ಉತ್ತಮ ಸಮಾಜಕ್ಕಾಗಿ

ಸರಕಾರಿ ಬಸ್ ಚಾಲಕ-ನಿರ್ವಾಹಕರಿಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಕ್ಲಾಸ್

0

ಸರಕಾರಿ ಬಸ್ ಚಾಲಕ-ನಿರ್ವಾಹಕರಿಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಕ್ಲಾಸ್

ಬೆಳಗಾವಿ: ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ದುರ್ಲಕ್ಷ ತೋರುವ ಸರಕಾರಿ ಬಸ್ ಚಾಲಕ-ನಿರ್ವಾಹಕರಿಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪಾಸ್ ಹೊಂದಿದ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡದ ಬಸ್ ಕಂಡಕ್ಟರ್ ಮತ್ತು ಡ್ರೈವರಗಳನ್ನು ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳಕರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಕ್ಷೇತ್ರದ ಗ್ರಾಮೀಣ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರಿ ಬಸಗಳು ನಿಲುಗಡೆಯಾಗದೇ ರೊಯ್ಯನೇ ಸಂಚರಿಸುವ ಬಗ್ಗೆ ಶಾಸಕಿ ಕೋಪಗೊಂಡಿದ್ದರು.

ಹಲವಾರು ಬಾರಿ ಸೂಚಿಸಿ ಮನವಿ ಮಾಡಿಕೊಂಡರೂ ಸರಕಾರಿ ಬಸಗಳು ನಿಲುಗಡೆಯಾಗದ ಹಿಂದಿನ ಉದ್ದೇಶವೇನು ಎಂದು ರಸ್ತೆಯಲ್ಲೇ ಬಸ್ ನಿಲ್ಲಿಸಿ ಶಾಸಕಿ ಡಾ. ಅಂಜಲಿ ನಿಂಬಾಳಕರ ತರಾಟೆಗೆ ತೆಗೆದುಕೊಂಡರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನತೆಗೆ ಕೈ ತೋರಿದಲ್ಲಿ ನಿಲ್ಲಿಸಿ ಮಾನವೀಯ ನೆಲೆಯಲ್ಲಿ ಅವರ ಜಾಗಕ್ಕೆ ತಲುಪಿಸಬೇಕೆಂದು ಶಾಸಕಿ ಡಾ. ಅಂಜಲಿ ನಿಂಬಾಳಕರ ತಾಕೀತು ಮಾಡಿದರು. ಬಸ್ ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿ & ದುರ್ವರ್ತನೆಯ ಬಗ್ಗೆ ಜನತೆ ಶಾಸಕಿ ಡಾ. ಅಂಜಲಿ ಅವರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು.///

The post ಸರಕಾರಿ ಬಸ್ ಚಾಲಕ-ನಿರ್ವಾಹಕರಿಗೆ ಶಾಸಕಿ ಡಾ. ಅಂಜಲಿ ನಿಂಬಾಳಕರ ಕ್ಲಾಸ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.