ಉತ್ತಮ ಸಮಾಜಕ್ಕಾಗಿ

ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ ಯವರ ನಿಧನ

0

ಸ್ವಾತ0ತ್ರ್ಯ ಯೋಧ ಗಾ0ಧೀವಾದಿ ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ

ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ ಯವರ ಜೀವನ ಚರಿತ್ರೆ

ಕುಂದರ ನಾಡಿನ ಸುಂದರ ಬೀಡಿನ ಗಾಂಧಿ ಗ್ರಾಮ, ಖಾದಿ ಗ್ರಾಮ, ಹುದಲಿ ಗ್ರಾಮದ ವ್ಯವಸಾಯ ಮನೆತನದಲ್ಲಿ  ದಿನಾಂಕ 10.09.1919 ರಲ್ಲಿ ಜನಿಸಿದರು. ಇವರ ತಂದೆಯ ಹೆಸರು ನಿ0ಗಪ್ಪ್ಪ, ತಾಯಿಯ ಹೆಸರು ಬಸವ್ವ. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಧುಮಕುವ ಹಾಗೂ ಖಾದಿ ಕೆಲಸದಲ್ಲಿ ಮಗ್ನರಾಗಿದ್ದರಿಂದ  ಪ್ರಾಥಮಿಕ ಶಿಕ್ಷಣಕ್ಕೆ  ತೇಲಾಂಜನೆ ನೀಡಿ ಆಗಿನ ಕಾಲದಲ್ಲಿ ರಾತ್ರಿ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದು ಸತತ ಓದು ಬರಹ ಮುಂದುವರಿಸಿ ತಮ್ಮ ಜ್ಞಾನ ಭಾಂಡಾರ ಬೆಳಿಸಿಕೊಂಡರು. ರಾಷ್ಟ್ರೀಯ ಭಾವನೆ , ಸೇವಾಕಲ್ಪನೆ, ಖಾದಿಯ ಮಹತ್ವ ಇತ್ಯಾದಿಗಳನ್ನು ಗ್ರಾಮದ ಪವಿತ್ರ ಪರಿಸರದಲ್ಲಿ ಅರಿತುಕೊ0ಡರು. ಶಾಲೆಯ ಓದಿಗಿ0ತ ಬಾಳಿನಲ್ಲಿ ಇವರು ಬಹಳೇ ಅನುಭವ ಪಡೆದರು. ಅನುಭವವಿರುವಲ್ಲಿ ಅಮೃತವೆ0ಬ0ತೆ ಇವರೊಬ್ಬ ಅನುಭವಿಕ ನೂಲು-ನೆಯ್ಗೇಯ ಶಿಕ್ಷಕರಾದರು. ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಮಹಾತ್ಮಾಜಿಯವರ, ಗಂಗಾಧರರಾವ ದೇಶಪಾಂಡೆಯವರ ಸಂಪರ್ಕದಿಂದ ಸೇವಾ ಭಾವನೇ ಮೈಗೂಡಿಸಿಕೊಂಡಿದ್ದರು. ಹುದಲಿ ಗ್ರಾಮಕ್ಕೆ ರಾಷ್ಟ್ರೀಯ ಧುರೀಣರು ಆಗಮಿಸುವ ಪೂರ್ವದಲ್ಲಿಯೇ ಇದ್ದ ಕುಮರಿ ಆಶ್ರಮದ ಆಕರ್ಷಣಿಯಿ0ದಾಗಿ ಖಾದಿಯತ್ತ ಒಲವು ಹೆಚ್ಚಿತು. ಅವರು ತಮ್ಮ 10ನೇ ವಯಸ್ಸಿನಿಂದಲೇ ಚರಖಾದಿಂದ ತಯಾರಾದ ಖಾದಿಯನ್ನು ಧರಿಸಿ ರಾಷ್ಟ್ರಭಕ್ತರಾದರು. 