ಉತ್ತಮ ಸಮಾಜಕ್ಕಾಗಿ

ಸರ್ಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಬೆದರಿಕೆ ಹಾಕಿದಕ್ಕೆ ಮಾಳಮಾರುತಿ ಪೋಲಿಸ್ ಪ್ರಕರಣ ದಾಖಲಾಗಿದೆ

0

ಬೆಳಗಾವಿ: ನಿನ್ನೆಯ ದಿನ ದಿನಾಂಕ: 17/01/2017 ರಂದು ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜಾಪೂರ ಕಾಲನಿ, (ಉಜ್ವಲ ನಗರ) ನಾಲಾ ಪಕ್ಕದಲ್ಲಿ ಇಲಿಯಾಸ್ ಬಾಗಲಕೋಟೆ ಈತನು ಮಹಾನಗರ ಪಾಲಿಕೆಯಿಂದ ಅಧೀಕೃತವಾಗಿ ಕಟ್ಟಡ ಕಟ್ಟಲು ಪರವಾನಿಗೆಯನ್ನು ಪಡೆಯದೇ ಅನಧೀಕೃತವಾಗಿ ನಾಲಾ ಪಕ್ಕದ ರಸ್ತೆಯನ್ನು ಅತೀಕ್ರಮಿಸಿ ಕಟ್ಟಡವನ್ನು ನಿರ್ಮಿಸುತ್ತಿದ್ದಾಗ ಸಹಾಯಕ ಕಾರ್ಯಕಾರಿ ಅಭಿಯಂತರರು ಉತ್ತರ ಉಪ-ವಿಭಾಗ, 2, ಮಹಾನಗರ ಪಾಲಿಕೆ ಬೆಳಗಾವಿರವರಾದ ಶ್ರೀ. ರಮೇಶ ಶಿವನಗೌಡ ನ್ಯಾಮಗೌಡಾ ಮತ್ತು ಸಹಾಯಕ ಇಂಜಿನೀಯರ ಶ್ರೀ. ಕಿರಣ ಆರ್ ನಾಯಕ ಮತ್ತು ಕೆಲಸ ನಿರೀಕ್ಷಕ, ಶ್ರೀ. ಎಂ ಸಿ ಮೊದಗೇಕರ ಇವರೆಲ್ಲರೂ ಕಾಮಗಾರಿಯನ್ನು ಸ್ಥಗಿತಗೊಳಿಸಲು ತಿಳಿಸಿ ಹೇಳಿದರೂ, ಸ್ಥಳಕ್ಕೆ ಆಗಮಿಸಿದ ಇಲಿಯಾಸ ಬಾಗಲಕೋಟೆ ಇವರು ನಿಂದಿಸಿ, ಬೆದರಿಕೆ ಒಡ್ಡಿ, ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಕೆಲಸ ಮುಂದುವರೆಸುವಂತೆ ಪ್ರೋತ್ಸಾಹ ನೀಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಅಂತಾ ಶ್ರೀ. ರಮೇಶ ಶಿವನಗೌಡ ನ್ಯಾಮಗೌಡಾ ಇವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಫಿರ್ಯಾಧಿ ನೀಡಿದ್ದು, ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.