ಉತ್ತಮ ಸಮಾಜಕ್ಕಾಗಿ

ಸರ್ಕಾರಿ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಹೆಚ್.ಡಿ. ರೇವಣ್ಣ

0

ಸರ್ಕಾರಿ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಹೆಚ್.ಡಿ. ರೇವಣ್ಣ

ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡುತ್ತಿದೆ ಅದೇ ರೀತಿ ನೌಕರರ ಯೋಜನೆಗಳ ಸಾಮಾಜಿಕ ಕಾಳಜಿ ಮತ್ತು ಶ್ರದ್ದೆತಿಂದ ಶ್ರಮಿಸಬೆಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

ಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರು, ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು ನೌಕರರಿಗೆ ನಿವೇಶ ನೀಡುವ ಜತೆಗೆ ಕಡಿಮೆ ಬಡ್ಡಿದರದಲ್ಲಿ ಮನೆ ನಿರ್ಮಾಣಕ್ಕೆ ಸಾಲ ಕೊಡಿಸಲಾಗುವುದು ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ 8 ಸಾವಿರ ಸರ್ಕಾರಿ ನೌಕರರಿದ್ದು, ಅವರಿಗೆ ನಿವೇಶನ ಕೊಡಿಸಲು ಯೋಜನೆ ರೂಪಿಸಿದ್ದು, ನಗರ ಹೊರವಲಯದಲ್ಲಿ 600 ಎಕರೆ ಜಾಗ ಗುರುತಿಸಲಾಗಿದೆ. ರೈತರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಇದೀಗ ನೌಕರರ ಸಂಘವು ಛತ್ರ ಹಾಗೂ ಇತರ ಉದ್ದೇಶಗಳಿಗೆ ಜಮೀನು ಒದಗಿಸುವಂತೆ ಕೋರಿದೆ ಎಲ್ಲಾ ಬೇಡಿಕೆಯನ್ನು ಅಧ್ಯತೆ ಮೇರೆಗೆ ಪರಿಗಣಿಸಲಾಗುವುದು ಆದರೆ ನೌಕರರೂ ಸರ್ಕಾರದ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೆಚ್ಚಿನ ಕ್ರಮವಹಿಸಬೇಕು ಎಂದರು. 1985ರಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಸಮುದಾಯ ಭವನ ಹಾಗೂ 75 ನಿವೇಶನ ನೀಡಲಾಗಿತ್ತು.

ಜಿಲ್ಲೆಯ ಹತ್ತು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದ 1.45 ಲಕ್ಷ ಕುಟುಂಬಗಳಿಗೆ 500 ಕೋಟಿ ರೂ ರುಣಮುಕ್ತ ಪತ್ರವನ್ನು ನೀಡಲಾಗುವುದು. 22 ಲಕ್ಷ ಕುಟುಂಬಗಳ ರಾಷ್ಟ್ರೀಕೃತ ಬ್ಯಾಂಕ್ 36 ಸಾವಿರ ಕೋಟಿ ಸಾಲ ಮನ್ನಾ ತೀರುವಳಿ ಪತ್ರವನ್ನು ಶೀಘ್ರದಲ್ಲೆ ನೀಡಲಾಗುವುದು ಎಂದು ಸಚಿವರು ಹೇಳಿದರು. ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಎಲ್ಲಾ ಕಾರ್ಯಕ್ರಮಗಳಿಂದ ರಾಜ್ಯದ 50 ಲಕ್ಷ ಇದ್ದಕ್ಕಾಗಿ ಕುಟುಂಬಗಳು ಲಾಭ ಪಡೆಯಲಿವೆ ಎಂದು ಸಚಿವರು ಹೇಳಿದರು.

