ಉತ್ತಮ ಸಮಾಜಕ್ಕಾಗಿ

ಸಂಗೊಳ್ಳಿ ರಾಯಣ್ಣ ಉತ್ಸವ ಜ.27 ಹಾಗೂ 28ರಂದು ವೀರಜ್ಯೋತಿ ಸಂಚಾರ ಆರಂಭ

0

ಬೆಳಗಾವಿ, ಜನವರಿ 23 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಇದೇ ಜನವರಿ 27 ಹಾಗೂ 28ರಂದು ಬೈಲಹೊಂಗಲ ತಾಲ್ಲೂಕು ಸಂಗೊಳ್ಳಿಯಲ್ಲಿ ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಹಿನ್ನೆಲೆಯಲ್ಲಿ ವೀರಜ್ಯೋತಿ ಯಾತ್ರೆ ಸಂಚಾರ ಇಂದಿನಿಂದ(ಜ.23) ಆರಂಭಗೊಂಡಿತು.
ಶಾಸಕ ಅರವಿಂದ ಪಾಟೀಲ ಅವರು ಖಾನಾಪುರ ತಾಲ್ಲೂಕು ನಂದಗಡದಲ್ಲಿ ವೀರಜ್ಯೋತಿಯಾತ್ರೆಗೆ ಚಾಲನೆ ನೀಡಿದರು.
ಉಪವಿಭಾಗಾಧಿಕಾರಿ ರಾಜಶ್ರೀ ಜೈನಾಪುರ, ತಹಶೀಲ್ದಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂದಗಡದಿಂದ ಹೊರಟ ಜ್ಯೋತಿಯಾತ್ರೆಯು ಖಾನಾಪುರ ಮಾರ್ಗವಾಗಿ ಸಂಜೆ ಬೆಳಗಾವಿ ನಗರವನ್ನು ತಲುಪಿತು.
ನಗರದ ನ್ಯಾಯಾಲಯ ಆವರಣದಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿ ಎದುರು ವೀರಜ್ಯೋತಿಯನ್ನು ಶಾಸಕ ಅರವಿಂದ ಪಾಟೀಲ ಸ್ವಾಗತಿಸಿದರು. ಬಳಿಕ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜ್ಯೋತಿಯನ್ನು ಬೀಳ್ಕೊಟ್ಟರು.
ತಹಶೀಲ್ದಾರ ಗಿರೀಶ್ ಸ್ವಾದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಳಗಾವಿಯಿಂದ ತೆರಳಿದ ಜ್ಯೋತಿ ಯಾತ್ರೆಯು ಕಾಕತಿಯಲ್ಲಿ ತಂಗಲಿದೆ. ಮಂಗಳವಾರ(ಜ.24) ಬೆಳಿಗ್ಗೆ ಕಾಕತಿಯಿಂದ ತೆರಳಲಿರುವ ಯಾತ್ರೆಯು ಹುಕ್ಕೇರಿ, ಚಿಕ್ಕೋಡಿ ಹಾಗೂ ಅಥಣಿ ತಾಲ್ಲೂಕಿನಲ್ಲಿ ಸಂಚರಿಸಲಿದೆ.
ಜನವರಿ 25ರಂದು ಅಥಣಿಯಿಂದ ಹೊರಟು ರಾಯಬಾಗ, ಗೋಕಾಕ ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ ಸಂಚರಿಸಲಿದೆ. ಜನವರಿ 26ರಂದು ಬೆಳಿಗ್ಗೆ ರಾಮದುರ್ಗದಿಂದ ಹೊರಟು ಸವದತ್ತಿ, ಬೈಲಹೊಂಗಲ ಮೂಲಕ ಕಿತ್ತೂರಿಗೆ ಆಗಮಿಸಲಿದೆ. ಜನವರಿ 27ರಂದು ಬೆಳಿಗ್ಗೆ 7 ಗಂಟೆಗೆ ಕಿತ್ತೂರಿನಿಂದ ಹೊರಡಲಿರುವÀ ವೀರಜ್ಯೋತಿ ಯಾತ್ರೆಯು 9 ಗಂಟೆಗೆ ಸಂಗೊಳ್ಳಿ ತಲುಪಲಿದೆ ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.