ಉತ್ತಮ ಸಮಾಜಕ್ಕಾಗಿ

ಸಿಂಡಿಕೇಟ್ ಸದಸ್ಯತ್ವ ರದ್ದು ಮಾಡಲು ಪಟ್ಟು

0

ಸಿಂಡಿಕೇಟ್ ಸದಸ್ಯತ್ವ ರದ್ದು ಮಾಡಲು ಪಟ್ಟು

ಬೆಳಗಾವಿ ಆರ್ಸಿಯು ವಿವಿ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ್ರ ಸದಸ್ಯತ್ವ ರದ್ದುಗೊಳಿಸುವಂತೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ಕೋಮುವಾದ ಜಾತಿ ಏತರ ಭಾವನೆ ವಿದ್ಯಾರ್ಥಿಗಳಲ್ಲಿ ಸೃಷ್ಟಿಸುತ್ತಿದ್ದಾರೆ ಹಾಗೂ ದ್ವೇಷ ಹುಟ್ಟಿಸುತ್ತಿದ್ದಾರೆ ಎಂದು ರಾಜು ಚಿಕ್ಕನಗೌಡರ ಮೇಲೆ ಪ್ರತಿಭಟನಾಕಾರರು ಆರೋಪಿಸಿದರು .

ಇದೇ ವಿಚಾರವಾಗಿ ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು . ಇದೇ ವಿಚಾರವಾಗಿ ಮತ್ತೆ ಪ್ರತಿಭಟನಾಕಾರರು ಪ್ರತಿಭಟನೆಗೆ ಇಳಿಯಬಹುದು ಅಥವಾ ಇನ್ನಾವುದೇ ಇತರ ಘಟನೆ ನಡೆಯಬಹುದು ಎಂದು ಪೊಲೀಸ್ ಭದ್ರ ಕಾವಲು ಏರ್ಪಡಿಸಲಾಗಿತ್ತು .

News Belgaum-ಸಿಂಡಿಕೇಟ್ ಸದಸ್ಯತ್ವ ರದ್ದು ಮಾಡಲು ಪಟ್ಟು 2ಯಾವುದೇ ತರಹದ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು .
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ನಾವು ಯಾವುದೇ ಊಹಾಪೋಹಗಳ ಮಾತುಗಳಿಗೆ ಪ್ರತಿಭಟಿಸುತ್ತಿಲ್ಲ ಎಲ್ಲ ರೀತಿಯ ದಾಖಲೆಗಳ ಸಮೇತ ಪ್ರತಿಭಟನೆಗೆ ಇಳಿದಿದ್ದೇವೆ ಎಂದರು . ಅಲ್ಲದೆ ರಾಜ್ಯ ಸರ್ಕಾರ ಈ ಕೂಡಲೇ ಅವರ ಸದಸ್ಯತ್ವವನ್ನು ರದ್ದು ಕಳಿಸಬೇಕಾಗಿ ತಾಕೀತು ಮಾಡಿದರು .

 ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯಗಳ ಕಾನೂನು ಬಾಹಿರ ಅವರ ಸಿಂಡಿಕೇಟ್ ಸದಸ್ಯತ್ವ ಆಗಿರುವುದಾಗಿ ತಿಳಿಸಿ ಈ ಕೂಡಲೇ ಸದಸ್ಯತ್ವ ರದ್ದಿಗೆ ಪಟ್ಟು ಹಿಡಿದರು.

News Belgaum-ಸಿಂಡಿಕೇಟ್ ಸದಸ್ಯತ್ವ ರದ್ದು ಮಾಡಲು ಪಟ್ಟು 1ಇದೇ ವಿಚಾರವಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸುತ್ತಮುತ್ತ ಪ್ರತಿಭಟನೆ ನಡೆಯಬಹುದು ಎಂಬ ಉದ್ದೇಶದಿಂದ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು

The post ಸಿಂಡಿಕೇಟ್ ಸದಸ್ಯತ್ವ ರದ್ದು ಮಾಡಲು ಪಟ್ಟು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.