1937ರಲ್ಲಿ ಮಹಾತ್ಮಾ ಗಾಂಧೀಜಿಯವರು ಹುದಲಿಗೆ ಆಗಮಿಸಿ 7 ದಿವಸ ವಾಸ್ತವ್ಯ ಮಾಡಿದರು.  ಆಗ 17 ವರ್ಷದ ತರುಣರಾಗಿದ್ದ್ದ ಇವರು ಅತಿ ಉತ್ಸಾಹದಿಂದ ಗಾಂಧೀಜಿಯವರ ಕುಟಿರದ ಸ್ವಯಂ ಸೇವಕರಾಗಿ ಹಾಗೂ ಗಾಂಧೀಜಿಯವರಿಗೆ ನೂಲಲಿಕ್ಕೆ ಹಂಜಿಯನ್ನು  ತಯಾರ ಮಾಡಿ ಅವರಿಗೆ ನೀಡಿ ವಾರವಿಡಿ ದುಡಿದು ಗಾಂಧೀüಜಿಯವರ ಪ್ರೀತಿಗೆ ಪಾತ್ರರಾದರು.  ಇವರಿಗೆ ಗಾಂಧೀಜಿಯವರು ಬೆಳ್ಳಿ ಪದಕ ನೀಡಿ, ಇವರನ್ನು ಒಳ್ಳೆಯ ಸ್ವಯ0 ಸೇವಕ ಅಂತಾ ಬೆನ್ನನ್ನು ತಟ್ಟಿ ಪೆÇ್ರೀತ್ಸಾಹಿಸಿದರು. ಅವರ ಪೆÇ್ರೀತ್ಸಾಹದಿಂದ  ಅಪ್ಪಟ  ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರ ಹೊಮ್ಮಿದ್ದರು. 1938ನೇ ಇಸ್ವಿಯಲ್ಲಿ ತರುಣ ಸಂಘವನ್ನು ಸ್ಥಾಪನೆ ಮಾಡಿ ರಾಷ್ಟ್ರೀಯ ವಿವಾಹಗಳನ್ನು ಆಡಂಬರವಿಲ್ಲದೇ ಮಾಡುತ್ತಿದ್ದರು.  ಇವರು ಬಿಗಿಲು ವಾದನ ನುಡಿಸುತ್ತಿದ್ದರು, 1942 ರ ಚಲೇಜಾವ ಚಳುವಳಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಯಾಗಿ ಭಾಗವಹಿಸಿ, ಸುಲಧಾಳ, ಸುಳೇಭಾವಿ ರೇಲ್ವೆ ಸ್ಟೆಶನಗಳ ದಪ್ತರಗಳನ್ನು ಸುಟ್ಟು ಮೂರು ತಿ0ಗಳು ಭೂಗತರಾಗಿದ್ದು ನ0ತರ ಗುಡ್ಡದಲ್ಲಿ 200 ಜನ ಪೋಲಿಸರು ಹಾಗೂ ಮಿಲಿಟರಿಯ ಸಹಾಯದಿ0ದ ಹಿಡಿಯಲ್ಪಟ್ಟರು. ಸರಕಾರ ಇವರನ್ನು ಹಿಡಿದುಕೋಟ್ಟವರಿಗೆ 2000 ರೂಪಾಯಿಗಳ ಬಹುಮಾನ ಸಾರಿತ್ತು. ಸನ್ 1942ರ ಚಳುವಳಿಯಲ್ಲಿ 3 ತಿ0ಗಳು ಕಿಲ್ಲಾ ಜೇಲು, 10 ತಿ0ಗಳು ಸಾ0ಗಲಿ ಜೇಲು, 2 ತಿ0ಗಳು ಶಹಾಪೂರ ಜೇಲುವಾಸ ಅನುಭವಿಸಿದರು.  