ಉತ್ತಮ ಸಮಾಜಕ್ಕಾಗಿ

ಸಾಠ್ ಸಾಲ ಕಿ ಭೀಮಾರಿ ‘ಕಾಂಗ್ರೆಸ್’ ಹಠಾವೊ: ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿ ಕರೆ

0

ಬೆಳಗಾವಿ (Tarun Kranti): ಐದು ವರ್ಷಗಳ ಕಾಲ ವ್ಯರ್ಥ ಅಧಿಕಾರ ಅನುಭವಿಸಿದ್ದೀರಿ ಇನ್ನೂ ತೊಲಗಿರಿ ಎಂದು ರಾಜ್ಯ ಕಾಂಗ್ರೆಸಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಕರೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ ಅಧಿಕಾರ ನಡೆಸಿದರೆ ಜನಜೀವನ ಅಭಿವೃದ್ಧಿ ಹೊಂದುತ್ತದೆ ಎಂದು ಚಿಕ್ಕೋಡಿ ಸಮಾವೇಶದಲ್ಲಿ ತಿಳಿಸಿದರು.

ರೈತರ ಅಗತ್ಯದ ರಸಗೊಬ್ಬರ ಒದಗಿಸುವಲ್ಲಿ ರಾಜಕೀಯ ಮಾಡುತ್ತಿದ್ದ ಕೇಂದ್ರ ಕಾಂಗ್ರೆಸ್ ಸರಕಾರದ ರೈತ ವಿರೋಧಿ ನಡೆಯನ್ನು ನಾನು ಪ್ರಧಾನಿ ಆದ ಮೇಲೆ ಸರಳಗೊಳಿಸಿದ್ದೇನೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿ ಭೇಟಿಗೆ ನಿಯೋಗ ಕೊಂಡೊಯ್ದು ಕೈಮುಗಿದು ಬೇಡಿಕೊಂಡರೂ ಸಮಸ್ಯೆಗಳ ಇತ್ಯರ್ಥವಾಗುತ್ತಿರಲಿಲ್ಲ. ರಾಜ್ಯ ಸರಕಾರ ರೈತರಿಗೆ ಅಗತ್ಯ ನೀರು ವಿದ್ಯುತ್ ಮತ್ತು ರಸಗೊಬ್ಬರದ ಅಗತ್ಯತೆ ಪೂರೈಸಿದೆಯೇ ಎಂದು ಪ್ರಶ್ನಿಸಿದರು.

ಸ್ವಾಮಿನಾಥನ್ ವರದಿಯನ್ನು ಕಾಂಗ್ರೆಸ್ ನೇತ್ರತ್ವದ ಕೇಂದ್ರ ಸರಕಾರ ಮುಚ್ಚಿಟ್ಟಿತ್ತು, ಬಿಜೆಪಿ ಸರಕಾರ ಸ್ವಾಮಿನಾಥನ್ ವರದಿ ಹೊರತೆಗೆದು ಅದರ ಜಾರಿಗೆ ಪ್ರಯತ್ನ ನಡೆಸಿದೆ ಎಂದರು. ಯೂರಿಯಾಗೆ ನೀಮ್ ಕೋಟಿಂಗ್ ಮಾಡಿ ರಸಗೊಬ್ಬರ ನಾವು ನೀಡಿದೆವು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ರಚಿಸಲಾಗಿದ್ದು ಅದು ಜಾರಿಯಲ್ಲಿದೆ. ರೈತರು ಇಂದು ಟ್ರಕ್, ಟ್ರ್ಯಾಕ್ಟರ್ ಮತ್ತಿತರ ಸುಧಾರಿತ ಉಪಕರಣಗಳ ಬಳಕೆ ಕಲಿತಿದ್ದಾರೆ. 14 ಲಕ್ಷಕ್ಕಿಂತ ಹೆಚ್ಚು ರೈತರು ಇಂದು ಫಸಲ್ ಭೀಮಾ ನೇರ ಸವಲತ್ತು ಪಡೆದಿದ್ದಾರೆ. ಕರ್ನಾಟಕ ಸರಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅದನ್ನು ಕಲ್ಯಾಣ ಕೆಲಸದ ರೂಪದಲ್ಲಿ ತೋರಿಸಲಿ. Minimum support prise ಕಬ್ಬಿನ ಬೆಳೆಗೆ ಕೊಡುವಂತೆ ಶಾಸನ ಬಿಜೆಪಿ ಹೊರಡಿಸಿದೆ ಎಂದರು.

