ಉತ್ತಮ ಸಮಾಜಕ್ಕಾಗಿ

ಸಮ ದೃಷ್ಟಿಯಿಂದ ನೋಡುತ್ತ ಎಲ್ಲರಿಗೂ ಮಾರ್ಗದರ್ಶನ : ಶಾಸಕ ಅನೀಲ ಬೆನಕೆ

0

ಸಮ ದೃಷ್ಟಿಯಿಂದ ನೋಡುತ್ತ ಎಲ್ಲರಿಗೂ ಮಾರ್ಗದರ್ಶನ : ಶಾಸಕ ಅನೀಲ ಬೆನಕೆ

ಬೆಳಗಾವಿ :ಹುಕ್ಕೇರಿ ಹಿರೇಮಠ ಎಲ್ಲಸಮುದಾಯವನ್ನು ಸಮ ದೃಷ್ಟಿಯಿಂದ ನೋಡುತ್ತ ಎಲ್ಲರಿಗೂ ಮಾರ್ಗದರ್ಶನ ನೀಡುತ್ತ ಬಂದಿರುವುದು ವಿಶೇಷವಾಗಿದೆ ಎಂದು ಶಾಸಕ ಅನೀಲ ಬೆನಕೆ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 11ನೇ ಸುವಿಚಾರ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅ.10 ರಿಂದ 19ರ ವರೆಗೆ ಎಲ್ಲರೂ ಸಾಮೂಹಿಕ ದೇವಿ ಪಾರಾಯಣ ಮಾಡುವುದರೊಂದಿಗೆ ಇಡೀ ದೇಶಕ್ಕೆ ಒಳಿತನ್ನು ಮಾಡುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ದೇವಿ ಪಾರಾಯಣದ ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. 10 ದಿನಗಳಲ್ಲಿ ನಡೆಯುವ ಈ ಪಾರಾಯಣದಲ್ಲಿ ಎಲ್ಲರೂ ದುರ್ಗಾ ಮಾತೆಯ ಆಶೀರ್ವಾದ ಪಡೆಯೋನ ಎಂದರು.

ಯಾದಗೂಡದ ಡಾ. ಚಂದ್ರಕಾಂತ ದೇಸಾಯಿ ಮಾತನಾಡಿ, ಅಡುಗೆ ಮನೆಯಲ್ಲಿ ಆರೋಗ್ಯವಿದೆ. ಅಡುಗೆ ಮನಿಯಲ್ಲಿಯೇ ಆಹಾರದ ಪದ್ದತಿಯನ್ನು ಅನುಸರಿಸಿದರೆ ಖಂಡಿತವಾಗಿಯೂ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ.ಆದಷ್ಟು ಆರೋಗ್ಯಕ್ಕೆ ಬೇಕಾಗಿರುವ ದೇಶಿಯ ತಿಂಡಿ ಹಾಗೂ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಒಳಿತು. ಎಣ್ಣೆ ಪದಾರ್ಥ ಬಿಟ್ಟು ವಿಥೌಟ್ ಶುಗರ್, ವಿಥೌಟ್ ಆಯಿಲ್ ಬಳಸಿದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದರು.

ಸಾನಿದ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹನ್ನೊಂದು ಸುವಿಚಾರ ಚಿಂತನ ಕಾರ್ಯಕ್ರಮ ಗಳು ಒಳ್ಳೆಯ ವಿಚಾರಗಳನ್ನು ಮಂಡಿಸುತ್ತ ಜನರಿಗೆ ಉತ್ತಮ ಸಂದೇಶ ನೀಡುವ ವೇದಿಕೆಯಾಗಿದೆ. ಇನ್ನೂ ಹೆಚ್ಚಿನ ಕಾರ್ಯವನ್ನುಭಕ್ತಾದಿಗಳು ಮಾಡಲಿ ಎಂದರು.

ರಾಣಿ ಚನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಸುಮಾರು 30 ಸಾವಿರ ಬೆಲೆ ಬಾಳುವ ಸೌಂಡ್ ಸಿಸ್ಟಮ್ ನ್ನು ಶ್ರೀ ಮಠಕ್ಕೆ ದಾನವಾಗಿ ನೀಡಿದರು. ಅವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.

ಡಾಕ್ಟರೇಟ್ ಪದವಿ ಪಡೆದಿರುವ ಬೈಲಹೊಂಗಲದ ಮಹಾಂತೇಶ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಸವಡಿ, ಕವಿತಾ ಹಿರೇಮಠ, ಸುನೀತಾ ಪಟ್ಟಣಶೆಟ್ಟಿ, ಸಂಜನಾ, ಅರವಿಂದ ಪಾಟೀಲ, ನಮೃತ ಜಾಗಿರದಾರ ಉಪಸ್ಥಿತರಿದ್ದರು.

The post ಸಮ ದೃಷ್ಟಿಯಿಂದ ನೋಡುತ್ತ ಎಲ್ಲರಿಗೂ ಮಾರ್ಗದರ್ಶನ : ಶಾಸಕ ಅನೀಲ ಬೆನಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.