ಉತ್ತಮ ಸಮಾಜಕ್ಕಾಗಿ

ಸ್ಮಶಾನ ಸ್ವಚ್ಛತೆಗೂ ಸೈ – ಸಮಾಜ ಸೇವೆಗೂ ಸೈ ಶ್ರೀ ಭೂಪಾಲ ಅಣ್ಣಾ

0

ಸ್ಮಶಾನ ಸ್ವಚ್ಛತೆಗೂ ಸೈ – ಸಮಾಜ ಸೇವೆಗೂ ಸೈ ಶ್ರೀ ಭೂಪಾಲ ಅಣ್ಣಾ

ನಾವಾಯಿತು ,ನಮ್ಮ ಕೆಲಸ ವಾಯಿತು, ನಾನು , ನನ್ನ ಸಂಸಾರ , ನನ್ನ ಮನೆ ಎಂಬ ಸ್ವಾರ್ಥ ಜೀವನಕ್ಕೆ ವಿಧಾಯ ಹೇಳಿ ಸಮಾಜ ಸೇವೆಗೆಂದೇ ಪೂರ್ಣ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ, ಶ್ರೀ ಭೂಪಾಲ ಅಣ್ಣಾ

ದೇಶಕಂಡ ಅಪ್ರತಿಮ ಪ್ರಧಾನಿ, ವಾಮನ ಮೂರ್ತಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಸೂಕ್ತಿಯಂತೆ. ತಮ್ಮ ಕೆಲಸ ಕಾರ್ಯವೈಕರಿಯಿಂದಲೆ ಮನೆ-ಮನಗಳಲ್ಲಿ ಅಚ್ಚಳಿಯದೆ, ಹಚ್ಚುಹಸುರಾದ ಚೇತನ.

ಪಾತಕಿಗಳನ್ನು ಲಾಹೋರ್ ಕಾಣುವಂತೆ ಬೆನ್ನಟ್ಟಿ ಹೊಡೆದ ಶಿಖಾರಿ . “ಜೈ ಜವಾನ ಜೈಕಿಸಾನ ” ಎಂಬ ಮಂತ್ರ ಪಠಿಸಿ ದೇಶಕ್ಕೆ ಸೂಕ್ತ ಪಥ ತೋರಿಕೊಟ್ಟು ಆದರ್ಶ ದಾಂಪತ್ಯ ನಡೆಸಿ, ಬಡವನಾಗಿ ಹುಟ್ಟಿ, ನಮ್ಮ ಹೆಮ್ಮೆಯ ಸಂವಿಧಾನದ ಸಮಾನಾರ್ಥವೆಂಬಂತೆ,

ಸಾಮಾನ್ಯ ಪ್ರಜೆಯೇ ರಾಷ್ಟ್ರಪ್ರಭುವಾದ, ಪ್ರತ್ಯಕ್ಷವಾಗಿದ್ದರೂ ಪ್ರಮಾಣೀಕೃತವಾದ ಪ್ರಜಾಪ್ರಭುತ್ವದ ಉದಾಹರಣೆ.

ಭಾರತದ ಮಾಜಿ ದಿವಂಗತ ಪ್ರಧಾನಿ ಶ್ರೀ ಲಾಲ್ ಬಹದ್ದೂರ ಶಾಸ್ತ್ರೀಜೀಯವರ ಜನ್ಮದಿನಾಚರಣೆಯ ಪ್ರಯುಕ್ತ ಅವರದೆಯಾದ ಶೈಲಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಜೇಡಗಲ್ಲಿ ಶಹಾಪೂರನವರಾದ ಸಾಮಾಜ ಸೇವಕ ಶ್ರೀ ಭೂಪಾಲ ಅಣ್ಣಾ  ಅವರಿಂದ “ಸ್ಮಶಾನದಲ್ಲಿ ಶ್ರಮದಾನ” ಹಮ್ಮಿಕೊಳ್ಳಲಾಗಿತ್ತು.

ಶಹಾಪೂರ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ ಅತ್ತು ಅವರ ಶ್ರಿಮತಿ.ಶಾಂತವ್ವಾ ಘೊಂಗಡಿ, ಶ್ರಿಮತಿ. ದ್ರಾಕ್ಷಾಯಣಿ ಈಟೆಕರ, ಶ್ರಿಮತಿ. ಪ್ರೇಮಾ ಬರಾಟಿ,ಶ್ರಿಮತಿ. ಮಹಾದೇವಿ ಬರಾಟಿ, ರಾಜಶ್ರಿ ದಯಣ್ಣವರ, ಶ್ರಿಮತಿ. ರತ್ನಾ ಚರಟೆ ಹಾಗೂ ತಂಡದೊಂದಿಗೆ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ ಶಾಸ್ತ್ರೀಜೀಯವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿಸಲು ಹಿಂದವಾಡಿ ಸ್ಮಶಾನದಲ್ಲಿ ಶ್ರಮದಾನವನ್ನು ಹಮ್ಮಿಕೊಂಡಿದ್ದರು.

ಸ್ಮಶಾನ ಎಂದರೆ ಮೂಗು ಮುರಿದು ಮುಖ ತಿರುವವರಿಗೆ ಕಿವಿ ಹಿಂಡುವಂತಿತ್ತು’. ಸ್ಮಶಾನಕ್ಕೆ ಅಂತಿಮ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಶೌಚ್ಯದ ಅನಾನೂಕೂಲತೆ ನಿಗಿಸಲು ಭೂಪಾಲ ಅಣ್ಣಾ ಅವರು ಸ್ವ-ಖರ್ಚಿನಲ್ಲಿ ಎರಡು ಸಿದ್ಧ ಶೌಚಾಲಯಗಳನ್ನು ಸ್ಮಶಾನ ಆಡಳಿತ ಮಂಡಳಿಗೆ ನಿಡಿದ್ದು ಇನ್ನಷ್ಟರಲ್ಲಿಯೇ ಆರಂಭಗೊಳ್ಳ ಬೇಕಿದೆ.

ಸ್ವಚ್ಛತೆಯ ಹೆಸರಿನಲ್ಲಿ ಮಾಲಿನ್ಯತೆ ಅಂಟಿಸಿಕೊಂಡು ಚಾಳಿಸು, ಕೋಲು, ಪೊರಕೆ, ಚರಕ, ಟೋಪಿ ಮುಂದಿಟ್ಟಕೊಂಡು ರಾಜಕೀಯ ಮಾಡುವವರಿಗೆ ಇವರ ನಡೆ ಅಣಕಿಸುವಂತೆ ಸದ್ದಿಲ್ಲದ ಕಾರ್ಯಕ್ರಮವೊಂದು ಜರುಗಿ ಸಾರ್ವಜನಿಕ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ////

The post ಸ್ಮಶಾನ ಸ್ವಚ್ಛತೆಗೂ ಸೈ – ಸಮಾಜ ಸೇವೆಗೂ ಸೈ ಶ್ರೀ ಭೂಪಾಲ ಅಣ್ಣಾ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.