ಉತ್ತಮ ಸಮಾಜಕ್ಕಾಗಿ

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ

0

ಬೆಳಗಾವಿ( news belgaum): ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ನಿರ್ವಹಣೆ ಹಾಗೂ ಅದರ ಬಳಕೆಗೆ ಈಗ ಕೋರಿಯಾ ಮೂಲದ ಕಂಪನಿ ಮುಂದೆ ಬಂದಿದ್ದು, ಇಂದು ಉತ್ತರ ಶಾಸಕ ಅನಿಲ ಬೆನಕೆ ಹಾಗೂ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರೊಂದಿಗೆ ಚರ್ಚೆ ನಡೆಸಿತು.

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ- Tarun kranti
ನಗರದ ಚವಾಟ ಗಲ್ಲಿ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಖಾಗಾ ಎನರ್ಜಿ & ಪಾಶ್ ಕಂ. ಲಿಮಿಟೆಡ್ ಕೋರಿಯಾ ಅಧಿಕಾರಿಗಳು ಭಾಗವಹಿಸಿದರು. ಚರ್ಚೆಯ ಪ್ರಾಥಮಿಕ ಮಾಹಿತಿ ಪ್ರಕಾರ ಮಹಾನಗರ ಪಾಲಿಕೆ ಜಾಗ & ನೀರು ಮಾತ್ರ ಕಂಪನಿಗೆ ಒದಗಿಸಬೇಕಿದೆ. ‘Waste to Energy Plant for Municipal Solid Waste’ ನಿರ್ವಹಣೆ ಕಂಪನಿ ಮಾಡುತ್ತಿದ್ದು ಕರೆಂಟ್ ಮತ್ತು ಇಟ್ಟಿಗೆಗಳನ್ನು ಸಹ ಇದರಿಂದ ತಯಾರಿಸಲಾಗುತ್ತದೆ.

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ- Tarun kranti 1
ಶಾಸಕ ಅನಿಲ ಬೆನಕೆ ಹಾಗೂ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಮಾತನಾಡಿ ಸ್ಮಾರ್ಟ್ ಸಿಟಿ ಬೆಳಗಾವಿಗೆ ಇಂತಹದೊಂದು ವ್ಯವಸ್ಥಿತ ಕಸ ನಿರ್ವಹನೆಯ ಮತ್ತು ಕಸದಿಂದ ಶಕ್ತಿ ಉತ್ಪಾದಿಸುವ ಕಂಪನಿ ಬೇಕಾಗಿತ್ತು. ಈಗ ಕೋರಿಯಾ ಮೂಲದ ಕಂಪನಿಯ ಪರಿಚಯವಾಗಿದೆ. ಒಣ ಹಾಗೂ ಹಸಿ ಕಸದ ಸಮರ್ಪಕ ಬಳಕೆ ಮಾಡುವುದು ಬೆಳಗಾವಿಗೆ ಅನಿವಾರ್ಯವಾಗಿದೆ.

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ- Tarun kranti 2
ತುರುಮುರಿ ಕಚಡಾ ಡಿಪೋದಿಂದ ನಾಗರಿಕರಿಗೆ ಮತ್ತು ಆಡಳಿತಕ್ಕೆ ಆದ ಅನಾನುಕೂಲ ಮತ್ತು ತೊಂದರೆ ನಾವೆಲ್ಲ ಮನಗಂಡಿದ್ದು, ವ್ಯವಸ್ಥಿತ ಕಂಪನಿ ಈಗ ಸಿಕ್ಕಂತಾಗಿದೆ. ಮುಂದಿನ ವಾರದಲ್ಲಿ ಜಿಲ್ಲಾ ಮಂತ್ರಿ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಎದುರು ಸದರಿ ಕಂಪನಿಯ ಬಗ್ಗೆ ಪ್ರಸ್ತಾಪ ಇಡಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ- Tarun kranti 4
ಜಿಲ್ಲಾಡಳಿತದ ಸಂಪೂರ್ಣ ಚರ್ಚೆಯ ನಂತರ ಕೋರಿಯನ್ ಕಂಪನಿಗೆ ಬೆಳಗಾವಿ ಕಸ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು ಎಂದು ಅನಿಲ ಬೆನಕೆ ತಿಳಿಸಿದರು.

ಸ್ಮಾರ್ಟ್ ನಗರ ಬೆಳಗಾವಿ ಕಸ ನಿರ್ವಹಣೆಗೆ ಇನ್ನೂ ಕೋರಿಯನ್ ಕಂಪನಿ!: ಅನಿಲ ಬೆನಕೆ- Tarun kranti 5

ಸಭೆಯಲ್ಲಿ ಕಸ ನಿರ್ವಹಣೆ ಯಂತ್ರದ ಪ್ರಸೆಂಟೇಶನ್ ನೀಡಲಾಯಿತು. ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಲೋಕೋಪಯೋಗಿ ಎಂಜಿನೀಯರ್ ಕುಲಕರ್ಣಿ & ಧರಣಿ ಬುಡಾ ಎಂಜಿನೀಯರ್ ಸಾಲಿಮಠ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.