ಉತ್ತಮ ಸಮಾಜಕ್ಕಾಗಿ

ಸ್ವಯಂ ಉದ್ಯೋಗ :ಅರ್ಜಿ ಆಹ್ವಾನ

0

ಸ್ವಯಂ ಉದ್ಯೋಗ :ಅರ್ಜಿ ಆಹ್ವಾನ

ಬೆಳಗಾವಿ,  2018-19ನೇ ಸಾಲಿನಲ್ಲಿ ಗ್ರಾಮೀಣ ವಿದ್ಯಾವಂತ ನಿರುದ್ಯೋಗಿ ಯುವಕ –ಯುವತಿಯವರಿಗೆ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನೆ ಯೋಜನೆಯಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ವೆಬ್‍ಸೈಟ http://cmegp.kar.nic.in ವಿಳಾಸದಲ್ಲಿ ಆನಲೈನ ಮುಖಾಂತರ ಅಕ್ಟೋಬರ್ 9 ರಿಂದ 13 ರವರೆಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿ ಪ್ರತಿಯನ್ನು ಅಗತ್ಯವಾದ ವಿಳಾಸದ ದಾಖಲೆ, ವಯಸ್ಸು, ವಿದ್ಯಾರ್ಹತೆ ದಾಖಲೆ, ಜಾತಿ ಪ್ರಮಾಣಪತ್ರ, ಆಧಾರ ಕಾರ್ಡ, ಜನಸಂಖ್ಯೆ ಪ್ರಮಾಣಪತ್ರ ಮತ್ತು ಯೋಜನಾ ವರದಿಯೊಂದಿಗೆ ನವೆಂಬರ್ 13 ರವರೆಗೆ ಸಂಬಂಧಿಸಿದ ಏಜನ್ಸಿಗಳಾದ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ, ಸಹಾಯಕ ನಿರ್ದೇಶಕರು, ಉಪವಿಭಾಗ, ಬೆಳಗಾವಿ, ಸಹಾಯಕ ನಿರ್ದೇಶಕರು, ಉಪವಿಭಾಗ, ಬೈಲಹೊಂಗಲ ಹಾಗೂ ಸಹಾಯಕ ನಿರ್ದೇಶಕರು, ಉಪವಿಭಾಗ, ಚಿಕ್ಕೋಡಿ ಮತ್ತು ಜಿಲ್ಲಾ ಅಧಿಕಾರಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಉದ್ಯಮಬಾಗ, ಬೆಳಗಾವಿ ಅಥವಾ ಬೆಳಗಾವಿ ಜಿಲ್ಲೆಯ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.
ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ, ಉದ್ಯಮಬಾಗ, ಬೆಳಗಾವಿ ಕಚೇರಿಯಲ್ಲಿ ವಿದ್ಯಾವಂತ ನಿರುದ್ಯೋಗಿ ಗ್ರಾಮೀಣ ಯುವಕ-ಯುವತಿಯರಿಗೆ ಅರ್ಜಿಯನ್ನು ತುಂಬಲು ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅರ್ಜಿದಾರರು ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು.
ಈ ಯೋಜನೆಯಲ್ಲಿ ಉತ್ಪಾದನಾ ಉದ್ದಿಮೆ ಸ್ಥಾಪಿಸಲು ಗರಿಷ್ಠ ರೂ.10 ಲಕ್ಷಗಳ ವರೆಗೆ ಮತ್ತು ಸೇವಾ ಉದ್ದಿಮೆ ಸ್ಥಾಪಿಸಲು ಗರಿಷ್ಠ ರೂ.5 ಲಕ್ಷಗಳ ವರೆಗೆ ಯೋಜನೆ ನಿಯಮಾನುಸಾರ ಸಾಲ/ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಸದರಿ ಉದ್ದಿಮೆಯನ್ನು 20,000 ಜನರಿಗಿಂತ ಕಡಿಮೆ ಜನ ವಸತಿ ಇರುವ ಪ್ರದೇಶದಲ್ಲಿ ಸ್ಥಾಪಿಸಬಹುದಾಗಿದೆ.

ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ವಯಸ್ಸು ಸಾಮಾನ್ಯ ವರ್ಗದವರಿಗೆ 18 ರಿಂದ 35 ವರ್ಷಗಳು, ವಿಶೇಷ ವರ್ಗದವರಿಗೆ ಗರಿಷ್ಠ 45 ವರ್ಷ ಆಗಿರತಕ್ಕದ್ದು. ಈ ಯೋಜನೆಯು ಹೊಸ ಘಟಕಗಳನ್ನು ಪ್ರಾರಂಭಿಸಲು ಇಚ್ಛಿಸುವ ಗ್ರಾಮೀಣ ನಿರುದ್ಯೋಗಿ ಯುವಕ/ಯುವತಿಯವರಿಗೆ ಮಾತ್ರ ಅನ್ವಯಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2440187/ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ,ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ 0831-2455067 ಹಾಗೂ ಸಹಾಯಕ ನಿರ್ದೇಶಕರು, ಉಪವಿಭಾಗ, ಬೆಳಗಾವಿ, ಸಹಾಯಕ ನಿರ್ದೇಶಕರು, ಉಪವಿಭಾಗ, ಚಿಕ್ಕೋಡಿ, ಸಹಾಯಕ ನಿರ್ದೇಶಕರು, ಉಪವಿಭಾಗ, ಬೈಲಹೊಂಗಲ ಮತ್ತು ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲೆಕೋಸಿನ ದುಂಡಾಣು ಕಪ್ಪು ಕೊಳೆ ರೋಗ ಮುಂಜಾಗ್ರತಾ ಕ್ರಮಗಳು
ಬೆಳಗಾವಿ,: ಮೊದಲಿಗೆ ಎಲೆಯ ಅಂಚಿನ ಭಾಗದಲ್ಲಿ ಹಳದಿ ಬಣ್ಣದ ಕೆಂದು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ರೋಗದ ತೀವ್ರತೆ ಜಾಸ್ತಿಯಾದಾಗ ಪೀಡಿತ ಎಲೆ ಭಾಗಗಳು ಒಣಗುತ್ತವೆ. ಎಲೆಯ ತೊಟ್ಟು ಮತ್ತು ಗಿಡದ ಕಾಂಡ ಕಪ್ಪುಬಣ್ಣಕ್ಕೆ ತಿರುಗುತ್ತವೆ. ರೋಗದ ಕೊನೆಯ ಹಂತದಲ್ಲಿ ರೋಗಾಣು ಗಿಡದ ಮೇಲಿನ ಭಾಗದಲ್ಲಿರುವ ಎಲೆಗಳಿಗೆ ಹರಡಿ, ಗಿಡವನ್ನು ಸಂಪೂರ್ಣ ನಾಶ ಮಾಡುತ್ತದೆ. ಈ ರೋಗವು ಕ್ಸ್ಯಾಂಥೋಮೊನಾಸ್ ಕ್ಯಾಂಪೆಸ್ಟಸ್ ಪಿವಿ, ಕ್ಯಾಂಪೆಸ್ಟಿಸ್ ಎಂಬ ದುಂಡಣುವಿನಿಂದ ಬರುತ್ತದೆ. ಈ ದುಂಡಾಣು ಗಿಡಗಳ ಅವಶೇಷಗಳ ಮೇಲೆ ಮತ್ತು ಬೀಜಗಳ ಮೇಲೆ ಜೀವಿಸುತ್ತವೆ.

