ಉತ್ತಮ ಸಮಾಜಕ್ಕಾಗಿ

ಹಳ್ಳಕ್ಕೆ ಬಿದ್ದ ಲಾರಿ ಚಾಲಕ ಕ್ಲೀನರ್ ಗಾಯ

0

ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ರಸ್ತೆ ಪಕ್ಕದ ಹಳ್ಳಕ್ಕೆ ಮಗುಚಿ ಬಿದ್ದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಸಮುದ್ರವಳ್ಳಿಯ ಚಾಲಕ ಪ್ರದೀಪ್ ಮತ್ತು ಕ್ಲೀನರ್ ಅರವಿಂದ ಲಾರಿಯ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ.

ಈ ಲಾರಿಯು ಬೆಂಗಳೂರಿನಿಂದ ಹಾಸನಕ್ಕೆ ಬಣ್ಣ ಸೇರಿದಂತೆ ಅಂಗಡಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿತ್ತು.

ನಿದ್ದೆಯಲ್ಲಿ ಚಾಲಕ ವಾಹನವನ್ನು ರಸ್ತೆ ಪಕ್ಕ ಚಲಾಯಿಸಿದ. ಬಸ್‌ ಪಕ್ಕದ ಹಳ್ಳಕ್ಕೆ ಉರುಳಿತು.

ರಾಷ್ಟ್ರೀಯ ಹೆದ್ದಾರಿಯ ತುರ್ತುವಾಹನದ ಸಿಬ್ಬಂದಿ ಕ್ರೇನ್‌ ಬಳಸಿ, ಗಾಯಾಳುಗಳನ್ನು ಹೊರಕ್ಕೆ ತೆಗೆದರು.

ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.[ category hassan news ]

The post ಹಳ್ಳಕ್ಕೆ ಬಿದ್ದ ಲಾರಿ ಚಾಲಕ ಕ್ಲೀನರ್ ಗಾಯ appeared first on Prajaa News.

Source link

ಹಳ್ಳಕ್ಕೆ ಬಿದ್ದ ಲಾರಿ ಚಾಲಕ ಕ್ಲೀನರ್ ಗಾಯ

Leave A Reply

 Click this button or press Ctrl+G to toggle between Kannada and English

Your email address will not be published.