ಸನ್ 1941 ರಲ್ಲಿ ಪ್ರಾರ0ಭವಾದ ಜಮನಾಲಾಲ ವಿದ್ಯಾಲಯದಲ್ಲಿ ನೂಲುವ ತರಭೇತಿಯನ್ನು ಪಡೆದು ವಿಜಾಪೂರ ಜಿಲ್ಲೆಯ ಹುನಗು0ದದ ನೂಲುವ ಕೇ0ದ್ರಕ್ಕೆ ಶಿಕ್ಷಕರಾಗಿ ಹೋದರು. ಬಿಡುಗಡೆಯ ನ0ತರ ಕುಮರಿ ಆಶ್ರಮದಲ್ಲಿ ಸನ್ 1947ರಲ್ಲಿ ಎಲ್ಲಾ ರಂಗಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ನಿಷ್ಕಲಂಕ ಪ್ರಾಮಾಣಿಕ ಸೇವೆ ಮಾಡುತ್ತ 1954 ನೇ ಸಾಲಿನಲ್ಲಿ ಖಾದಿ ಗ್ರಾಮೋದ್ಯೋಗ ಸಂಘವನ್ನು ಸ್ಥಾಪಿಸಿ, ಈ ಸಂಘ ಬೆಳವಣೆಗೆಗೆ ಪ್ರಮುಖ ಪಾತ್ರದಾರಿಯಾಗಿ 30 ವರ್ಷ ಚೇರಮನ್ನರಾಗಿ ಯಾವುದೇ ಆಸೆ, ಆಮಿಸೆ ಇಲ್ಲದೇ ನಿಸ್ವಾರ್ಥ ಸೇವೆಯಿಂದ ಗಣನೀಯ ಸೇವೆ ಸಲ್ಲಿಸಿದ್ದು ಈಗ ಇತಿಹಾಸವಾಗಿದೆ. ಸನ್ 1952 ರಲ್ಲಿ ಓರಿಸ್ಸಾ ಪ್ರಾ0ತ್ಯದಲ್ಲಿ ಭಾರತ ಮಟ್ಟದ ಹ0ಜಿ ಮಾಡುವ ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಸನ್ 1954ರಲ್ಲಿ ಈ ಸ0ಘ ಕಟ್ಟಿದ ಹನ್ನೋ0ದು ಜನ ಸ0ಸ್ಥಾಪಕ ಮಹನೀಯರಲ್ಲಿ ಇವರೊಬ್ಬರು .ಅವರು ಸಂಸ್ಥೆಯ ಚೀಕ್ಕಾಸನ್ನು  ಮುಟ್ಟದೇ ಆದರ ಸೇವೆಗಾಗಿ ಬದುಕನ್ನು ಮೀಸಲಿಟ್ಟು  ಶ್ರಮಿಸುತ್ತಿರುವ ಸದಾಚಾರ ಸಚ್ಚಾರಿತ್ರ್ಯಶೀಲರು. ಈಡಿ ದೇಶದಲ್ಲಿಯೇ ಲಾಭದಲ್ಲಿ ಮುನ್ನೆಡೆದ ಏಕೈಕ ಖಾದಿ ಸಂಸ್ಥೆ ಹಾಗೂ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ಒದಗಿಸಿಕೊಟ್ಟ  ಹೆಮ್ಮೆಯ ಸಂಸ್ಥೆಯಾಗಿದೆ. ಗ್ರಾಮ ಶಿಕ್ಷಣ ಬೆಳವಣಿಗೆಗೆ 2 ಏಕರೆ ಭೂಮಿ ದಾನ ಮಾಡಿದ್ದಾರೆ.  ದೇಹಕ್ಕೆ ವಯಸ್ಸಾಗಿದ್ದರು  ಮನಸ್ಸಿಗೆ ವಯಸ್ಸಾಗಿಲ್ಲ. ಸದಾ ಉತ್ಸಾಹ ಭರಿತರಾಗಿ ಕೆಲಸ ಮಾಡುತ್ತಾ  ತರುಣ ಪೀಳಿಗೆಗೆ ಮಾದರಿ ಏನಿಸಿದ್ದಾರೆ. ಮಾತು ಬೆಳ್ಳಿ ಮೌನ ಬಂಗಾರ ಏಂಬ ಮಾತಿನಂತೆ ಹೆಚ್ಚು ಮಾತನಾಡದೇ ಕ್ರಾಂತಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಸ್ನೇಹ ಬೆದಿಗಳು, ಸಂಘಟನಾ ಚತುರರು ಆದ ಇವರು ರಾಷ್ಟ್ರ ಪ್ರೇಮದ ಪ್ರತೀಕ ಎನಿಸಿದ್ದಾರೆ. ಇವರು ಖಾದಿ ಸಂಘವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಬೆಳಿಸಿದ್ದಾರೆ, ಇವರು 6 ವರ್ಷ ಕಾಯ೵ಕತ೵ರಾಗಿ  ಹಾಗೂ 25 ವಷ೵ ಕಾಯ೵ಕಾರಿ ಮ0ಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ವಯಸ್ಸು 100 ಆದರು ಹರೆಯದ ಉತ್ಸಾಹದಿಂದ ಕಾರ್ಯ ನಿರ್ವಹಿಸುವ ಅವರ ಜೀವನ ಶೈಲಿ ಯುವಕರನ್ನು ನಾಚಿಸುವಂತಿದೆ. ಇಂದಿಗೂ ಅವರಲ್ಲಿ ತಮ್ಮ ಬದುಕನ್ನು ತಾವೇ ಪರಿಕ್ಷಿಸಿಕೊಳ್ಳುವ ಪ್ರಾಮಾಣಿಕತೆ ಇದೆ. ಅಚಲವಾದ ಆತ್ಮವಿಶ್ವಾಸವಿದೆ. ಇಂದಿನ ಭ್ರಷ್ಟ ಪರಿಸರದಲ್ಲಿಯು ಗಾಂಧೀ ಯುಗದ ಜಿವಂತ ನೇನಪಿನಂತೆ ಇರುವ ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ. ಆದರ್ಶ ವ್ಯಕ್ತಿಯಾಗಿ ನಮ್ಮ ಮದ್ಯದಲ್ಲಿರುವುದು ನಮ್ಮ ಸೌಭಾಗ್ಯವೆಂದು ಹೇಳಬೇಕು. ಅವರು ದುಷ್ಟ ವೇಸನದಿಂದ ಮತ್ತು ದುಷ್ಟ ಜನರಿಂದ ದೂರ ವಿದ್ದು ಪ್ರಾಮಾಣಿಕವಾಗಿ ಜನ ಸೇವೆಗೆ ತಮ್ಮನ್ನು ಪಳಗಿಸಿಕೊಂಡಿದ್ದು ಅವರ ಸ್ವಾರ್ಥಕ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ದಾನ ಧರ್ಮಗಳಲ್ಲಿ ದೇಶಸೇವೆಯಲ್ಲಿ ಎತ್ತಿದ ಕೈ. ತಮ್ಮ 100 ನೇಯ ಇಳಿ ವಯಸ್ಸಿನಲ್ಲಿಯು ಹುದಲಿ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘದ ವ್ಯವಸ್ತಾಪಕ ಮ0ಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹುದಲಿಯ ಹಿರಿಯ ಸ್ವಾತಂತ್ರ್ಯಯೋಧ ಗಾ0ಧೀವಾದಿ ಶತಾಯುಷಿ ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ ಯವರ ನಿಧನ
