ಉತ್ತಮ ಸಮಾಜಕ್ಕಾಗಿ

ಹಾಸನ ನಗರದಲ್ಲಿ 40 ಕೋಟಿ ರೂಪಾಯಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

0

ಹಾಸನ ನಗರದಲ್ಲಿ 40 ಕೋಟಿ ರೂಪಾಯಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಜಿಲ್ಲಾಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಇಂದು ನಗರದಲ್ಲಿ ಸುಮಾರು 40 ಕೋಟಿ ರೂಪಾಯಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು.

1300 ಲಕ್ಷ ರೂಪಾಯಿ ವೆಚ್ಚದಲ್ಲಿ ಹಾಸನ ತಾಲ್ಲೂಕಿನ ಹಳೇಬೀಡು ಆನೆಚಾಕೂರು ರಸ್ತೆ ಸರಪಳಿ 21 ರಿಂದ 28.45 ಕಿ.ಮೀ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ (ರಿಂಗ್ ರಸ್ತೆಯಿಂದ ಎಂ.ಸಿ. ಎಫ್ ವರೆಗೆ),

10 ಕೋಟಿ ರೂ ವೆಚ್ಚದಲ್ಲಿ ಹಾಸನ ನಗರದ ಬಿ.ಎಂ ರಸ್ತೆಯಿಂದ ಹಬೀಬಿಯಾ ಸಾಮಿಲ್ ರಾಜ್ ಕುಮಾರ್ ನಗರ ಮಾರ್ಗ ರಿಂಗ್ ರಸ್ತೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ (ನಾಲ್ಕು ಪಥಧ ರಸ್ತೆ ನಿರ್ಮಾಣ),

ಹಾಸನ ತಾಲ್ಲೂಕು ಹಳೇಬೀಡು ಆನೆಚಾಕೂರು ರಸ್ತೆ ಸಪಳಿ 28.45 ರಿಂಧ 30.50 ಕಿ.ಮೀ ವರೆಗೆ ರಸ್ತೆ ಅಭಿವೃದ್ದಿ ಕೆಲಸ (ಸರಸ್ವತಿ ದೇವಸ್ಥಾನದಿಂದ ಗೊರೂರು ವೃತ್ತದ ವರೆಗೆ)

4 ಕೋಟಿ ರೂ ವೆಚ್ಚದಲ್ಲಿ ಬಾಗಲಕೋಟೆ ಬಿಳಿಗಿರಿರಂಗನಬೆಟ್ಟ ರಸ್ತೆ ಸರಪಳಿ 492.24 ರಿಂದ 494.34 ಕಿ.ಮಿ. ವರೆಗೆ ಅಭಿವೃದ್ಧಿ ಕೆಲಸ (ಎನ್ ಆರ್ ವೃತ್ತದಿಂದ ಎನ್ ಹೆಚ್ ಬೈಪಾಸ್ ವರೆಗೆ)

5 ಕೋಟಿ ರೂ ವೆಚ್ಚದಲ್ಲಿ ಹಾಸನ ನಗರದ ಪ್ರಸ್ತುತ ನಾಲ್ಕು ಪಥದ ರಸ್ತೆ ಡೈರಿ ವೃತ್ತದಿಂದ ಮಾರ್ಗ ಸಾಲಗಾಮೆ ರಸ್ತೆಯಿಂದ ಬಿಬಿ ರಸ್ತೆ ಸೇರುವ ರಸ್ತೆ ಲಿ.ಮಿ. 0 ರಿಂದ 3.18 ಕಿ.ಮಿ. ರವರೆಗೆ ಅಭಿವೃದ್ದಿ ಹಾಗೂ ಮರು ಡಾಂಬರೀಕರಣ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರೆವೇರಿಸಿದರು.

ಕಾಮಗಾರಿಗಳೀಗೆ ಪ್ರತ್ಯೇಕ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು ಎಲ್ಲಾ ಕಡೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಕಾಮಗಾರಿಗಳು ಶೀಘ್ರವೆ ಚಾಲನೆ ದೊರೆಯಲಿವೆ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯವನ್ನಾಗಿ ಮಾಡಲಾಗುವುದು- ಹಾಸನ ಬೆಂಗಳೂರು ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ವಸತಿ ಹೀನರಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಲಾಗುವುದು. ಹಾಸನ ನಗರದಲ್ಲಿ ವಸತಿ ರಹಿತರನ್ನು ಗುರುತಿಸಿ ಎಲ್ಲಾರಿಗೂ ನಿವೇಶನ/ಆಶ್ರಯ ಮನೆಗಳನ್ನು ದೊರೆಕಿಸಿಕೊಡುವುದು. ಎಲ್ಲಾ ಜನವರ್ಗದ ಅಭಿವೃದ್ದಿ ತಮ್ಮ ಆದ್ಯತೆಯಾಗಿದೆ ಎಂದ ಅವರು ಹೇಳಿದರು.

ಅರಸೀಕೆರೆ ಶಾಸಕಾರದ ಕೆ.ಎಂ. ಶಿವಲಿಂಗೇಗೌಡ, ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕಾರದ ಹೆಚ್.ಎಸ್. ಪ್ರಕಾಶ್, ನಗರ ಸಭೆ ಅಧ್ಯಕ್ಷರಾದ ಹೆಚ್.ಎಸ್. ಅನಿಲ್, ವಿವಿಧ ವಾರ್ಡ್‍ಗಳ ನಗರಸಭೆ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ////

WebTitle : ಹಾಸನ ನಗರದಲ್ಲಿ 40 ಕೋಟಿ ರೂಪಾಯಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ – 40 crore road development works in Hassan city

>>> ಕ್ಲಿಕ್ಕಿಸಿ :  Hassan News Kannada | Hassan News Today | Karnataka Politics News | Kannada Politics News

Kannada Politics News

The post ಹಾಸನ ನಗರದಲ್ಲಿ 40 ಕೋಟಿ ರೂಪಾಯಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.