ಹತೋಟಿ ಕ್ರಮಗಳು:
ಈ ರೋಗವು ಬಿತ್ತನೆ ಬೀಜದ ಮೂಲಕ ಹರಡುದರಿಂದ ಗುಣಮಟ್ಟದ, ಆರೋಗ್ಯವಂತ, ಧೃಡೀಕರಿಸಿದ ಬೀಜಗಳನ್ನು ಬಿತ್ತನೆಗೆ ಬಳಸುವುದು ಉತ್ತಮ, ಕೋನು ಗುಂಪಿಗೆ ಸೇರಿದ ತರಕಾರಿಗಳನ್ನು ಮೂರು ವರ್ಷದಲ್ಲಿ ಒಂದು ಸಾರಿ ಬೆಳೆಯಬೇಕು. ಬೀಜಗಳನ್ನು ಬಿತ್ತುವ ಮೊದಲು ಸ್ಟೆಪ್ಟೊಸೈಕ್ಲಿನ ಅಥವಾ ಸ್ಟಪ್ಟೊಮೈಸಿನ್ ಸಲ್ಫೇಟ್(0.5ಗ್ರಾಂ/ಕಿ.ಗ್ರಾಂ.ಬೀಜಕ್ಕೆ) ಲೇಪಿಸಿ ಬಿತ್ತನೆ ಮಾಡಬೇಕು.
ನಂತರ ಸಿಂಪಡಣೆಯಾಗಿ 0.5 ಗ್ರಾಂ ಸ್ಟಪ್ಟೊಮೈಸಿನ್ ಸಲ್ಫೇಟ್ ಮತ್ತು 2 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಅನ್ನು ಪ್ರತಿ ಲೀ.ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಎರಡನೇ ಸಿಂಪಡನೆಯಾಗಿ 0.2 ಮಿ.ಲಿ.ತೆತ್ರಸೈಕ್ಲಿನ್ ಹೈಡ್ರಾಕ್ಸೈಡ್ ಅಥವಾ 0.2 ಮಿ.ಗ್ರಾಂ ಅಗ್ರಿ ಮೈಸಿನ್ ಅನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

ಅ. 10 ರಂದು ಸ್ವಚ್ಛ ಭಾರತ ಮಿಷನ್ ವಿಶೇಷ ಜಾಗೃತಿ ಕಾರ್ಯಕ್ರಮ
ಬೆಳಗಾವಿ, ಧಾರವಾಡ ಮತ್ತು ವಿಜಯಪುರ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆ, ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ “ಸ್ವಚ್ಛ ಭಾರತ ಮಿಷನ್ (ನಗರ)” ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಮಹಾನಗರ ಪಾಲಿಕೆ ಮಹಾಪೌರರಾದ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಹಾನಗರ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಮಧುಶ್ರೀ ಪೂಜಾರಿ, ಪಾಲಿಕೆ ಸದಸ್ಯರಾದ ಮತೀನ ಶೇಖ್‍ಅಲಿ, ಪಾಲಿಕೆ ಆಯುಕ್ತರಾದ ಶಶಿಧರ ಕುರೇರ ಅವರು ಘನಉಪಸ್ಥಿತರಿರುವರು.
ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರಾರ್ಚಾಯರು ಮತ್ತು ಸಹ ನಿರ್ದೇಶಕರಾದ ಮಮತಾ ವಿ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪಾಲಿಕೆ ಆರೋಗ್ಯಾಧಿಕಾರಿ ಶಶಿಧರ್ ನಾಡಗೌಡ, ಪರಿಸರ ಅಭಿಯಂತರಾದ ಉದಯಕುಮಾರ ಬಿ.ಟಿ, ಪ್ರವೀಣ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿರುವರು.

ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಬೆಳಗಾವಿ, ಬೆಳಗಾವಿ ನಗರದಲ್ಲಿರುವ ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಯೋಧರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಬೆಳಗಾವಿ ಈ ಸಂಘವು ಕಳೆದ ಅನೇಕ ವರ್ಷಗಳಿಂದ ಕಾರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ನಿಯಮಗಳು 1960 ರನ್ವಯ ನಿಗದಿತವಾಗಿ ಸಲ್ಲಿಸಬೇಕಾದ ಯಾವುದೇ ರಿಟರ್ನಗಳನ್ನು ಇಲಾಖೆಗೆ ಸಲ್ಲಿಸಿರುವುದಿಲ್ಲ.

