ಉತ್ತಮ ಸಮಾಜಕ್ಕಾಗಿ

ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದ

0

ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದ

ಬೆಳಗಾವಿ: ₹500 ಸಾಲ ಪಡೆದು ಹಿಂದಿರುಗಿಸಲಾಗದ ವ್ಯಕ್ತಿಗೆ, ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದ ವಿಚಿತ್ರ ಪ್ರಸಂಗ ಬೆಳಕಿಗೆ ಬಂದಿದೆ.

ಸಾಲದ ರೂಪದಲ್ಲಿ ಪಡೆದ ₹500 ರೂಪಾಯಿ ತಿರುಗಿ ಕೊಡಲು ವಿಳಂಬ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಹೆಂಡತಿಯನ್ನೇ ತನ್ನೊಟ್ಟಿಗೆ ಕರೆದೊಯ್ದು ಮದುವೆ ಆಗಿರುವ ವಿಚಿತ್ರ ಘಟನೆಗೆ ಸಂಬಂಧಿಸಿ ಸಂತ್ರಸ್ತ ಪತಿರಾಯ ಜಿಲ್ಲಾಧಿಕಾರಿ ಕಚೇರಿ ಎದುರು ಅಳಲು ತೋಡಿಕೊಂಡಿದ್ದಾನೆ.

News Belgaum-ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದಬಸವರಾಜ ಕೋನನ್ನವರ ಎಂಬಾತನೇ ಪತ್ನಿ ಕಳೆದುಕೊಂಡ ಸಂತ್ರಸ್ತ ಪತಿರಾಯ! ಗೋಕಾಕ ತಾಲೂಕು ಮಿಡಕನಟ್ಟಿ ಗ್ರಾಮದ ರಮೇಶ ಹುಕ್ಕೇರಿ ಎಂಬಾತ ಈ ಕೃತ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾನೆ.
ಬೈಲಹೊಂಗಲ ತಾಲೂಕು ಮುರಕಿಭಾವಿ ಗ್ರಾಮದ ಬಸವರಾಜ ಕೋನನ್ನವರ ಎಂಬಾತನ ಪತ್ನಿ ಪಾರ್ವತಿಯ ಜೊತೆ ರಮೇಶ ಹುಕ್ಕೇರಿ ಈಗ ವಿವಾಹವಾಗಿದ್ದಾನೆ.

News Belgaum-ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದ 1ವಿಪರ್ಯಾಸ ಎಂದರೆ ರಮೇಶ ವಿವಾಹಿತನಾಗಿದ್ದು, ತನ್ನ ಮೊದಲ ಪತ್ನಿಯನ್ನು ತವರು ಮನೆಗೆ ಕಳುಹಿಸಿ, ಸಾಲ ಪಡೆದ ಸ್ನೇಹಿತನ ಪತ್ನಿ ಪಾರ್ವತಿಯ ಜತೆಗೆ ಸಂಸಾರ ಮಾಡುತ್ತಿದ್ದಾನೆ! ಪತ್ನಿ ಕಾಣೆಯಾಗಿರುವ ಬಗ್ಗೆ ಬಸವರಾಜ ಕೋಣನ್ನವರ ದೂರು ಕೊಡಲು ಮುಂದಾದರೂ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಬಸವರಾಜ ಆರೋಪಿಸಿದ್ದಾನೆ.

ಸಂತ್ರಸ್ತ ಬಸವರಾಜ ಕೋನನ್ನವರ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ತನ್ನ ಪತ್ನಿ ಬೇಕು ಎಂದು ಮೌನ ಪ್ರತಿಭಟನೆ ವ್ಯಕ್ತಪಡಿಸಿದ.

The post ಸಾಲ ಕೊಟ್ಟ ಆತನ ಸ್ನೇಹಿತನೇ, ಆತನ ಪತ್ನಿಯನ್ನು ಕರೆದೊಯ್ದು ಮದುವೆಯಾದ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.