ಉತ್ತಮ ಸಮಾಜಕ್ಕಾಗಿ

ಸಿರಿಧಾನ್ಯ ಬಳಸಿ -ಆರೋಗ್ಯ ಉಳಿಸಿ ಕೃಷಿ ಮೇಳದ ಘೋಷ ವಾಕ್ಯ – ಕುಲಪತಿ : ಎಂ.ಬಿ. ಚಟ್ಟಿ

0

ಸಿರಿಧಾನ್ಯ ಬಳಸಿ -ಆರೋಗ್ಯ ಉಳಿಸಿ ಕೃಷಿ ಮೇಳದ ಘೋಷ ವಾಕ್ಯ – ಕುಲಪತಿ : ಎಂ.ಬಿ. ಚಟ್ಟಿ

ಧಾರವಾಡ : ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ ಘೋಷವಾಕ್ಯದೊಂದಿಗೆ ಕೃಷಿ ಮೇಳವನ್ನು ಇದೇ ತಿಂಗಳ ಸೆಪ್ಟೆಂಬರ್ ೨೨ ರಿಂದ ೨೫ ರ ವರೆಗೆ ಏರ್ಪಡಿಸಲಾಗಿದೆ ಎಂದು ನೂತನವಾಗಿ ಇಂದು ಬೆಳಿಗ್ಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಬಿ. ಚಟ್ಟಿ ಅವರು ತಿಳಿಸಿದರು.

ಅವರು ಇಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.

ದೇಶದಲ್ಲಿಯೇ ಮಾದರಿ ಕೃಷಿ ವಿಶ್ವವಿದ್ಯಾಲಯವಾಗಿದೆ. ಸೆ.೨೨ ರಂದು ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಬೀಜಮೇಳ ಉದ್ಘಾಟಿಸುವರು. ಸೆ.೨೩ ರಂದು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಮೇಳವು ಉದ್ಘಾಟಿಸುವರು. ಕೃಷಿ ಸಚಿವರಾದ ಎನ್.ಹೆಚ್. ಶಿವಶಂಕರರೆಡ್ಡಿ ಅವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಕೃಷಿ ಮೇಳದಲ್ಲಿ ಭಾಗವಹಿಸಲು ಸುಮಾರು ೬೦೦ ಮಳಿಗೆಗಳನ್ನು ಹೈಟೆಕ್, ಸಾಮಾನ್ಯ ಮತ್ತು ಯಂತ್ರೊಪಕರಣ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕೃಷಿಮೇಳದಲ್ಲಿ ಸುಮಾರು ೧೦ ರಿಂದ ೧೨ ಲಕ್ಷ ಜನ ರಾಜ್ಯ, ಹೊರರಾಜ್ಯಗಳಿಂದ ಬರಲಿದ್ದು, ರೈತರು, ಕೃಷಿ ತಜ್ಞರು, ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯವು ಹೈಡ್ರೊಪೆನಿಕ್ ಮತ್ತು ಏರೋಪೆನಿಕ್ ಆಧುನಿಕ ಪದ್ಧತಿ ಕೃಷಿಗೆ ಒತ್ತು ಕೊಡಲಿದ್ದು, ಹೆಚ್ಚಿನ ಪ್ರಚಾರ ಮಾಡಲಾಗುವುದು ಎಂದು ಕುಲಪತಿಗಳು ತಿಳಿಸಿದರು. ಸೆ.೨೨ ರಂದು ಡಾ, ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ, ಸೆ.೨೩ ರಂದು ಜಿಲ್ಲಾ ಮಟ್ಟದ ಕೃಷಿ ಹಾಗು ಶ್ರೆಷ್ಠ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಸಿಆರ್‌ಐ ಪಂಪ್ ಯುವ ಕೃಷಿಕ, ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಜರುಗುತ್ತದೆ.

ಸೆ.೨೪ ರಂದು ಬೆಳಗಾವಿ, ಬಾಲಕೋಟೆ, ಕಾರವಾರ, ವಿಜಯಪುರ ಜಿಲ್ಲೆಗಳ ರೈತರಿಗೆ ತಾಲೂಕು ಮಟ್ಟದ ಶ್ರೆಷ್ಠ ಯುವ ಕೃಷಿಕ ಹಾಗೂ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗುತ್ತದೆ.

ಸೆ.೨೫ ರಂದು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ರೈತರಿಗೆ ತಾಲೂಕು ಮಟ್ಟದ ಶ್ರೆಷ್ಠ ಯುವ ಕೃಷಿಕ ಹಾಗೂ ಯುವಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಏರ್ಪಡಿಸಲಾಗಿದೆ.

ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಸಿರಿಧಾನ್ಯಗಳ ಬೆಳೆ ಬೆಳೆಯುವುದಕ್ಕಾಗಿ ಹಾಗೂ ಬಳಕೆಗಾಗಿ ಹೆಚ್ಚು ಒತ್ತುಕೊಟ್ಟು ವಿಚಾರೋಷ್ಠಿ ನಡೆಯಲಿದೆ ಎಂದು ಕುಲಪತಿಗಳು ತಿಳಿಸಿದರು. ಹಾಗೂ ಕೃಷಿ ಮೇಳದಲ್ಲಿ ಕೃಷಿ ಯಂತ್ರೊಪಕರಣಗಳು, ಬೀಜ, ಗೊಬ್ಬರ, ತೋಟಗಾರಿಕಾ ಸಸಿ ಮಾರಾಟ ಮಳಿಗೆಗಳು ಸ್ಥಾಪಿಸಲಾಗಿದ್ದು, ಮತ್ಸö್ಯ, ಕೋಳಿ ಹಾಗೂ ಪಶುಗಳ ಮತ್ತು ಫಲಪುಷ್ಪಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕೃಷಿಕ ಸಮಾಜದ ಈಶ್ವರಚಂದ್ರ ಎಸ್. ಹೊಸಮನಿ, ಸುನೀಲ್ ಕುಮಾರ್ ಬೆಳಗಲಿ, ನಿಕಟಪೂರ್ವ ಕುಲಪತಿಗಳಾದ ಡಾ. ಬಸವರಾಜ ಹೆಚ್., ಡಾ. ಡಿ.ಪಿ. ಬಿರಾದಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೃಷಿಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.////

The post ಸಿರಿಧಾನ್ಯ ಬಳಸಿ -ಆರೋಗ್ಯ ಉಳಿಸಿ ಕೃಷಿ ಮೇಳದ ಘೋಷ ವಾಕ್ಯ – ಕುಲಪತಿ : ಎಂ.ಬಿ. ಚಟ್ಟಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.