ಜನನ 10.09.1919 ಮರಣ 05.10.2018

ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಮಹಾತ್ಮಾಜಿಯವರ, ಗಂಗಾಧರರಾವ ದೇಶಪಾಂಡೆಯವರ ಸಂಪರ್ಕದಿಂದ ಸೇವಾ ಭಾವನೇ ಮೈಗೂಡಿಸಿಕೊಂಡಿದ್ದರು. ಹುದಲಿ ಗ್ರಾಮಕ್ಕೆ ರಾಷ್ಟ್ರೀಯ ಧುರೀಣರು ಆಗಮಿಸುವ ಪೂರ್ವದಲ್ಲಿಯೇ ಇದ್ದ ಕುಮರಿ ಆಶ್ರಮದ ಆಕರ್ಷಣಿಯಿ0ದಾಗಿ ಖಾದಿಯತ್ತ ಒಲವು ಹೆಚ್ಚಿತು. ಅವರು ತಮ್ಮ 10ನೇ ವಯಸ್ಸಿನಿಂದಲೇ ಚರಖಾದಿಂದ ತಯಾರಾದ ಖಾದಿಯನ್ನು ಧರಿಸಿ ರಾಷ್ಟ್ರಭಕ್ತರಾದರು. 1937ರಲ್ಲಿ ಮಹಾತ್ಮಾ ಗಾಂಧೀಜಿಯವರು ಹುದಲಿಗೆ ಆಗಮಿಸಿ 7 ದಿವಸ ವಾಸ್ತವ್ಯ ಮಾಡಿದ್ದರು. ಆಗ 17 ವರ್ಷದ ತರುಣರಾಗಿದ್ದ್ದ ಇವರು ಅತಿ ಉತ್ಸಾಹದಿಂದ ಗಾಂಧೀಜಿಯವರ ಕುಟಿರದ ಸ್ವಯಂ ಸೇವಕರಾಗಿ ಹಾಗೂ ಗಾಂಧೀಜಿಯವರಿಗೆ ನೂಲಲಿಕ್ಕೆ ಹಂಜಿಯನ್ನು ತಯಾರ ಮಾಡಿ ಅವರಿಗೆ ನೀಡಿ ವಾರವಿಡಿ ದುಡಿದು ಗಾಂಧೀüಜಿಯವರ ಪ್ರೀತಿಗೆ ಪಾತ್ರರಾದರು. ಅವರ ಪೆÇ್ರೀತ್ಸಾಹದಿಂದ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರ ಹೊಮ್ಮಿದ್ದರು. 1938ನೇ ಇಸ್ವಿಯಲ್ಲಿ ತರುಣ ಸಂಘವನ್ನು ಸ್ಥಾಪನೆ ಮಾಡಿ ರಾಷ್ಟ್ರೀಯ ವಿವಾಹಗಳನ್ನು ಆಡಂಬರವಿಲ್ಲದೇ ಮಾಡುತ್ತಿದ್ದರು. 1942 ರ ಚಲೇಜಾವ ಚಳುವಳಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಯಾಗಿ ಭಾಗವಹಿಸಿ, ಸುಲಧಾಳ, ಸುಳೇಭಾವಿ ರೇಲ್ವೆ ಸ್ಟೆಶನಗಳ ದಪ್ತರಗಳನ್ನು ಸುಟ್ಟು ಮೂರು ತಿ0ಗಳು ಭೂಗತರಾಗಿದ್ದು ನ0ತರ ಗುಡ್ಡದಲ್ಲಿ 200 ಜನ ಪೋಲಿಸರು ಹಾಗೂ ಮಿಲಿಟರಿಯ ಸಹಾಯದಿ0ದ ಹಿಡಿಯಲ್ಪಟ್ಟರು. ಸರಕಾರ ಇವರನ್ನು ಹಿಡಿದುಕೋಟ್ಟವರಿಗೆ 2000 ರೂಪಾಯಿಗಳ ಬಹುಮಾನ ಸಾರಿತ್ತು. ಸನ್ 1942ರ ಚಳುವಳಿಯಲ್ಲಿ 3 ತಿ0ಗಳು