೆರವು ಪಡೆದು ಯಶಸ್ವಿಯಾಗಿ ಸಮೀಕ್ಷೆ ಕಾರ್ಯ ಪೂರೈಸಿ ಎಂದು ಅವರು ತಿಳಿಸಿದರು. ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲ್ಲೂಕುಗಳಲ್ಲಿ ಅತಿವೃಷ್ಠಿ ಯಿಂದ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ ಅಲ್ಲದೆ ಅರಸೀಕೆರೆ, ಬೇಲೂರು ಮತ್ತಿತ್ತರ ತಾಲ್ಲೂಕುಗಳಲ್ಲಿ ಬರ ಮುಂದುವರೆದಿದ್ದು ಸಮರ್ಪಕವಾಗಿ ಸರ್ವೆ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜಿಲ್ಲಾಧಿಕಾರಿಯವರು ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಹೇಳಿದರು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಉಪವಿಭಾಗಾಧಿಕಾರಿ ಡಾ. ನಾಗರಾಜು, ಜಂಟಿ ಕೃಷಿ ನಿರ್ದೇಶಕರಾದ ಡಾ. ಮಧುಸೂಧನ್, ಉಪನಿರ್ದೇಶಕರಾದ ಕೋಕಿಲ, ಭೂದಾಖಲೆಗಳ ಉಪನಿರ್ದೇಶಕರಾದ ಕೃಷ್ಣಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಡಾ. ಸಂಜಯ್ ಮತ್ತಿತರರು ಹಾಜರಿದ್ದರು ////

The post ಶ್ರೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಜಿಲ್ಲಾಧಿಕಾರಿ ಸೂಚನೆ appeared first on Prajaa News.

Source link

ಶ್ರೀಘ್ರವಾಗಿ ಬೆಳೆ ಸಮೀಕ್ಷೆ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

Leave A Reply

 Click this button or press Ctrl+G to toggle between Kannada and English

Your email address will not be published.