ಉತ್ತಮ ಸಮಾಜಕ್ಕಾಗಿ

ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ

0

ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ

ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣ/ ಪುನಶ್ಚೇತನ ನೂತನ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಕಲಬುರಗಿಯಲ್ಲಿ ಚಾಲನೆ ನೀಡಿದರು.

Kalaburagi News Kannada

ಕಲಬುರಗಿ : ವಿಭಿನ್ನ ಸಂಸ್ಕೃತಿ, ವೇಷಭೂಷಣ ಹೊಂದಿರುವ ಬಂಜಾರಾ ಸಮುದಾಯವು ತನ್ನ ಸಂಪ್ರಾದಾಯಿಕ ಆಚಾರ ವಿಚಾರ, ಕಲೆ, ಸಂಪ್ರಾದಾಯವನ್ನು ಉಳಿಸಿಕೊಳ್ಳಲು ಹಾಗೂ ಸಮುದಾಯದ ಸಂತ ಆರಾಧ್ಯ ಗುರು ಸೇವಾಲಾಲರನ್ನು ಸಮೂಹವಾಗಿ ಆರಾಧಿಸಲು ಅನುವಾಗುವಂತೆ ವ್ಯವಸ್ಥಿತ ಕಟ್ಟಡ ಹೊಂದಿರುವ ರಾಜ್ಯದ 1500 ತಾಂಡಾಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣ/ ಪುನಶ್ಚೇತನ ನೂತನ ಯೋಜನೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ಕಲಬುರಗಿಯಲ್ಲಿ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಈ ನೂತನ ಯೋಜನೆಗೆ ಚಾಲನೆ ನೀಡಿದರು.

ಇದನ್ನೂ ಓದಿ >>> ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಜೈಲು ಸಿಎಂ ಖಡಕ್ ಎಚ್ಚರಿಕೆ

ರಾಜ್ಯದ 3373 ತಾಂಡಾಗಳ ಪೈಕಿ ಶೇಕಡಾ 45ರಷ್ಟು ತಾಂಡಾಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳಿರುವುದಿಲ್ಲ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ ಬಂಜಾರರರು ಪಾರಂಪರಿಕವಾಗಿ ಆಚರಿಸುತ್ತಾ ಬಂದಿರುವ ವಿಶಿಷ್ಠ ಶೈಲಿಯ ನೃತ್ಯ, ವಾಜಾ ಭಜನ್, ಆಚಾರ ಮತ್ತು ಆರಾಧನೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಗ್ರಾಮದಿಂದ ವಿಮುಖರಾಗಿರುವ ಈ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶ.

ಇದನ್ನೂ ಓದಿ >>>ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು

ಮುಂದಿನ ಮೂರು ವರ್ಷಗಳಲ್ಲಿ ಕ್ರಮವಾಗಿ 400, 500, 600 ಹೀಗೆ ಒಟ್ಟು 1500 ಸೇವಾಲಾಲ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ, ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಟ್ಟಾರೆ 112.50 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುತ್ತಿದ್ದು, ಪ್ರಸಕ್ತ 2018-19ನೇ ಸಾಲಿನಲ್ಲಿ 30 ಕೋಟಿ ಅನುದಾನ ಮೀಸಲಿರಿಸಿದೆ ಎಂದಿದ್ದಾರೆ.  ////

WebTitle : ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ – The project to build the Sevalala cultural center

>>> ಕರ್ನಾಟಕ ಕನ್ನಡ ನ್ಯೂಸ್ ಗಾಗಿ  ಕ್ಲಿಕ್ಕಿಸಿ ರಾಜಕೀಯ ವಿಭಾಗ  : Karnataka Politics News | Kannada Politics News | Kalaburagi News Online

Kannada Politics News

The post ಸೇವಾಲಾಲ ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.