ಉತ್ತಮ ಸಮಾಜಕ್ಕಾಗಿ

ಸರಕಾರ ಹಠಾತ್ ಅವಧಿಪೂರ್ವ ವರ್ಗಾವಣೆ

0

 ಸರಕಾರ ಹಠಾತ್ ಅವಧಿಪೂರ್ವ ವರ್ಗಾವಣೆ

ಬೆಳಗಾವಿ: ಪ್ರಾಮಾಣಿಕ & ದಕ್ಷ ಆಡಳಿತಕ್ಕೆ ಒತ್ತು ಕೊಟ್ಟಿದ್ದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಸರಕಾರ ಹಠಾತ್ ಅವಧಿಪೂರ್ವ ವರ್ಗಾವಣೆ ಮಾಡಿದ್ದು ಕಾಣದ ರಾಜಕೀಯ ಕೈ ಹಿಂದೆ ಇರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿ ಆಗಿದ್ದ, ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಮಹಾಪ್ರಬಂಧಕರಾಗಿದ್ದ ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ಸರಕಾರ ಬೆಳಗಾವಿ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಿದೆ. ಎಸ್. ಜಿಯಾವುಲ್ಲಾ ಜಿಲ್ಲಾಧಿಕಾರಿಯಾಗಿ ಬರುವ ಮುಂಚೆಯೇ ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ಡಿಸಿ ಆಗಿ ತರಲು ಯತ್ನಿಸಿದ್ದ

ರಾಜಕೀಯ ವ್ಯವಸ್ಥೆ ಈಗ ಕೇಕೆ ಹಾಕಿದೆ. ನೇರ ಐಎಎಸ್ ಅಧಿಕಾರಿಗಳು ಲಭ್ಯ ಇರುವಾಗ, ಮೂಲತಃ ರಾಜ್ಯಸೇವೆಯ Conferred IAS ಅಧಿಕಾರಿಯನ್ನು ಹಠಾತ್ ಆಗಿ ನೇಮಕ ಮಾಡುವ ಹಿಂದಿನ ಸರಕಾರದ ಉದ್ದೇಶ ಏನು ಎಂಬ ಸಾರ್ವಜನಿಕ ಚರ್ಚೆ ಈಗ ವ್ಯಕ್ತವಾಗುತ್ತಿದೆ.

ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳನ್ನು ನೇಮಕ ಮಾಡಿ ದೊಡ್ಡ ಜಿಲ್ಲೆಯ ಆಡಳಿತದ ಹದ ತಪ್ಪಿಸುವ ದುಸ್ಸಾಹಸ ಸರಕಾರ ಮಾಡಿತೇ ಎಂಬುವುದು ಜನಮಾಸ ಚರ್ಚೆಯ ಭಾಗ.ಆಗ ವಿಫಲ; ಈಗ ಸಫಲ:ರಾಜಕೀಯ ಗುದ್ದಾಟದಲ್ಲಿ ಜಿಲ್ಲಾಧಿಕಾರಿಯ ವರ್ಗಾವಣೆಗೆ ಸಮ್ಮಿಶ್ರ ಸರಕಾರ ಮತ್ತು ಸಮನ್ವಯ ಸಮಿತಿ ಮುಂದೆ ರಾಜಕಾರಣಿಗಳು ಬೇಡಿಕೆ ಇಟ್ಟಿದ್ದ ಮಾಹಿತಿ ಈಗ ಹೊರಬಿದ್ದಿದೆ.

ಎಸ್. ಜಿಯಾವುಲ್ಲಾ ಜಿಲ್ಲಾಧಿಕಾರಿ ಆಗಿ ಬರುವ ಮುಂಚೆಯೇ ಎಸ್. ಬಿ. ಮೊಮ್ಮನಹಳ್ಳಿಯನ್ನು ಜಿಲ್ಲಾಧಿಕಾರಿಯಾಗಿ ವರ್ಷದ ಹಿಂದೆ ಅಂದು ತರಲು ಯತ್ನಿಸಿ ವಿಫಲರಾಗಿದ್ದವರು ಈಗ ಸಫಲರಾಗಿದ್ದಾರೆ ಎನ್ನಲಾಗುತ್ತಿದೆ. ಬೊಮ್ಮಾಯಿ ಆಪ್ತ ಕಾರ್ಯದರ್ಶಿಯಾಗಿದ್ದ ಬೊಮ್ಮನಹಳ್ಳಿ ಸಾಹೇಬರು ಎಲ್ಲ ನಾಯಕರೊಂದುಗೂ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ ಎನ್ನಲಾಗುವ ವಿಷಯ ಅವರ ಪ್ಲಸ್ ಪಾಯಿಂಟ್.

ಬೊಮ್ಮನಹಳ್ಳಿ ಅವರ ಬೆಳಗಾವಿ ಪೋಸ್ಟಿಂಗಗಾಗಿ ರಾಜಕೀಯ ನೇತಾರರ ದಂಡೇ ಹಿಂದೆ ನಿಂತಿದೆ ಎನ್ನಲಾಗಿದೆ.
ಐಜಿಪಿ ಸಹ ವರ್ಗ:ಉತ್ತರ ವಲಯದ ದಕ್ಷ ಐಜಿಪಿ; ಪುಂಡರ ಹೆಡೆಮುರಿ ಕಟ್ಟಿದ್ದ ಅಲೋಕಕುಮಾರ ಅವರನ್ನೂ ಸಹ ಸರಕಾರ ಬೆಂಗಳೂರು ನಗರ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ವರ್ಗಾಯಿಸಿದೆ.

News Belgaum-ಸರಕಾರ ಹಠಾತ್ ಅವಧಿಪೂರ್ವ ವರ್ಗಾವಣೆ 1ಬೆಂಗಳೂರು ಕಿಂಗ್ ಪಿನಗಳ ಅಟ್ಟಹಾಸ ತಹಬದಿಗೆ ತರಲು ಅಲೋಕಕುಮಾರ ಅ ವರನ್ನು ಬೆಂಗಳೂರಿಗೆ ವರ್ಗಾಯಿಸಿದ ಬಗ್ಗೆ ಚರ್ಚೆ ನಡೆದಿದ್ದರೂ ಅವರು ಬೆಳಗಾವಿ ಪೊಲೀಸ್ ರೇಂಜನಲ್ಲಿ ಸಿಂಹಸ್ವಪ್ನರಾಗಿದ್ದರು.

ಅಕ್ರಮ ಮರಳು ದಂಧೆ ಅವರು ಅಧಿಕಾರ ವಹಿಸಿಕೊಂಡ ದಿನದಂದೆ ಬಂದ್ ಆಗಿತ್ತು. ಬಿಜಾಪುರ ಜಿಲ್ಲೆಯ ನಕಲಿ ಎನಕೌಂಟರ್ ಹೊರಗೆಳೆದು ಆಗಲೇ ಪುಟ್ಟ ಪೊಲೀಸ್ ಅಧಿಕಾರಿಗಳು ಜೈಲು ಸೇರಿದ್ದರು, ದೊಡ್ಡವರ ಬಲೆ ಕೆಡವುವ ಮೊದಲೇ ಅಲೋಕಕುಮಾರ ಬೆಂಗಳೂರಿಗೆ ತೆರಳುವಂತಾಗಿದೆ.

The post ಸರಕಾರ ಹಠಾತ್ ಅವಧಿಪೂರ್ವ ವರ್ಗಾವಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.