ಉತ್ತಮ ಸಮಾಜಕ್ಕಾಗಿ

ಸರ್ಕಾರದ ಖಜಾನೆ ಭದ್ರವಾಗಿದೆ : ಮುಖ್ಯಮಂತ್ರಿ ಕುಮಾರಸ್ವಾಮಿ

0

The Treasury of the Government is secure - Chief Minister Kumaraswamy

ಸರ್ಕಾರದ ಖಜಾನೆ ಭದ್ರವಾಗಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಹಾಸನ ಸೆ. 20: ತಮ್ಮ ಸರ್ಕಾರ ಲೂಟಿ ಮಾಡಲು ನಿಂತಿಲ್ಲ ಖಜಾನೆ ಬದ್ರವಾಗಿದೆ ರಾಜ್ಯದ ಜನರ ಸಂಕಷ್ಠಗಳಿಗೆ ಹಣ ಕೂಡುದ್ದು ನೋವು ನಿವಾರಿಸುವ ಕಾರ್ಯ ಮಾಡತ್ತಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ತಾಲ್ಲೂಕು ಉದಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ರೀತಿಯ ಇತ್ತಡಗಳನ್ನು ನಿಭಾಯಿಸುತ್ತಲೇ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಹೇಗೆ ಕೊಂಡೋಯ್ಯಬೇಕೆಂಬುದು ತಮಗೆ ತಿಳಿದಿದೆ ಎಂದು ಹೇಳಿದರು.

ತಾವು ಅಧಿಕಾರದಲ್ಲಿರುವಷ್ಟು ದಿನ ಜನಸಾಮಾನ್ಯರ ಕಷ್ಟಗಳನ್ನು ದೂರಮಾಡಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಪಡಿಸಲು ಶಕ್ತಿಮೀರಿ ಪ್ತಯತ್ನಿಸುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಹುದ್ದೆಯಿಂದ ಪ್ರಧಾನ ಮಂತ್ರಿ ಸ್ಥಾನದ ವರೆಗೆ ಕಂಡಿರುವ ತಮ್ಮ ಕುಟುಂಬ ಅಧಿಕಾರಕ್ಕೆ ಎಂದೂ ಅಂಟಿಕೊಂಡಿಲ್ಲ. ತಮ್ಮ ತಂದೆಯವರ ಆದರ್ಶಗಳಿಗೆ ರಾಜಕೀಯ ಜೀವನದಲ್ಲಿ ಒಟ್ಟಾರೆ ಅಧಿಕಾರ ಅನುಭವಿಸಿದ ಕೇವಲ ನಾಲ್ಕೈದು ವರ್ಷಗಳು ಆದರೂ ಜನತೆ ಇಂದಿಗೂ ಅಪಾರ ಅಭಿಮಾನ ಇಟ್ಟು ಬೆಳೆಸಿದ್ದಾರೆ, ಉಳಿಸಿದ್ದಾರೆ. ಅವರ ಪ್ರೀತಿಯ ಖೂಣ ತೀರಿಸಬೇಕಿದೆ ಎಂದು ಮುಖ್ಯಮಂತ್ರಿಯವರು ಭಾವೂಕರಗಿ ನುಡಿದರು.

ಸಚಿವ ರೇವಣ್ಣ ಅವರ ಮೇಲೆ ಭೂ ಕಬಳಿಕೆ ಆರೋಪ ಕೇಳಿ ಬಂದ ತಕ್ಷಣವೇ ತಾವೂ ಜಿಲ್ಲಾಧಿಕಾರಿಯವರಿಂಧ ವರದಿ ಪಡೆದಿದ್ದು ಯಾವುದೇ ಆಕ್ರಮ ನಡೆದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು

ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ತಾವು ಪಣತೊಟ್ಟಿದ್ದು ಉದ್ಯೋಗ ಸೃಷ್ಠಿ, ಕೈಗಾರಿಕಾ ಅಭಿವೃದ್ಧಿಗೆ ಇತ್ತು ನೀಡುತ್ತಿದೆ ಎಂದ ಅವರು ರಾಜ್ಯದಲ್ಲಿ ಜಾತಿ ಮನೋಭಾವ ದೂರಗಬೇಕು ಅಭಿವೃದ್ಧಿಗೆ ಎಲ್ಲಾರ ಸಹಕಾರ ಅಗತ್ಯ. ರಾಜ್ಯ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕಿನಲ್ಲಿ ಸುಸ್ತಿ ಸಾಲ ಮತ್ತು ಸಹಕಾರ ಬ್ಯಾಂಕ್‍ನಲ್ಲಿ 1 ಲಕ್ಷ ರೂಪಾಯಿ ವರಗಿನ ಚಾಲ್ತಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದ ಅನುಷ್ಠಾನ ಕ್ರಮ ಚುರುಕಾಗಿದೆ 22 ವರ್ಷದ ಋಣಭಾರ ಇಳಿಸಿಯೇ ತೀರುವುದಾಗಿ ಹೇಳಿದರು.