ಕಿಲ್ಲಾ ಜೇಲು, 10 ತಿ0ಗಳು ಸಾ0ಗಲಿ ಜೇಲು, 2 ತಿ0ಗಳು ಶಹಾಪೂರ ಜೇಲುವಾಸ ಅನುಭವಿಸಿದರು. ಸನ್ 1941 ರಲ್ಲಿ ಪ್ರಾರ0ಭವಾದ ಜಮನಾಲಾಲ ವಿದ್ಯಾಲಯದಲ್ಲಿ ನೂಲುವ ತರಭೇತಿಯನ್ನು ಪಡೆದು ಬಾಗಲಕೋಟ ಜಿಲ್ಲೆಯ ಹುನಗು0ದದ ನೂಲುವ ಕೇ0ದ್ರಕ್ಕೆ ಶಿಕ್ಷಕರಾಗಿ ನ0ತರ ಕುಮರಿ ಆಶ್ರಮದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು 1952ರಲ್ಲಿ ಜಯಪ್ರಕಾಶ ನಾರಾಯಣ ದಂಪತಿಗಳು ಹುದಲಿಗೆ ಆಗಮಿಸಿದಾಗ ನಿಷ್ಕಲಂಕ ಪ್ರಾಮಾಣಿಕ ಸೇವೆ ಮಾಡಿದರು. ಸನ್ 1952 ರಲ್ಲಿ ಓರಿಸ್ಸಾ ಪ್ರಾ0ತ್ಯದಲ್ಲಿ ಭಾರತ ಮಟ್ಟದ ಹ0ಜಿ ಮಾಡುವ ಸ್ಪರ್ದೆಯಲ್ಲಿ ಭಾಗವಹಿಸಿದ್ದರು. 1954 ನೇ ಸಾಲಿನಲ್ಲಿ ಖಾದಿ ಗ್ರಾಮೋದ್ಯೋಗ ಸಂಘವನ್ನು ಸ್ಥಾಪಿಸಿ, ಈ ಸಂಘ ಬೆಳವಣೆಗೆಗೆ ಪ್ರಮುಖ ಪಾತ್ರದಾರಿಯಾಗಿ 3 ವರ್ಷ ಚೇರಮನ್ನರಾಗಿ 6 ವರ್ಷ ಕಾರ್ಯಕರ್ತರಾಗಿ ಹಾಗೂ 25 ವರ್ಷ ಕಾರ್ಯಕಾರಿ ಮ0ಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 1963ರಲ್ಲಿ ಗೋವಾದಲ್ಲಿ ಜರುಗಿದ ಹುದಲಿ ಖಾದಿ ಪ್ರದರ್ಶನದಲ್ಲಿ ಭಿಮಪ್ಪ ಭೂಶಿ ಭಾಗವಹಿಸಿ ಜವಾಹರಲಾಲ ನೇಹರು ಅವರ ಪ್ರೀತಿಗೆ ಪಾತ್ರರಾದರು. ಇವರು ದಿನಾಂಕ 05.10.2018 ರಂದು ಬೆಳಗ್ಗೆ 3 ಘಂಟೆಗೆ ನಿಧನರಾದರು. ಇವರ ಅಂತ ಕ್ರಿಯೆ ಸ್ವಗ್ರಾಮ ಹುದಲಿಯಲ್ಲಿ ಮಧ್ಯಾನ್ಹ 2 ಘಂಟೆಗೆ ನೆರವೆರಿತು. ಅವರ ಅಂತಕ್ರಿಯೆಯಲ್ಲಿ ಹುದಲಿ ಹಾಗೂ ಕುಂದರನಾಡಿನ ಅಪಾರ ಜನ, ಬಂದು ಬಳಗ ಹಾಗೂ ಬೆಳಗಾವಿ ತಾಲೂಕಿನ ತಹಸಿಲದಾರ ಶ್ರೀಮತಿ ಮಂಜುಳಾ ನಾಯಿಕ ಇಅವರು ಭಾಗವಹಿಸಿದ್ದರು.

The post ಶ್ರೀ ಭೀಮಪ್ಪ ನಿ0ಗಪ್ಪ ಭೂಶಿ ಯವರ ನಿಧನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.