ರಾಜ್ಯ ಸರ್ಕಾರ ಸದೃಢವಾಗಿದೆ ಮುಖ್ಯಮಂತ್ರಿಯವರು ಈವರೆಗೆ ಕೈಗೊಂಡಿರುವ ಜನಪರ ಕಾರ್ಯವನ್ನು ಗಮನಿಸಲಿ. 30 ಜಿಲ್ಲೆಗಳಲ್ಲೂ ಸಮಗ್ರ ಅಭಿವೃದ್ದಿ ಯೋಜನೆಗಳ ಅನುಷ್ಠಾನ ಪ್ರಾರಂಭಿಸಲಾಗಿದೆ. ಕೃಷಿ, ನೀರಾವರಿ, ಶಿಕ್ಷಣ ಮೂಲಭೂತ ಸೌಕರ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಕಳೆದ ಹತ್ತು ವರ್ಷದಿಂದ ರಾಜ್ಯದಲ್ಲಿ ಶಾಲಾ ಕಾಲೇಜು ಕಟ್ಟಡ ಕಾಮಗಾರಿ ನಡೆದಿಲ್ಲ. 108 ಪಿಯು ಕಾಲೇಜುಗಳ ಕಟ್ಟಡ ನಿಮಾಣ/ದುರಸ್ಥೆಗೆ ಕ್ರಮ ಕೈಗೊಂಡಿದ್ದು, ವಾರದಲ್ಲಿ ಕೆಲಸ ಪ್ರಾರಂಭವಾಗಲಿದೆ. ಇದ್ದಕ್ಕಾಗಿ 1200 ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಎಂದರು.

ಶಿಕ್ಷಕರ ನೇಮಕಾತಿಗೂ ಕ್ರಮ ವಹಿಸಿದ್ದು, 5 ಸಾವಿರ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು, 4 ಸಾವಿರ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಒಂದು ಸಾವಿರ ಪ್ರೌಢಶಾಲೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದ ಎಲ್ಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸುಸಜ್ಜಿತ ಪ್ರಯೋಗಾಲಯದ ಅವಶ್ಯಕತೆಯಿದ್ದು, 50 ಕೋಟಿರೂ ಮೀಸಲಿರಿಸಲಾಗಿದೆ. ಸೆ. 23ಕ್ಕೆ ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಲಿದ್ದು ಹತ್ತಾರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಇನ್ನೊಂದು ಸರ್ಕಾರಿ ಎಂಜಿನಿಯರಿಂಗ್ ಹಾಗೂ ಮಹಿಳಾ ಪಾಲಿಟೆಕ್ನಿಕ್ ಪ್ರರಂಭಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಆದರ್ಶ ಶಾಲೆ ತೆರೆಯುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂಬುವುದು ತಮ್ಮ ಬಯಕೆ ಎಂದು ಸಚಿವ ರೇವಣ್ಣ ಹೇಳಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರಯೋಗಿವಾಗಿ ಬಿಎ, ಬಿ.ಕಾಂ, ಬಿ.ಎಸ್‍ಸಿ, ಬಿ.ಬಿ.ಎಂ ಕೋರ್ಸ್‍ಗಳ ವಸತಿ ಶಾಲೆ ಪ್ರರಂಬಿಸಲಾಗುವುದು. ಜತೆಗೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ 1 ರಿಂದ 7ನೇ ತರಗತಿ ವರೆಗೆ ಕೇಂದ್ರ ಪಠ್ಯ ಕ್ರಮ ಶಾಲೆ ಪ್ರಾರಂಭಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವ ರೇವಣ್ಣ ಹೇಳಿದರು. ಹಾಸನದಲ್ಲಿ 504 ಕೋಟಿ ರೂ ವೆಚ್ಚದ ಹಾಲಿನ ಡೈರಿ ಪ್ರಾರಂಭಿಸುವುದಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್.ಲಿಂಗೇಶ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮು, ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಮಾಲತೇಶ ವೈ.ಅಣ್ಣೇಗೇರಿ, ಸಿ.ಎಸ್.ಷಡಾಕ್ಷರಿ, ಎ.ಪುಟ್ಟಸ್ವಾಮಿ ಇದ್ದರು.  ///

WebTitle : ಸರ್ಕಾರಿ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಹೆಚ್.ಡಿ. ರೇವಣ್ಣ – Positive Response to Demands of Government Employees Says HD Revanna

>>> ಕ್ಲಿಕ್ಕಿಸಿ : Hassan News Kannada | Hassan News Today | Karnataka Politics News | Kannada Politics News

Kannada Politics News

The post ಸರ್ಕಾರಿ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಹೆಚ್.ಡಿ. ರೇವಣ್ಣ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.