ಉತ್ತಮ ಸಮಾಜಕ್ಕಾಗಿ

ಸರ್ವರೂ ನೆನೆಯುವ ವ್ಯಕ್ತಿತ್ವ ಬೆಳೆಸಿಕೊಳ್ಳಿ- ಜಿಲ್ಲಾಧಿಕಾರಿ ಎನ್.ಜಯರಾಮ

0

ಬೆಳಗಾವಿ:ಜ.21: “ನಿಮ್ಮ ಏಳ್ಗಗೆ ಕಾರಣರಾದ ಸರ್ವರನ್ನು ನೆನೆಸಿಕೊಳ್ಳುವಂಥ ಕರುಣಾಮಯಿ ವ್ಯಕ್ತಿತ್ವ ಬೆಳೆಸಿಕೊಳ್ಳಿ. ನಿಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನೇಕ ನಾಗರೀಕರ, ಸಹಯೋಗವಿರುತ್ತದೆ. ಎಲ್ಲರನ್ನೂ ಸೌಜನ್ಯದಿಂದ ಕಾಣಿರಿ” ಎಂದು ಜಿಲ್ಲಾಧಿಕಾರಿ ಶ್ರೀ.ಎನ್.ಜಯರಾಮ್ ಅವರು ಇಂದಿಲ್ಲಿ ಕರೆ ನೀಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‍ನಲ್ಲಿ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯುತ್ಸವ ಆಚರಣೆ ಅಂಗವಾಗಿ ಶುಕ್ರವಾರ ಜ.20 ರಂದು ಸಂಯೋಜಿಸಲಾಗಿದ್ದ “ಯುವ ಸಪ್ತಾಹ-2017”ದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ, ತಾಂತ್ರಿಕತೆಯ ದುರ್ಲಾಭ ಪಡೆದು ದಾರಿ ತಪ್ಪಬಹುದಾದ ಸಾಧ್ಯತೆಗಳಿದ್ದು, ಅಂತಹ ವಿಪತ್ತುಗಳಿಂದ ವಿದ್ಯಾರ್ಥಿಗಳನ್ನು ಸಂರಕ್ಷಿಸುವಲ್ಲಿ ಇಂತಹ ಸ್ಪರ್ಧೆಗಳು ಪ್ರೇರಣೆಯಾಗಿವೆ ಎಂದರು.
ನಗರದ ಎಲ್ಲ ಚಟುವಟಿಕೆಗಳಿಂದ ದೂರವಿರುವ ಬಸವನ ಕುಡಚಿಯಲ್ಲಿ ಪಾಲಿಟೆಕ್ನಿಕ್‍ನ್ನು ಸ್ಥಾಪಿಸುವಲ್ಲಿ ಶ್ರೀ.ಕೋಮಲಣ್ಣ ದೊಡ್ಡಣ್ಣವರ ಅಂಥ ದಾರ್ಶನಿಕರು ಸಮಯ ಪ್ರಜ್ಞೆ ತೋರಿರುವರು ಎಂದ ಅವರು ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಅದೃಷ್ಟವಂತರು ಎಂದು ಕೊಂಡಾಡಿದರು ಮತ್ತು ಸಂಸ್ಥಾಪಕರ ದೂರದೃಷ್ಟಿಯನ್ನು ಸ್ಮರಿಸಿದರು. “ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು” ಎಂದೂ ಹಾರೈಸಿದರು. ಜಾತಿ ಮತ ಪಂಥಗಳ ಬಂಧನದಿಂದ ಮೇಲೇರುವಂಥ ವೈಚಾರಿಕರಾಗಿರಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ವಿನೋದ ಎಸ್ ದೊಡ್ಡಣ್ಣವರ ಅವರು ಸ್ಪರ್ಧೆಗಳಲ್ಲಿ ವಿಜಯಿಗಳನ್ನು ಹಾರೈಸಿದರು ಮತ್ತು ಭರತೇಶ ಶಿಕ್ಷಣ ಸಂಸ್ಥೆಯು ನಡೆದು ಬಂದ ದಾರಿಯ ಸ್ಥೂಲ ಪರಿಚಯ ನೀಡಿದರು. ಸಮಾರಂಭದಲ್ಲಿ ಡಿ.ಟಿ.ದೇಸಾಯಿ, ಸದಸ್ಯರು ಬಿಇಟಿ, ಬಾಹುಬಲಿ ಬೋಗಾರ, ಸದಸ್ಯರು ,ಅಶೋಕ ಧನವಾಡೆ ಸದಸ್ಯರು ತಾಂತ್ರಿಕ ಸಲಹಾ ಮಂಡಳಿ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದ ಆರಂಭದಲ್ಲಿ ಪ್ರಾಚಾರ್ಯ ಎಸ್.ಎನ್.ತುಳಸಿಗೇರಿ ಸ್ವಾಗತ ಕೋರಿದರು, ಎಸ್.ಎಮ್.ದೇಸಾಯಿ, (ಉಪನ್ಯಾಸಕರು) ಸಮಾರಂಭ ನಡೆಸಿಕೊಟ್ಟರು. ಕೊನೆಯದಾಗಿ ವಿದ್ಯಾರ್ಥಿ ಪ್ರತಿನಿಧಿ ಕು.ಅಶೀಶ ಕುರಣೆ ವಂದಿಸಿದರು. ಸಿದ್ದಗೌಡ ಪಾಟೀಲ ಹಾಗೂ ಅಶೋಕ.ಬಿ (ವಿಭಾಗ ಮುಖ್ಯಸ್ಥರು) ಕಾರ್ಯಕ್ರಮ ಸಂಘಟನೆಯಲ್ಲಿ ಶ್ರಮ ವಹಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.