ಉತ್ತಮ ಸಮಾಜಕ್ಕಾಗಿ

ಶ್ರೀಮತಿ. ಶೀತಲ ಕೋಲ್ಲಾಪೂರೆ ಅವರಿಗೆ ಸನ್ಮಾನ

0

ಶ್ರೀಮತಿ. ಶೀತಲ ಕೋಲ್ಲಾಪೂರೆ ಅವರಿಗೆ ಸನ್ಮಾನ

ಬೆಳಗಾವಿ : ಸೆಪ್ಟೆಂಬರ್ ೭ ರಿಂದ ೧೫ ರವರೆಗೆ ಮಲೇಷಿಯಾದಲ್ಲಿ ಜರುಗಿದ ಏಷ್ಯಾ ಪೆಸಿಪಿಕ್ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯದಿಂದ ಬೆಳಗಾವಿ ಜಿಲ್ಲೆಯ ಕ್ರೀಡಾ ಪಟುವಾದ ಶ್ರೀಮತಿ. ಶೀತಲ. ದಿನೇಶ. ಕೋಲ್ಲಾಪೂರೆ ಇವರು ತಮ್ಮ ೩೩ನೇ ವಯಸ್ಸಿನಲ್ಲಿ ಕೌಟುಂಬಿಕ ಜಂಜಾಟ ಮತ್ತು ಆರ್ಥಿಕ ಮುಗ್ಗಟ್ಟುಗಳ ಮದ್ಯೆಯೂ ಏಷ್ಯಾ ಪೆಸಿಪಿಕ್ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ೪೦೦ಘಿ೧೦೦ ಮೀಟರ್ ರಿಲೇ, ೮೦೦ ಮೀಟರ್ ಓಟ, ೪೦೦ ಮೀಟರ್ ಓಟ, ೧೫೦೦ ಮೀಟರ್ ಓಟದಲ್ಲಿ ಹಾಗೂ ೪ಘಿ೪೦೦ ಮೀಟರ್ ರಿಲೇಯಲ್ಲಿ ಈ ಎಲ್ಲ ಆಟದಲ್ಲಿ ಚಿನ್ನದ ಪದಕಗಳನ್ನು ಹಾಗೂ ೨೦೦ ಮೀಟರ ಓಟದಲ್ಲಿ ಬೆಳ್ಳಿ ಪದಕವನ್ನು ಹೀಗೆ ಒಟ್ಟು ೬ ಪದಕಗಳನ್ನು ಪಡೆದುಕೊಂಡು ದೇಶಕ್ಕೆ ಕೀರ್ತಿ ತಂದಿರುತ್ತಾರೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಶ್ರೀಮತಿ. ಶೀತಲ. ದಿನೇಶ. ಕೋಲ್ಲಾಪೂರೆ ಇವರಿಗೆ ಬೆಳಗಾವಿ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಸನ್ಮಾನವನ್ನು ನೆರವೇರಿಸಿ ಮಲೇಷಿಯಾದಲ್ಲಿ ಜರುಗಿದ ಏಷ್ಯಾ ಪೆಸಿಪಿಕ್ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ೬ ಪದಕವನ್ನು ಪಡೆದು ನಮ್ಮ ದೇಶಕ್ಕೆ ಕೀರ್ತಿಯನ್ನು ತಂದಿದ್ದಕ್ಕೆ ಶುಭ ಹಾರೈಸಿ ಮತ್ತು ನಿರಂತರವಾದ ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ತೋರಿ ಒಲಂಪಿಕ್‌ನಲ್ಲಿ ಸಾಧನೆ ತೋರಲು ಹಾರೈಸಿ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಎಸ್ ಬಿ. ಮುಳ್ಳಳ್ಳಿ, ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ, ಅಥ್ಲೆಟಿಕ್ ಕೋಚ್ ಸಂಜೀವಕುಮಾರ್ ನಾಯಿಕ ಹಾಗೂ ಶ್ರೀಮತಿ ಶೀತಲ ಅವರ ಕೋಚ್ ಆದಂತಹ ಪ್ರದೀಪ್ ಜುವೇಕರ್ ಮೊದಲಾದವರು ಉಪಸ್ಥಿತರಿದ್ದರು. ///

The post ಶ್ರೀಮತಿ. ಶೀತಲ ಕೋಲ್ಲಾಪೂರೆ ಅವರಿಗೆ ಸನ್ಮಾನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.