‘ಸಾಠ್ ಸಾಲ್ ಕಿ ಭೀಮಾರಿ’ ಇಂದು ಜನತೆ ದೂರ ಮಾಡಬೇಕು. ದೇಶದ ಅಭಿವೃದ್ಧಿಗೆ ಜನ ತಮ್ಮ ಬಿಜೆಪಿಗೆ ಮತ ನೀಡಬೇಕು. ಯಡಿಯೂರಪ್ಪ ನಿಜವಾಗಿಯೂ ರೈತರ ನಾಯಕ, ರೈತರ ಏಳ್ಗೇಗೆ ಆತ ಮಾಡಿದ ಶ್ರಮ ಅಭಿನಂದನಾರ್ಹ. ಕಾಂಗ್ರೆಸ್ ಸೋಲುವ ಹಂತಕ್ಕೆ ಬಂದಾಗ ಅದರ ‘ಪೇ ರೋಲ್’ ನಾಯಕರು ನಾವೇ ಅಸೆಂಬ್ಲಿ ಗೆದ್ದು ಬರುತ್ತೇವೆ ಎಂದು ಸುಳ್ಳು ಹೇಳಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ತ್ರಿಶಂಕು ಸರಕಾರ ಬರುತ್ತದೆ ಎಂದು ಹೇಳುತ್ತ ತಿರುಗಾಡುತ್ತಿರುವ ಕಾಂಗ್ರೆಸ್ ಭಯಕ್ಕೆ ಈಡಾಗಿದೆ. ಬಿಜೆಪಿ ಏಕಮೇವ ಸರಕಾರ ರಚಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಜಗತ್ತಿನಾದ್ಯಂತ ಅಮೇರಿಕಾ, ಜರ್ಮನಿ, ಇಂಗ್ಲೆಂಡ್, ಲಂಕಾ ಎಲ್ಲೆಡೆ ಇಂದು ದೇಶದ ಹೆಸರು ಎತ್ತರದಲ್ಲಿದೆ ಅಲ್ಲವೇ ಎಂದು ಪ್ರಶ್ನಿಸಿ ದೇಶದ ಹೆಸರು ಉತ್ತುಂಗಕ್ಕೆ ಏರಲು ಮೋದಿ ಅಲ್ಲ ದೇಶದ ಜನತೆ ಕಾರಣ ಎಂದರು. ಮೋದಿ ಹಿಂದೆ ‘ಸವಾ ಸೌ ಕರೋಡ’ ಜನ ಇದ್ದಾರೆ ಎಂದು ಮೋದಿ ತಿಳಿಸಿದರು. ಮೋದಿ ಮಾತು ಮತ್ತು ತಿಳಿವಳಿಕೆ ಮಾತುಗಳಿಗೆ ಜನತೆ ಕರಡತಾನ ಮಾಡಿದರು.

ಡಾ. ಅಂಬೇಡ್ಕರ್ ದೇಶದ ಸಂವಿಧಾನ ಶಿಲ್ಪಿ. ಅವರು ಬರೆದ ಸಂವಿಧಾನವನ್ನು ಯಾರಪ್ಪನಿಗೂ ಬದಲಾಯಿಸಲು ಸಾಧ್ಯವಿಲ್ಲ. ಈ ಹಿಂದೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗೆ ಸ್ವತಃ ಡಾ. ಬಿ. ಆರ್. ಅಂಬೇಡ್ಕರ್ ಆಗಮಿಸಿದ್ದು ವಿಶೇಷ ಅಭಿಮಾನ ಮೂಡಿಸಿದೆ ಎಂದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.