ಈಗಾಗಿಲೇ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಸಾಲ ಮನ್ನಾ ಬಾಕಿ ತೀರಿಸಲಾಗಿದೆ. ಈಗಚಾಲ್ತಿ ಸಾಲ ಮತ್ತು ಸೆಪ್ಟೆಂಬರ್ ಅಂತ್ಯದ ವರೆಗಿನ ಮಾಸಿಕ ಕಂತನ್ನು ಪೂರ್ತಿ ಬಿಡುಗಡೆ ಮಾಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
ಹಾಸನ ತಮಗೆ ಜನ್ಮಾಕೊಟ್ಟ ಜಿಲ್ಲೆ ತಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿದ ಪೂಣ್ಯ ಭೂಮಿ ಕಳೆದ 10 ವರ್ಷಗಳಲ್ಲಿ ಕುಠಿತಗೊಂಡಿದ್ದ ಕಾಮಗಾರಿಗೆ ಈಗ ಚಾಲನೆ ದೊರೆತಿದೆ. ಸಚಿವರಾದ ರೇವಣ್ಣ ಅವರು ಈ ಬಗ್ಗೆ ಬಾರಿ ಉತ್ಸುಕರಾಗಿದ್ದು ತಾವು ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕರಿಸುವುದಾಗಿ ಹೇಳಿದರು.

ಸಹಕಾರ ಸಚಿವರ ನುಡಿ: ಸಹಕಾರ ಸಚಿವರಾದ ಬಂಡೆಪ್ಪಕಾಶಂಪುರ್ ಅವರು ಮಾತನಾಡಿ ದೇಶದಲ್ಲಿ ರಾಜ್ಯ ಸರ್ಕಾರದ ಸಾಲಮನ್ನಾ ವಿಚಾರ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕೆ ಬಂದ ಕೇವಲ 100 ದಿನಗಳ ಒಳಗೆ 40 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದರ ಜೊತೆಗೆ ತೀರುವಳಿಗೆ ಆದೇಶಗಳನ್ನು ಹೊರಡಿಸಲಾಗಿದೆ. ಇದೇ ರೀತಿ ಸಾಲ ಮನ್ನಾ ಘೋಷಣೆ ಇತರ ರಾಜ್ಯಗಳಲ್ಲಿ ಅದರ ಅನುಷ್ಠಾನ ಬಹಳ ವಿಳಂಬವಾಗಿದೆ ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಚುರುಕಾಗಿ ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳಿಗೆ ಮಾಜಿ ಪ್ರಧಾನಿ ದೇವೇಗೌಡರ ಸೇವೆಯನ್ನು ಸಚಿವ ಕಾಶಂಪುರ್ ಸ್ಮರಿಸಿದರು

ಲೋಕೋಪಯೋಗಿ ಸಚಿವರ ನುಡಿ: ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಡಿ ರೇವಣ್ಣ ಅವರು ಮಾತನಾಡಿ ಜಿಲ್ಲೆ ಉದ್ಘಾಟನೆಗೊಂಡ ಹಾಗೂ ಪ್ರಾರಂಭವಾಗಲಿರುವ ಯೋಜನೆಗಳು ರಸ್ತೆ ನೀರಾವರಿ ಶಿಕ್ಷಣ ರೈಲ್ವೆ ಮತ್ತಿತರ ಕಾಮಗಾರಿಗಳ ಬಗ್ಗೆ ವಿವರಿಸಿದರು ಹತ್ತು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿತ್ತು ಸಿಗದ ಲ್ಲಿ ಹಾಸನದ ಅಭಿವೃದ್ಧಿಯ ಪಥ ಹೇಗಿರಲಿದೆ ಎಂಬುದನ್ನು ಕಾದು ನೋಡಿ ಎಂದು ಸಚಿವರು ಹೇಳಿದರು

ಶಾಸಕರಾ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾದೇವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು, ಶಾಸಕರಾದ ಎ.ಟಿ. ರಾಮಸ್ವಾಮಿ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಮಾಜಿ ಶಾಸಕರಾದ ಹೆಚ್.ಎಸ್. ಪ್ರಕಾಶ್, ಸರ್ಕಾರದ ಕಾರ್ಯದಶಿಗಳಾದ ರಾಕೇಶ್ ಸಿಂಗ್, ಕೃಷ್ಣರೆಡ್ಡಿ, ಜಿಲ್ಲಾಧಿಕಾರಿಗಳು ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಉಪಧ್ಯಕ್ಷರಾದ ಸುಪ್ರದೀಪ್ ಯಜಮಾನ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಎ¸ಸ್.ಎನ್. ಪ್ರಕಾಶ್‍ಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ////

The post ಸರ್ಕಾರದ ಖಜಾನೆ ಭದ್ರವಾಗಿದೆ : ಮುಖ್ಯಮಂತ್ರಿ ಕುಮಾರಸ್ವಾಮಿ appeared first on Prajaa News.

Source link

ಸರ್ಕಾರದ ಖಜಾನೆ ಭದ್ರವಾಗಿದೆ : ಮುಖ್ಯಮಂತ್ರಿ ಕುಮಾರಸ್ವಾಮಿ

Leave A Reply

 Click this button or press Ctrl+G to toggle between Kannada and English

Your email address will not be published.