ಉತ್ತಮ ಸಮಾಜಕ್ಕಾಗಿ

ಹಸಿರಿಂದ ಕಂಗೊಳಿಸಿದ ಖಾನಾಪುರ ಡಬಲ್ ರೋಡ್

Khanapur double road with greenery

0

ಬೆಳಗಾವಿ: ( news belgaum) ಇತ್ತೀಚೆಗೆ ಚತುಷ್ಪದ ರಸ್ತೆಯಾಗಿ ಅಭಿವೃದ್ಧಿಗೊಂಡ ಥರ್ಡ್ ಗೇಟನಿಂದ ಪೀರಣವಾಡಿ ಕ್ರಾಸ್ ವರೆಗೆ ರಸ್ತೆ ಬದಿ ಹಸಿರೀಕರಣಕ್ಕೆ ಶಾಸಕ ಅಭಯ ಪಾಟೀಲ ಇಂದು ಚಾಲನೆ ನೀಡಿದರು. ನಂತರ ಮಾತನಾಡಿ ಈ ರಸ್ತೆಯ ಹಸಿರೀಕರಣದ ಜವಾಬ್ದಾರಿ ನಾವೇ ನೋಡಿಕೊಳ್ಳುತ್ತೇವೆ. ಕೈಗಾರಿಕೋದ್ಯಮಿಗಳು ಟ್ರೀ ಗಾರ್ಡ ದಾನ ಮಾಡಲಿದ್ದಾರೆ. ನಗರ ಹಸಿರೀಕರಣ ಪಣ ತೊಟ್ಟು ದುಡಿಯೋಣ ಎಂದು ಶಾಸಕ ಅಭಯ ಪಾಟೀಲ ಜನತೆಗೆ ಅಭಯ ನೀಡಿದರು.

ಹಸಿರಿಂದ ಕಂಗೊಳಿಸಿದ ಖಾನಾಪುರ ಡಬಲ್ ರೋಡ್- Tarun kranti
ಚೀಲದಲ್ಲಿ ಬೆಳೆಸಲಾದ ಬೃಹತ್ ಗಿಡಗಳನ್ನು ಪುಟಬಾತ್ ಅಕ್ಕಪಕ್ಕ ಹತ್ತು ಮೀಟರ್ ಅಂತರದಲ್ಲಿ ಹೊಳೆದಾಸವಾಳ, ಬಕುಳ(ರಂಜಲ), ಕಕ್ಕೆ, ಸಂಪಿಗೆ, ನೇರಳೆ ಸೇರಿದಂತೆ ಇತರ ಬೆರಳು ನೀಡುವ ಹೂವು ಬಿಡುವ 4500 ಗಿಡಗಳನ್ನು ‘ನಗರ ಹಸರೀಕರಣ ಯೋಜನೆ’ಯಡಿ ನೆಡುವ ಕಾರ್ಯ ಮಾಡಲಾಯಿತು.

DCF ಎಂ. ವಿ. ಅಮರನಾಥ, ಬೆಳಗಾವಿ ACF ಎಸ್. ಎಂ. ಸಂಗೊಳ್ಳಿ, ಬೆಳಗಾವಿ ನಗರ RFO ಶ್ರೀಕಾಂತ ಎಂ. ಕಡೋಲಕರ, DRFO ರಮೇಶ ಗಿರಿಯಪ್ಪನವರ,‌ ಗಾರ್ಡ ಶ್ರೀಕಾಂತ ದೇಸಾಯಿ, ಮೊಹಮ್ಮದ ವಿ. ಕಿಲ್ಲೇದಾರ ಇತರರು ಭಾಗವಹಿಸಿದರು.

ಹಸಿರಿಂದ ಕಂಗೊಳಿಸಿದ ಖಾನಾಪುರ ಡಬಲ್ ರೋಡ್- Tarun kranti
ನಗರ ಹಸಿರೀಕರಣ ಯೋಜನೆ:ಚೈತನ ಮಾಳ (ಚನ್ನಮ್ಮ ನಗರ), ಅಮಾನ ನಗರ ರೋಡ್(ಗಾಂಧಿ ನಗರ), ಅನಗೋಳ ಇಸ್ಲಾಮಿಯಾ ಸ್ಕೂಲ್, ಮಚ್ಚೆ ಮತ್ತು ಪೀರಣವಾಡಿ ಮಧ್ಯೆ ಕೆರೆ ಆವರಣ, ಕುವೆಂಪು ನಗರ ಮತ್ತು ಬಾಕ್ಸೈಟ್ ರಸ್ತೆ ಸೇರಿದಂತೆ ಇತರ ಪ್ರದೇಶಗಳು ಹಸೀರಿಕರಣಕ್ಕೆ ಒಳಗಾಗಲಿವೆ. ಮಾವು, ಹಲಸು, ಹೊಂಗೆ, ತಪಸಿ, ಸೀತಾಫಲ, ಸಂಪಿಗೆ, ಹೊಳೆದಾಸವಾಳ, ಬಕುಳ ಇತರ ಗಿಡ್ಳು ನಗರದಲ್ಲಿ ಬೆಳೆಯಲಿವೆ ಎಂದು ಎಸಿಎಫ್ ಸಂಗೊಳ್ಳಿ ತಿಳಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.