ಉತ್ತಮ ಸಮಾಜಕ್ಕಾಗಿ

ಸ್ನೇಹ ಜೀವಿ ಟಿ.ಟಿ.ಮುರಕಟ್ನಾಳ ನಿಧನ – ತುಂಬಲಾರದ ನಷ್ಟ

0

ಸ್ನೇಹ ಜೀವಿ ಟಿ.ಟಿ.ಮುರಕಟ್ನಾಳ ನಿಧನ – ತುಂಬಲಾರದ ನಷ್ಟ

ಬೆಳಗಾವಿ: ಸ್ನೇಹ ಜೀವಿ ಟಿ.ಟಿ.ಮುರಕಟ್ನಾಳ ಅವರ ನಿಧನದಿಂದ ಜನಪರ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಶನಿವಾರದಂದು ನಗರದ ಹಸಿರು ಕ್ರಾಂತಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮುರಕಟ್ನಾಳ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಮುಖಂಡರುಗಳು ಹಾಗೂ ಅಭಿಮಾನಿಗಳು, ಟಿ.ಟಿ.ಮುರಕಟ್ನಾಳ ಉಪನ್ಯಾಸಕರ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಜನಪರ ಹೋರಾಟಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.

ರೈತರ ಪರ ಹೋರಾಟಗಳು, ಕನ್ನಡ ಪರ ಹೋರಾಟಗಳು, ಉತ್ತರ ಕರ್ನಾಟಕ ಹೋರಾಟಗಳು, ಕಳಸಾ ಬಂಡೂರಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಹೋರಾಟಗಳಿಗೆ ಶಕ್ತಿ ತುಂಬಿದ್ದರು.

ಇತ್ತೀಚೆಗೆ ಮಹಾದಾಯಿ ಬಗ್ಗೆ ನ್ಯಾಯಾಧೀಕರಣದ ತೀರ್ಪು ಅವರಿಗೆ ಸಂತೋಷ ತಂದಿತ್ತು. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಹೋರಾಟ ಇನ್ನು ಬಾಕಿ ಇದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎಂದು ನೆನಪಿಸಿದರು.

ವಯಕ್ತಿಕವಾಗಿ ಅವರು ತುಂಬ ಸರಳ, ಸೌಮ್ಯ ಮತ್ತು ಸ್ನೇಹ ಜೀವಿಗಳಾಗಿದ್ದರು. ತಾವು ದೊಡ್ಡ ನಾಯಕರೆಂದು ಬಿಂಬಿಸಿಕೊಂಡವರಲ್ಲ. ಎಲ್ಲರೊಂದಿಗೆ ಬೆರೆತು ಮತ್ತು ಎಲ್ಲರನ್ನು ಜೊತೆಗೂಡಿಸಿಕೊಂಡು ಹೋರಾಟ ಮಾಡುತ್ತಿದ್ದರು.

ಅಂತಹ ಸರಳ ಜೀವಿಗಳು ಸಿಗುವದು ಅಪರೂಪ. ಉತ್ತರ ಕರ್ನಾಟಕ ವಿಕಾಸ ವೇದಿಕೆಯು ಒಬ್ಬ ಹೋರಾಟಗಾರನೊಂದಿಗೆ ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತ ಪಡಿಸಿದರು.

ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ, ಕಲ್ಯಾಣರಾವ ಮುಚಳಂಬಿ, ಆರ್.ಎಸ್.ದರ್ಗೆ, ಸ.ರಾ.ಸುಳಕೋಡೆ, ಬಸವರಾಜ ಸುಣಗಾರ, ಎಂ.ಟಿ.ಪಾಟೀಲ, ಪ್ರವೀಣ ಪಾಟೀಲ, ಎಸ್.ಎಸ್.ಪಾಟೀಲ, ಕೃಷ್ಣರಾಜೇಂದ್ರ ತಾಳೂಕರ, ಬಿ.ಎಸ್.ಜಗಾಪೂರ ಮುಂತಾದವರು ಭಾಗವಹಿಸಿದ್ದರು.////

The post ಸ್ನೇಹ ಜೀವಿ ಟಿ.ಟಿ.ಮುರಕಟ್ನಾಳ ನಿಧನ – ತುಂಬಲಾರದ ನಷ್ಟ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.