ಉತ್ತಮ ಸಮಾಜಕ್ಕಾಗಿ

ಸ್ಮಾರ್ಟ ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಚಿವರ ನಿರ್ದೇಶನ

0

ಸ್ಮಾರ್ಟ ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ  ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಚಿವರ ನಿರ್ದೇಶನ

ಬೆಳಗಾವಿ, ಸ್ಮಾರ್ಟ ಸಿಟಿ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಶನಿವಾರ(ಅ.6) ಚಾಲನೆ ನೀಡಿದರು.
ಸ್ಮಾರ್ಟ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ರಸ್ತೆ ನಿರ್ಮಾಣ, ಕಣಬರಗಿ ಕೆರೆ ಅಭಿವೃದ್ಧಿ ಹಾಗೂ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶ್ರೀನಗರ ಉದ್ಯಾನದ ಬಳಿ ಭೂಮಿಪೂಜೆ ನೆರವೇರಿಸಿದ ಸಚಿವರು, ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ 30 ಕೋಟಿ ರೂಪಾಯಿ ವೆಚ್ಚದ್ಲಲಿ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕಣಬರಗಿ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭಕ್ಕೆ ಕೆರೆಯ ಆವರಣದಲ್ಲಿ ಪೂಜೆ ನೆರವೇರಿಸಿದರು.

ಸ್ಮಾರ್ಟ ರಸ್ತೆ ಕಾಮಗಾರಿ:

ಪ್ಯಾಕೇಜ್-1 ರ ಅಡಿಯಲ್ಲಿ 43.64 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮನಾಥ ಜಂಕ್ಷನ್ ರಸ್ತೆ, ಧರ್ಮಭವನ್ ರಸ್ತೆ ಹಾಗೂ ಧರ್ಮ ಮಾರ್ಗ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ.
ಅದೇ ರೀತಿ ಪ್ಯಾಕೇಜ್-2ರ ಅಡಿಯಲ್ಲಿ 43.58 ಕೋಟಿ ವೆಚ್ಚದಲ್ಲಿ ಶ್ರೀನಗರ ಹಾಗೂ ಆಚಿಜನೇಯ ನಗರದಲ್ಲಿ ಸ್ಮಾರ್ಟ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಅಚ್ಚುಕಟ್ಟಾದ ಪಾದಚಾರಿ ರಸ್ತೆ(ಫುಟ್‍ಪಾತ್), ಸೈಕಲ್ ಟ್ರ್ಯಾಕ್, ಎಲ್‍ಇಡಿ ಬೀದಿ ದೀಪಗಳು, ಚಿಹ್ನೆಗಳು, ಟೇಬಲ್ ಟಾಪ್ ಕ್ರಾಸಿಂಗ್, ಜಂಕ್ಷನ್ ಅಭಿವೃದ್ಧಿಪಡಿಸಲಾಗುತ್ತದೆ.

30 ಹಾಸಿಗೆ ಹೆರಿಗೆ ಆಸ್ಪತ್ರೆ:
ಸ್ಮಾರ್ಟ ಸಿಟಿ ಯೋಜನೆ ಅಡಿಯಲ್ಲಿ ನಾಗರಿಕರಿಗೆ ಉತ್ತಮ ಆರೋಗ್ಯ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ವಂಟಮುರಿಯ ಸಾಯಿಮಂದಿರದ ಎದುರಿಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.33 ಕೋಟಿ ರೂಪಾಯಿ ವೆಚ್ಚದಲ್ಲಿ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ.
24 ಗಂಟೆಗಳ ನಿರಂತರವಾಗಿ ಹೆರಿಗೆ ಸೌಲಭ್ಯ ಮತ್ತು ನವಜಾತು ಶಿಶುಗಳ ಆರೈಕೆ ಕೇಂದ್ರ ಒದಗಿಸುವುದು; ಕನ್ಸಲ್ಟಿಂಗ್ ಕೊಠಡಿ, ಅಲ್ಟ್ರಾಸೌಂಡ್ ಮತ್ತು ಸ್ಕ್ಯಾನಿಂಗ್ ಕೊಠಡಿಗಳು, ಹೆರಿಗೆ ವಾರ್ಡಗಳು, ನವಜಾತಶಿಶುಗಳ ತುರ್ತು ನಿಗಾ ಘಟಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಕಟ್ಟಡ ಹೊಂದಲಿದೆ.

ಕಣಬರಗಿ ಕೆರೆ ಅಭಿವೃದ್ಧಿ:

News Belgaum-ಸ್ಮಾರ್ಟ ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಚಿವರ ನಿರ್ದೇಶನ 110.40 ಎಕರೆ ವಿಸ್ತಾರವಾಗಿರುವ ಕಣಬರಗಿ ಕೆರೆಯನ್ನು 4.99 ಕೋಟಿ ರಊಪಾಯಿ ವೆಚ್ಚದಲ್ಲಿ ಅಭಿವೃದಿಪಡಿಸಲಾಗುತ್ತಿದೆ.
ಕೆರೆಯ ಸುತ್ತಲೂ ಪಾಥ್‍ವೇ ನಿರ್ಮಾಣ, ಬೇಲಿ ಹಾಕುವುದು, ಆಂಪಿಥೇಟರ್, ಮಕ್ಕಳ ಆಟಕ್ಕೆ ಸೌಲಭ್ಯಗಳನ್ನು ಒದಗಿಸುವುದು, ಟಿಕೆಟ್ ಕೌಂಟರ್, ಕಿಯೋಸ್ಕ್, ವೀಕ್ಷಣಾಗೋಪುರ ನಿರ್ಮಾಣ, ಶೌಚಾಲಯಗಳು, ಉದ್ಯಾನ ಅಭಿವೃದ್ಧಿ ಹೀಗೆ ಅನೇಕ ಕಾಮಗಾರಿಗಳನ್ನು ಇದು ಒಳಗೊಂಡಿದೆ.
ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ ಜಾರಕಿಹೊಳಿ ಅವರು, ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲದಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಅನಿಲ್ ಬೆನಕೆ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಉಪ ಮಹಾಪೌರರಾದ ಮಧುಶ್ರೀ ಪೂಜಾರಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶಶಿಧರ್ ಕುರೇರ್, ಪಾಲಿಕೆಯ ಸ್ಥಳೀಯ ಸದಸ್ಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

The post ಸ್ಮಾರ್ಟ ರಸ್ತೆಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಚಿವರ ನಿರ್ದೇಶನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.