ಅಲ್ಲದೆ ಸದರಿ ಸಂಘವು ಭಾರತಿಯ ಸಂವಿಧಾನದ 97ನೇ ತಿದ್ದುಪಡಿಗನುಸಾರವಾಗಿ ತನ್ನ ಉಪವಿಧಿಗಳನ್ನು ತಿದ್ದುಪಡಿಮಾಡಿಕೊಂಡಿರುವುದಿಲ್ಲ. ಮಾಸಿಕ ಸಭೆ, ವಾರ್ಷಿಕ ಮಹಾಸಭೆಗಳನ್ನು ಜರುಗಿಸಿ ವರದಿಗಳನ್ನು ಸಲ್ಲಿಸಿರುವುದಿಲ್ಲ.
ಸಂಘದ ಪ್ರಸಕ್ತ ವಿಳಾಸ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇರುವುದರಿಂದ ಸದರಿ ಸಂಘದ ಕಾರ್ಯವೈಖರಿ ಕುರಿತು ಪರಿಶೀಲಿಸಲು ಪರಿಶಿಲನಾಧಿಕಾರಿಯನ್ನು ನೇಮಕ ಮಾಡಲಾಗಿ ಪರಿಶೀಲನಾಧಿಕಾರಿಯು ಸಂಘದ ನೋಂದಾಯಿತ ಸ್ಥಳದಲ್ಲಿ ಸ್ಥಾನಿಕವಾಗಿ ವಿಚಾರಿಸಲಾಗಿ ಸಂಘವು ಹಲವಾರು ವರ್ಷಗಳಿಂದ ತನ್ನ ಕಾರ್ಯ ನಿರ್ವಹಿಸದೇ ಅಸ್ತಿತ್ವದಲ್ಲಿ ಇರುವುದಿಲ್ಲವೆಂದು ತಿಳಿದು ಬಂದಿರುತ್ತದೆ.
ಕಾರಣ ಮಾನ್ಯ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಬೆಳಗಾವಿ ಪ್ರಾಂತ, ಬೆಳಗಾವಿ ಇವರು ಕಲಂ 72 ರಡಿ ಸಂಘದ ಸಮಾಪನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿರುತ್ತಾರೆ. ಆದಕಾರಣ ಸಂಘದ ಸಮಾಪನೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಅಭಿಪ್ರಾಯಪಡಲಾಗಿದೆ.
ಕ್ರಮಕ್ಕೆ ಯಾವುದೇ ಸದಸ್ಯರುಗಳ, ಪದಾಧಿಕಾರಿಗಳ, ಆರ್ಥಿಕ ಸಂಸ್ಥೆಗಳ ಆಕ್ಷೇಪಣೆಗಳೆನಾದರು ಇದ್ದರೆ, ಈ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಬೆಳಗಾವಿ ಉಪವಿಭಾಗ, ಜಕ್ಕೇರಿ ಹೊಂಡ, ರೈಲ್ವೆ ಓವರ ಬ್ರಿಜ್ ಹತ್ತಿರ ಬೆಳಗಾವಿ ಇವರಿಗೆ ಲಿಖಿತ ರೂಪದಲ್ಲಿ ತಿಳಿಸಲು ಸೂಚಿಸಲಾಗಿದೆ.
ಇಲ್ಲವಾದಲ್ಲಿ ಸಂಘದ ಸಮಾಪನೆಗೆ ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧರು, ಬೆಳಗಾವಿ ಉಪವಿಭಾಗ, ಬೆಳಗಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಸ್ವಯಂ ಉದ್ಯೋಗ :ಅರ್ಜಿ ಆಹ್ವಾನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.